Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ದಿನ ಬಳಕೆಯ ಈ ವಸ್ತುಗಳಲ್ಲಿದೆ ರೋಗಗಳ ಪರಿಹಾರ!
ಗಿಡ ಮೂಲಿಕೆಗಳನ್ನು ಬಳಸಿದರೆ ಕಾಯಿಲೆ ಗುಣ ಮುಖವಾಗುವುದರ ಜೊತೆಗೆ ಅತಿ ಮುಖ್ಯ ಪ್ರಯೋನಜವೆಂದರೆ ಇದರಿಂದ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಆದ್ದರಿಂದಲೇ ವೈದ್ಯಕೀಯ ವೈಜ್ಞಾನ ಸಾಕಷ್ಟು ಮುಂದುವರೆದಿದ್ದರೂ ಆರ್ಯುವೇದದ ಔಷಧಿ ಇವತ್ತಿಗೂ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ.
ದಿನಬಳಕೆಯಲ್ಲಿ ಬಳಸುವ ಕೆಲ ವಸ್ತುಗಳು ಹೇಗೆ ಕಾಯಿಲೆ ಗುಣ ಪಡಿಸುವಲ್ಲಿ ಸಹಕಾರಿಯಾಗಿದೆ ಎಂದು ತಿಳಿಯೋಣ ಬನ್ನಿ.

ಮಧುಮೇಹಕ್ಕೆ ಮನೆ ಮದ್ದು:
ಕರಿ ಬೇವಿನ ಎಲೆ: ಕರಿ ಬೇವಿನ ಎಲೆಯನ್ನು ದಿನನಿತ್ಯ ಬಳಸುತ್ತಿರುತ್ತೇವೆ. ಈ ಕರಿಬೇವು ಅಡುಗೆಗೆ ರುಚಿ ಮತ್ತು ಸುವಾಸನೆ ಕೊಡುವುದು ಮಾತ್ರವಲ್ಲ ಆರೋಗ್ಯಕ್ಕೆ ಒಳ್ಳೆಯದು. 3 ತಿಂಗಳವರೆಗೆ 8-10 ಕರಿಬೇವಿನ ಎಲೆಯನ್ನು ಪ್ರತಿದಿನ ಬೆಳ್ಳಗ್ಗೆ ತಿಂದರೆ ಮಧುಮೇಹವನ್ನು ತಡೆಗಟ್ಟುತ್ತದೆ ಅಲ್ಲದೆ ಇದು ತೂಕ ಇಳಿಸುವಲ್ಲಿ ತುಂಬಾ ಸಹಕಾರಿಯಾಗಿದೆ.
ಚಕ್ಕೆ: ಚಕ್ಕೆಯನ್ನು ದಿನವೂ ತಿಂದರೆ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ. ಅಲ್ಲದೆ ಪಲಾವ್ ಎಲೆ, ಅರಿಶಿಣ, ಬೆಳ್ಳುಳ್ಳಿ ಕೂಡ ಡಯಾಬಿಟಿಸ್ ಕಾಯಿಲೆಯನ್ನು ಬರದಂತೆ ತಡೆಯುವುದು.
ನೆಲ್ಲಿಕಾಯಿ: ನೆಲ್ಲಿ ಕಾಯಿ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕರಿಯಾಗಿದೆ. ಹಗಲಕಾಯಿ ಮತ್ತು ನೆಲ್ಲಿಕಾಯಿ ಹಾಕಿ ಜ್ಯೂಸ್ ಮಾಡಿ 2-3 ತಿಂಗಳು ಕುಡಿದರೆ ಉತ್ತಮ ಪರಿಣಾಮವನ್ನು ಪಡೆಯಬಹುದು.
ಕೆಮ್ಮು ಮತ್ತು ಶೀತಕ್ಕೆ ಮನೆ ಮದ್ದು:
ತುಳಸಿ: ತುಳಸಿ ಹಾಕಿ ಟೀ ಮಾಡಿ ಕುಡಿದರೆ ಅಥವಾ 1 ಚಮಚ ತುಳಸಿ ರಸಕ್ಕೆ 1/2 ಚಮಚ ಜೇನುಮತ್ತು 2 ಕಾಳು ಕರಿಮೆಣಸನ್ನು ಪುಡಿ ಮಾಡಿ ಹಾಕಿ ಮಿಶ್ರ ಮಾಡಿ ಕುಡಿಯ ಬೇಕು. ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಈ ರೀತಿ ಮಾಡಿದರೆ ಶೀತ ಮತ್ತು ಕೆಮ್ಮ ಕಡಿಮೆಯಾಗುವುದು.
ಶುಂಠಿ: ಕಾಫಿ ಅಥವಾ ಟೀ ಮಾಡುವಾಗ ಸ್ವಲ್ಪ ಶುಂಠಿ ಹಾಕಿ ಕುಡಿದರೆ ಅಥವಾ ಶುಂಠಿ ರಸಕ್ಕೆ ಸ್ವಲ್ಪ ಕರಿಮೆಣಸಿನ ಪುಡಿ ಮತ್ತು ಜೇನು ಸೇರಿಸಿ ಕುಡಿದರೆ ಕೆಮ್ಮು ನಿವಾರಣೆಯಾಗುತ್ತದೆ.
ಗಂಟಲು ತುರಿತ: ಗಂಟಲಿನಲ್ಲಿ ತುರಿತ ಕಂಡು ಬಂದರೆ ಚಕ್ಕೆ ಟೀ ಮಾಡಿ ಕುಡಿದರೆ ಸಾಕು ಕಮ್ಮಿಯಾಗುವುದು.
ಗಾಯಗಳನ್ನು ಗುಣಪಡಿಸಲು ಮನೆಮದ್ದು:
ಚೆಂಡು ಹೂ: ಚೆಂಡು ಹೂವಿನ ಎಲೆಯನ್ನು ಕಿತ್ತು ಅದರ ರಸ ಹಿಂಡಿ ಗಾಯಕ್ಕೆ ಹಾಕಿದರೆ ಗಾಯ ಗುಣ ಮುಖವಾಗುವುದು.
ಅರಿಶಿಣ: ಅರಿಶಿಣ ಹಾಕಿದರೆ ಕೂಡ ಗಾಯ ಬೇಗನೆ ಗುಣಮುಖವಾಗುತ್ತದೆ. ಹಳ್ಳಿ ಕಡೆಗಳಲ್ಲಿ ಸಣ್ಣ ಪುಟ್ಟ ಗಾಯಗಳಿಗೆ ಆಸ್ಪತ್ರೆಗೆ ಹೋಗದೆ ಇದರಿಂದಲೇ ಗುಣಪಡಿಸುತ್ತಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
