Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಮಳೆಗಾಲದಲ್ಲಿ ಆರೋಗ್ಯ ರಕ್ಷಣೆ ಹೇಗೆ?

ಹೊರಗಡೆ ತಿನ್ನದಿರುವುದು: ಬೀದಿ ಬದಿಯ ತಿಂಡಿಗಳನ್ನು ಈ ಸಮಯದಲ್ಲಿ ಆದಷ್ಟು ತಿನ್ನದಿರುವುದು ಒಳ್ಳೆಯದು. ಆದರೆ ಮಳೆಗಾಲದಲ್ಲಿ ಇಂತಹ ತಿಂಡಿಗಳನ್ನು, ಕರಿದ ತಿಂಡಿಗಳನ್ನು ತಿನ್ನಬೇಕೆನಿಸುವುದು ಸಹಜ, ಆದರೆ ಈ ಬೀದಿ ಬದಿಯಲ್ಲಿರುವ ತಿಂಡಿಗಳಲ್ಲಿ ಬ್ಯಾಕ್ಟೀರಿಯಾಗಳು ಕೂರುವುದು ಹೆಚ್ಚು. ಡಯೆರಿಯಾ, ಕಾಲರ ಮುಂತಾದ ರೋಗಗಳು ಕಶ್ಮಲ ನೀರು ಕುಡಿಯುವುದರಿಂದ ಬರುತ್ತದೆ, ಬೀದಿ ಬದಿಯ ಗಾಡಿಗಳಲ್ಲಿ ಸ್ವಲ್ಪ ನೀರು ಇಟ್ಟು ಅದರಲ್ಲಿಯೇ ಪ್ಲೇಟ್ ತೊಳೆದು ಮಸಾಲಪುರಿ, ಪಾನಿಪುರಿ ಕೊಡುತ್ತಿರುತ್ತಾರೆ. ಇಂತಹ ತಿಂಡಿಗಳನ್ನು ತಿಂದರೆ ಕಾಯಿಲೆ ಬರುವ ಸಾಧ್ಯತೆ ಹೆಚ್ಚು.
ಹಸಿರು ಮತ್ತು ಬಣ್ಣದ ತರಕಾರಿ: ಹಸಿರು ಸೊಪ್ಪು ಮತ್ತು ಅನೇಕ ಬಗೆಯ ತರಕಾರಿಗಳನ್ನು ಈ ಸಮಯದಲ್ಲಿ ಹೆಚ್ಚಾಗಿ ಸೇವಿಸಬೇಕು. ಈ ತರಕಾರಿಗಳನ್ನು ಕುಯ್ದು ಬಿಸಿನೀರಿನಲ್ಲಿ ತೊಳೆದು ನಂತರ ಅಡುಗೆಗೆ ಬಳಸಿದರೆ ಒಳ್ಳೆಯದು.
ಮಳೆಯಲ್ಲಿ ಒದ್ದೆಯಾದರೆ ತಕ್ಷಣ ಸ್ನಾನ ಮಾಡಿ: ಮಳೆ ಬರಲ್ಲ ಅಂತ ಹೊರಗೆ ಹೋಗಿರುತ್ತೇವೆ, ಆಗ ಇದ್ದಕಿದ್ದ ಹಾಗೇ ಮಳೆ ಬಂದರೆ ಪೂರ್ತಿ ಒದ್ದೆಯಾಗುತ್ತೇವೆ, ಈ ರೀತಿ ಒದ್ದೆಯಾದರೆ ತಲೆ ಒರೆಸಿ ಸುಮ್ಮನೆ ಕೂರುವ ಬದಲು ಮನೆಗೆ ಬಂದ ಕೂಡಲೇ ನೀರನ್ನು ಬಿಸಿ ಮಾಡಿ ಸ್ನಾನ ಮಾಡಬೇಕು. ಬಟ್ಟೆ ಒದ್ದೆಯಾಗಿದ್ದರೆ ಕೂಡಲೇ ಬದಲಾಯಿಸಬೇಕು.
ತಾಜಾ ಮೀನು ಮಾತ್ರ ತಿನ್ನಬೇಕು: ಮೀನು ಕೊಳ್ಳುವುದಾದರೆ ತಾಜಾ ಮೀನು ಮಾತ್ರಕೊಳ್ಳಬೇಕು. ಫ್ರಿಜ್ ನಲ್ಲಿಟ್ಟ ಮೀನು ಈ ಸಮಯದಲ್ಲಿ ಕೊಳ್ಳದಿರುವುದು ಒಳ್ಳೆಯದು, ಒಣಗಿದ ಮೀನು ಕೊಳ್ಳುವುದಾದರೆ ಅದರಲ್ಲಿ ತೇವಾಂಶವಿರಬಾರದು.
ನೀರನ್ನು ಹೆಚ್ಚು ಕುಡಿಯಬೇಕು: ಕೆಲವರು ಮಳೆಗಾಲದಲ್ಲಿ ಹೆಚ್ಚಾಗಿ ಬಾಯಾರಿಕೆಯಾಗದಿರುವುದರಿಂದ ತುಂಬ ಕಡಿಮೆ ನೀರು ಕುಡಿಯುತ್ತಾರೆ, ಆದರೆ ಯಾವುದೇ ಕಾಲವಾಗಿರಲಿ ಆರೋಗ್ಯಕರವಾಗಿರಲು ಪ್ರತಿದಿನ 8-10 ಗ್ಲಾಸ್ ನೀರು ಕುಡಿಯುವುದು ಅವಶ್ಯಕ. ನೀರನ್ನು ಬಿಸಿ ಮಾಡಿ ಕುಡಿಯುವುದು ಒಳ್ಳೆಯದು. ಅಲ್ಲದೆ ಈ ಸಮಯದಲ್ಲಿ ಕಷಾಯ ಮತ್ತು ಹರ್ಬಲ್ ಟೀ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿ ಕಾಯಿಲೆ ಬರುವುದನ್ನು ತಡೆಯಬಹುದಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications