Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಕಣ್ಣಿಗೆ ಲೇಸರ್ ಸರ್ಜರಿ ಸುರಕ್ಷತವೇ?

ವಿಜ್ಞಾನ ಬೆಳದಂತೆ ಸೌಲಭ್ಯಗಳು ಬೆಳೆದಿದೆ. ಲೇಸರ್ ಚಿಕಿತ್ಸೆ, ಲೆನ್ಸ್ ಮುಂತಾದ ಸೌಲಭ್ಯಗಳಿವೆ. ಆದರೆ ಇವುಗಳು ಒಳಿತಿನ ಜೊತೆ, ಅಡ್ಡ ಪರಿಣಾಮವನ್ನೂ ಬೀರಬಹುದು. 2012ರ ಒಲಿಂಪಿಕ್ಸ್ ನಲ್ಲಿ ಅಭಿನವ್ ಬಿಂಧ್ರಾರವರೆಗೆ ಶೂಟಿಂಗ್ ನಲ್ಲಿ ಪರಾಜಯವಾಗಲೂ ಅವರಿಗೆ ನಡೆಸಿದ್ದ ಲೇಸರ್ ಲೆನ್ಸ್ ಸರ್ಜರಿ ಕೂಡ ಒಂದು ಕಾರಣ ಎಂದು ಹೇಳಲಾಗುತ್ತದೆ. ಕಣ್ಣಿಗೆ ಲೇಸರ್ ಚಿಕಿತ್ಸೆಯಿಂದ ಕಣ್ಣಿನ ದಷ್ಟಿ ಹೆಚ್ಚಾಗುವ ಬದಲು ಕೆಲವೊಮ್ಮೆ ಅಡ್ಡಪರಿಣಾಮ ಉಂಟಾಗಿ ದೃಷ್ಟಿ ದೋಷ ಕಡಿಮೆಯಾಗಬಹುದು. ಈ ರೀತಿ ಅಡ್ಡ ಪರಿಣಾಮ ಉಂಟಾಗಲು ಕಾರಣವೇನು ಎಂದು ತಿಳಿಯಲು ಮುಂದೆ ಓದಿ.
ಚಿಕಿತ್ಸೆ ಯಾವಾಗ ಮಾಡಿಸಬೇಕು?
ಸೃಷ್ಟಿ ದೋಷ -7ಕ್ಕಿಂತ ಕಡಿಮೆ ಇದ್ದರೆ ಮಾತ್ರ ಈ ರೀತಿಯ ಲೇಸರ್ ಚಿಕಿತ್ಸೆ ಮಾಡಿಸಬಹುದು. ಕನ್ನಡಕ ಇಲ್ಲದೆ ನೋಡಲು ಸಾಧ್ಯವಿವೇ ಇಲ್ಲ ಎಂಬ ಪರಿಸ್ಥಿತಿಯಿದ್ದರೆ ಈ ರೀತಿಯ ಸರ್ಜರಿಯಿಂದ ಪ್ರಯೋಜನ ಪಡೆಯಬಹುದು. ಚಿಕ್ಕ ಪುಟ್ಟ ಕಣ್ಣಿನ ದೋಷವಿದ್ದರೆ ಕನ್ನಡಕ ಧರಿಸುವುದೇ ಒಳ್ಳೆಯದು. ಏಕೆಂದರೆ ಲೇಸರ್ ಚಿಕಿತ್ಸೆ ಮಾಡಿಸಿದರೆ , ಒಂದು ವೇಳೆ ಈ ಚಿಕಿತ್ಸೆಯಿಂದ ಅಡ್ಡ ಪರಿಣಾಮ ಉಂಟಾದರೆ ನಷ್ಟ ಪರಿಹಾರ ಕೂಡ ಸಿಗುವುದಿಲ್ಲ.
ಕಣ್ಣು ಒಣಗುವುದು: ಲೇಸರ್ ಚಿಕಿತ್ಸೆ ಮಾಡಿಸಿದರೆ ದೃಷ್ಟಿ ಮಂಜಾಗುವುದು. ಇದರಿಂದ ಕಣ್ಣಿನಲ್ಲಿರುವ ನೈಸರ್ಗಿಕವಾದ ತೇವಾಂಶ ಕಡಿಮೆಯಾಗುವುದು.
ಕಣ್ಣಿಗೆ ಲೇಸರ್ ಚಿಕಿತ್ಸೆ ಮಾಡಿಸುವ ಮೊದಲು ಕನ್ನಡಕದ ಮುಖಾಂತರ ವಸ್ತುಗಳನ್ನು ನೋಡುತ್ತಿರುತ್ತೇವೆ.ಆದರೆ ಲೇಸರ್ ಚಿಕಿತ್ಸೆ ನಂತರ ಇದ್ದಕ್ಕಿದ್ದ ಹಾಗೆ 20:20 ದೃಷ್ಟಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಈ ಕಾರಣದಿಂದ ಅಭಿನವ್ ಬಿಂಧ್ರಾಗೆ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಡಾ. ಆಸ್ಲೇ ಥಾಮಸ್ ಜಾಕಬ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಈ ಲೇಸರ್ ಚಿಕಿತ್ಸೆಗೆ ಮಾಡಿದರೆ ಕಣ್ಣಿನ ಮೇಕಪ್ ಮಾಡಲು ಸಾಧ್ಯವಿಲ್ಲ. ಲೇಸರ್ ಚಿಕಿತ್ಸೆಯಲ್ಲಿ ಏನಾದರೂ ದೋಷ ಆಗಿದ್ದರೆ ದೃಷ್ಟಿ ಹೆಚ್ಚಾಗುವ ಬದಲು ಮತ್ತಷ್ಟು ಕಡಿಮೆಯಾಗುತ್ತದೆ. ಕಣ್ಣಿನಲ್ಲಿ ಏನೋ ಬಿದ್ದಂತೆ ಅನುಭವವಾಗುತ್ತದೆ, ವಸ್ತುಗಳನ್ನು ಸರಿಯಾಗಿ ನೋಡಲು ಸಾಧ್ಯವಾಗುವುದಿಲ್ಲ.
ಆದ್ದರಿಂದ ಲೇಸರ್ ಚಿಕಿತ್ಸೆ ಮಾಡುವುದಾದರೆ ತುಂಬಾ ಪರಿಣಿತಿಯನ್ನು ಪಡೆದ ವೈದ್ಯರ ಹತ್ತಿರ ಲೇಸರ್ ಚಿಕಿತ್ಸೆ ಮಾಡಿಸುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
