For Quick Alerts
ALLOW NOTIFICATIONS  
For Daily Alerts

ಕಿವಿಯನ್ನು ಸ್ವಚ್ಛ ಮಾಡಲು 4 ವಿಧಾನ

|

ದೇಹದ ಸ್ವಚ್ಛವಾಗಿರಲು ಸ್ನಾನ ಮಾತ್ರ ಮಾಡಿದರೆ ಸಾಲದು. ಹಲ್ಲು ಮತ್ತು ಬಾಯಿಯನ್ನು ಸ್ವಚ್ಛವಾಗಿಡಬೇಕು. ಕಿವಿಯನ್ನು ಶುದ್ಧವಾಗಿಡಬೇಕು. ಹಾಗಂತ ಕಿವಿಗೆ ಪಿನ್ನು, ಕಡ್ಡಿ ಈ ರೀತಿಯ ವಸ್ತುಗಳನ್ನು ಹಾಕಿ ಸ್ವಚ್ಛ ಮಾಡಲು ಹೋಗಬಾರದು. ಏಕೆಂದರೆ ಈ ರೀತಿ ಮಾಡಿದರೆ ಕಿವಿಯ ತಮಟೆಗೆ ಹಾನಿ ಉಂಟಾಗುತ್ತದೆ. ಕಿವಿ ಸ್ವಚ್ಛ ಮಾಡಲು ಇಯರ್ ಬಡ್ಸ್ ಗಳು ದೊರೆಯುತ್ತವೆ. ಅವುಗಳಿಂದ ಸ್ವಚ್ಛ ಮಾಡಬಹುದು.

ಇಲ್ಲಿ ನಾವು ಕಿವಿಯ ಸ್ವಚ್ಛತೆಯನ್ನು ಕಾಪಾಡಲು 4 ವಿಧಾನಗಳನ್ನು ವಿವರಿಸಿದ್ದೇವೆ. ಅವುಗಳನ್ನು ಪಾಲಿಸಿದರೆ ಕಿವಿ ಸ್ವಚ್ಛವಾಗಿರುವುದು ಮಾತ್ರವಲ್ಲದೆ ಕಿವಿಯ ಆರೋಗ್ಯ ಹೆಚ್ಚಾಗುವುದು.

Healthy Ways To Clean Ears

ತೇವ ಬಟ್ಟೆ: ತೇವ ಬಟ್ಟೆಯನ್ನು ಬಳಸಿ ಕಿವಿಯನ್ನು ಸ್ವಚ್ಛವಾಗಿ ಮತ್ತು ಆರೋಗ್ಯವಾಗಿ ಇಡಬಹುದು.ಕಿವಿಯಲ್ಲಿರುವ ಗುಗ್ಗೆಯನ್ನು ತೆಗೆಯಲು ಕಿವಿಯ ಆಳಕ್ಕೆ ಕಡ್ಡಿಗಳನ್ನು ಹಾಕುವ ಅಗತ್ಯವಿಲ್ಲ. ಅವು ತನ್ನಷ್ಟಕ್ಕೆ ಮೇಲ್ಭಾಗಕ್ಕೆ ಬರುತ್ತದೆ. ಆಗ ತೇವವಾದ ಬಟ್ಟೆಯಿಂದ ತೆಗೆದರೆ ಸಾಕು, ಕಿವಿ ಸ್ವಚ್ಛವಾಗುವುದು.

ಎಣ್ಣೆ ಬಿಡುವುದು: ಗುಗ್ಗೆ ಕಿವಿಯಲ್ಲಿಯೇ ನಿಂತರೆ ಕಿವು ನೋವು ಬರುವುದು ಮತ್ತು ಕಿವಿ ಸರಿಯಾಗಿ ಕೇಳಿಸುವುದಿಲ್ಲ. ವಾರಕ್ಕೆ ಒಂದು ಬಾರಿ 1/2 ಚಮಚ ತೆಂಗಿನೆಣ್ಣೆಯನ್ನು ಬಿಸಿ ಮಾಡಿ, ಬಿಸಿ ಸ್ವಲ್ಪ ಆರಿದ ಮೇಲೆಕಿವಿಗೆ ಹಾಕಿದರೆ ಕಿವಿ ಗುಗ್ಗೆ ಹೊರಬರುವುದು.

ನೀರು: ಅರ್ಧ ಚಮಚ ನೀರಿಗೆ 2-3 ಹನಿ ಪರಾಕ್ಸೈಡ್ ಹಾಕಿ ನಂತರ ಅದನ್ನು ಕಿವಿಗೆ ಹಾಕಿದರೆ ಕಿವಿಯಲ್ಲಿರುವ ಗುಗ್ಗೆ ಹೊರಬರುತ್ತದೆ. ನಂತರ ಅದನ್ನು ತೆಗೆಯಬೇಕು.

ಇಯರ್ ಬಡ್ಸ್: ಕಿವಿಯನ್ನು ಸ್ವಚ್ಛ ಮಾಡಲು ಇಯರ್ ಬಡ್ಸ್ ಹೆಚ್ಚಾಗಿ ಉಪಯೋಗಿಸಲಾಗುವುದು. ಪ್ರತಿದಿನ ಇಯರ್ ಬಡ್ಸ್ ನಿಂದ ಕಿವಿಯ ಗುಗ್ಗೆ ತೆಗೆದರೆ ಗುಗ್ಗೆಯಿಂದಾಗಿ ಕಿವಿಗೆ ಸಮಸ್ಯೆ ಉಂಟಾಗುವುದನ್ನು ತಡೆಯಬಹುದು.

English summary

Healthy Ways To Clean Ears | Tips For Health | ಕಿವಿಯನ್ನು ಸ್ವಚ್ಛ ಮಾಡಲು 4 ವಿಧಾನ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Cleaning your ears is a good step to maintain personal hygiene. We often try hard to remove ear wax secreted in the ears. However, ear wax is a sticky substance that is secreted by the ear to prevent dirt, bacteria and other small particles from entering inside the sensitive parts of ears.
X
Desktop Bottom Promotion