Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ರೇಡಿಯೊ ಥೆರಪಿಯ ಅಡ್ಡಪರಿಣಾಮ ತಡೆಗಟ್ಟುವುದು ಹೇಗೆ?

1. ಬಾಯಿ ಮತ್ತು ಹಲ್ಲುಗಳ ಶುಚಿತ್ವ: ಕ್ಯಾನ್ಸರ್ ಕಾಯಿಲೆ ಇರುವವರು ಅದರಲ್ಲೂ ಶ್ವಾಸಕೋಶದ ಕ್ಯಾನ್ಸರ್ ಗೆ ರೇಡಿಯೊ ಥೆರಪಿ ಚಿಕಿತ್ಸೆ ಪಡೆದಾಗ ವಿಕಿರಣಗಳು ಗಂಟಲಿನ ಶ್ವಾಸ ನಾಳ ಮತ್ತು ಧ್ವನಿ ಪೆಟ್ಟಿಗೆ ಮೇಲೆ ಬೀಳುತ್ತದೆ. ಈ ಸಮಯದಲ್ಲಿ ಬಾಯಿ ಶುಚಿತ್ವ ಮಾಡದಿದ್ದರೆ ಅಡ್ಡಪರಿಣಾಮ ಉಂಟಾಗುವುದು. ಆದ್ದರಿಂದ ಈ ಚಿಕಿತ್ಸೆ ಪಡೆದ ನಂತರ ಹಲ್ಲು ಮತ್ತು ಬಾಯಿಯನ್ನು ತುಂಬಾ ಶುಚಿಯಾಗಿ ಇಟ್ಟುಕೊಳ್ಳಬೇಕು.
2. ತುಂಬಾ ಬಿಸಿ ಅಥವಾ ತಣ್ಣನೆಯ ನೀರು ಕುಡಿಯಬಾರದು: ಅದರಲ್ಲೂ ತಲೆ ಮತ್ತು ಗಂಟಲಿಗೆ ರೇಡಿಯೊ ಥೆರಪಿ ಚಿಕಿತ್ಸೆ ಪಡೆದವರು ತುಂಬಾ ಬಿಸಿಯಾದ ಮತ್ತು ತಣ್ಣನೆಯ ನೀರು ಅಥವಾ ಆಹಾರ ಸ್ವಲ್ಪ ಸಮಯದವರೆಗೆ ತೆಗೆದುಕೊಳ್ಳಬಾರದು. ಏಕೆಂದರೆ ವಿಕಿರಣಗಳು ಆ ಭಾಗದ ಮೇಲೆ ಬಿದ್ದಿರುವುದರಿಂದ ಆ ಭಾಗ ತುಂಬಾ ಸೂಕ್ಷ್ಮವಾಗಿರುತ್ತದೆ.ಈ ಸಮಯದಲ್ಲಿ ಬಿಸಿ ಆಹಾರ ಬಾಯಿಗೆ ಮುಟ್ಟಿದರೆ ಬಾಯಲ್ಲಿ ಹುಣ್ಣುಗಳು ಉಂಟಾಗುತ್ತವೆ.
3. ತುಂಬಾ ಬೆವರಬಾರದು: ರೇಡಿಯೊ ಥೆರಪಿ ಪಡೆದ ಮೇಲೆ ಸಾಮಾನ್ಯವಾಗಿ ಒಂದು ವಾರದ ನಂತರ ವಿಪರೀತ ಬೆವರಲಾರಂಭಿಸುತ್ತದೆ. ಈ ರೀತಿ ತುಂಬಾ ಬೆವರು ಬರದಂತೆ ನೋಡಿಕೊಳ್ಳುವುದು ಒಳ್ಳೆಯದು. ಏಕೆಂದರೆ ವಿಕಿರಣಗಳ ಪ್ರಭಾವ ತ್ವಚೆಯಲ್ಲಿರುವುದರಿಂದ ಬೆವರು ಬಂದರೆ ಚರ್ಮದ ಅಲರ್ಜಿ ಉಂಟಾಗುತ್ತದೆ.
4. ಸೂರ್ಯನ ಬೆಳಕಿಗೆ ಹೋಗಬೇಡಿ: ವಿಕಿರಣಗಳ ಚಿಕಿತ್ಸೆ ಪಡೆದ ನಂತರ ಸೂರ್ಯನ ಬೆಳಕು ನೇರವಾಗಿ ಮೈ ಮೇಲೆ ಬೀಳದಂತೆ ಎಚ್ಚರಿಕೆವಹಿಸಬೇಕು. ಹೊರಗಡೆ ಹೋಗುವಾಗ ಕೊಡೆ ಹಿಡ್ಕೊಂಡು ಹೋಗಬೇಕು.
5. ಪೋಷಕಾಂಶಗಳು: ಕ್ಯಾನ್ಸರ್ ಚಿಕಿತ್ಸೆ ಪಡೆದವರಲ್ಲಿ ಹೆಚ್ಚಿನವರು ಮಾನಸಿಕವಾಗಿ ಕುಗ್ಗಿರುತ್ತಾರೆ. ಈ ಸಮಯದಲ್ಲಿ ಅವರಿಗೆ ಆತ್ಮವಿಶ್ವಾಸ ತುಂಬಬೇಕು ಮತ್ತು ಉತ್ತಮ ಪೋಷಕಾಂಶವಿರುವ ಆಹಾರಗಳ ಸೇವನೆ ಅಗತ್ಯ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
