Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನಿದ್ರಾಹೀನತೆಯ ಬಗ್ಗೆ ಕೆಲ ತಪ್ಪು ಕಲ್ಪನೆಗಳು!

ಆದರೆ ಜನರು ಅದರ ಬಗ್ಗೆ ಹೆಚ್ಚು ಗಮನ ಕೊಡದೆ ನಿದ್ರಾ ಹೀನತೆಗೆ ತಮ್ಮದೇ ಆದ ಕೆಲವೊಂದು ಕಾರಣಗಳನ್ನು ಕಂಡುಕೊಂಡಿರುತ್ತಾರೆ. ಆ ಕಾರಣಗಳಿಂದ ನಿದ್ದೆ ಬರುತ್ತಿಲ್ಲ ಎಂದು ಯೋಚಿಸುತ್ತಾರೆ. ಆದರೆ ಅನೇಕ ಬಾರಿ ಆ ಕಾರಣಗಳಲ್ಲದೆ ಬೇರೆ ಯಾವುದೋ ಕಾರಣದಿಂದ ನಿದ್ರಾಹೀನತೆ ಉಂಟಾಗಿರುತ್ತದೆ.
ನಿದ್ರಾಹೀನತೆ ಸಮಸ್ಯೆ ಬಗ್ಗೆ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಗಳೇನು ಮತ್ತು ಯಾವ ಕಾರಣಗಳಿಂದ ನಿದ್ರಾ ಹೀನತೆ ಸಮಸ್ಯೆ ಕಂಡು ಬರಬಹುದು ಎಂದು ನೋಡೋಣ ಬನ್ನಿ.
1. ಮಾನಸಿಕ ಒತ್ತಡದಿಂದಾಗಿ ನಿದ್ದೆ ಬರುತ್ತಿಲ್ಲ ಎಂದು ಹೆಚ್ಚಿನವರು ಭಾವಿಸುತ್ತಾರೆ. ನಿದ್ದೆ ಬರದಿರುವುದಕ್ಕೆ ವಿಪರೀತ ಮಾನಸಿಕ ಒತ್ತಡ ಕೂಡ ಒಂದು ಕಾರಣ. ಆದರೆ ಅದೊಂದೇ ಕಾರಣದಿಂದ ನಿದ್ರಾಹೀನತೆ ಉಂಟಾಗುತ್ತದೆ ಎಂದು ಭಾವಿಸುವುದು ತಪ್ಪು. ಏಕೆಂದರೆ ಕೆಲವೊಂದು ದೈಹಿಕ ತೊಂದರೆ ಇದ್ದರೆ ಕೂಡ ನಿದ್ರಾ ಹೀನತೆ ಕಂಡುಬರುವುದು. ಆ ರೀತಿಯ ತೊಂದರೆ ಮೊದಮೊದಲು ಗೊತ್ತಾಗುವುದಿಲ್ಲ, ಆದ್ದರಿಂದ ನಿದ್ದೆ ಸರಿಯಾಗಿ ಬರದಿದ್ದರೆ ವೈದ್ಯರನ್ನು ಕಾಣುವುದು ಒಳ್ಳೆಯದು.
2. ಕೆಲವರು ನಿದ್ದೆ ಸರಿಯಾಗಿ ಬರದಿದ್ದರೆ ಆಲ್ಕೋಹಾಲ್ ತೆಗೆದುಕೊಳ್ಳುವುದು, ನಿದ್ದೆ ಮಾತ್ರೆ ಸೇವಿಸುವುದು ಮಾಡುತ್ತಾರೆ. ನಿದ್ರಾ ಹೀನತೆಗೆ ಈ ರೀತಿ ಮಾಡುವುದು ಖಂಡಿತ ಪರಿಹಾರವಲ್ಲ. ಈ ಚಟಗಳು ದೇಹದ ಸ್ಥಿತಿಯನ್ನು ಮತ್ತಷ್ಟು ಶೋಚನೀಯ ಮಾಡುತ್ತದೆ. ಆದ್ದರಿಂದ ವೈದ್ಯರ ಸಲಹೆ ಮೇರೆಗೆ ನಿದ್ರಾಹೀನತೆಗೆ ಪರಿಹಾರ ಕಂಡುಕೊಳ್ಳುವುದು ಒಳ್ಳೆಯದು.
3. ಮತ್ತೆ ಕೆಲವರು ನಿದ್ದೆ ಬರದಿದ್ದರೂ ಅದರ ಬಗ್ಗೆ ತಲೆ ಕೆಡಿಸುವುದಿಲ್ಲ, ಮತ್ತೆ ಕೆಲವರು ತುಂಬಾ ಕಡಿಮೆ ಅವಧಿ ನಿದ್ದೆ ಮಾಡುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಈ ರೀತಿ ಮಾಡಿದರೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಹದಕೆಡುತ್ತದೆ. ಒಬ್ಬ ವ್ಯಕ್ತಿ ಆರೋಗ್ಯಕರವಾಗಿರಲು 8 ಗಂಟೆಗಳ ನಿದ್ದೆ ಅವಶ್ಯಕ. ಕಡಿಮೆ ಅಂದರೂ 6 ಗಂಟೆಗಳ ಕಾಲವಾದರೂ ನಿದ್ದೆ ಮಾಡಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
