Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಈ ತರಕಾರಿಯ ಸಿಪ್ಪೆ ಬಿಸಾಡಿ ನಷ್ಟ ಮಾಡಿಕೊಳ್ಳಬೇಡಿ!
ಕೆಲವೊಂದು ತರಕಾರಿಗಳ ಸಿಪ್ಪೆಯಲ್ಲಿ ಅಧಿಕ ಪೋಷಕಾಂಶವಿರುತ್ತದೆ. ಆದರೆ ಸಿಪ್ಪೆ ಸುಲಿದು ಬೇಯಿಸಿದಾಗ ಸಿಪ್ಪೆಯಲ್ಲಿರುವ ಪೋಷಕಾಂಶಗಳು ವ್ಯರ್ಥವಾಗುತ್ತದೆ. ಅದರಲ್ಲೂ ಆಲೂಗೆಡ್ಡೆ, ನುಗ್ಗೆ ಕಾಯಿ, ಸೌತೆಕಾಯಿ ಈ ಬಗೆಯ ತರಕಾರಿಗಳನಂತೂ ದಿನನಿತ್ಯದ ಅಡುಗೆಯಲ್ಲಿ ಬಳಸುತ್ತಿರುತ್ತೇವೆ.
ಆದರೆ ಹೆಚ್ಚಿನವರು ಈ ತರಕಾರಿಗಳ ಸಿಪ್ಪೆ ಸುಲಿದು ಬೇಯಿಸುತ್ತಾರೆ. ಆ ರೀತಿ ಸಿಪ್ಪೆ ಸುಲಿದು ಅಡುಗೆ ಮಾಡಿದರೆ ಆಗುವ ನಷ್ಟವೇನು ಎಂದು ತಿಳಿಯಲು ಮುಂದೆ ಓದಿ:

1. ಆಲೂಗೆಡ್ಡೆ: ಆಲೂಗೆಡ್ಡೆಯ ಸಿಪ್ಪೆಯಲ್ಲಿ ಅಧಿಕ ಪೋಷಕಾಂಶ, ನಾರಿನಂಶ ಮತ್ತು ಸತು ಅಧಿಕವಾಗಿ ಇರುತ್ತದೆ. ಅಲ್ಲದೆ ಕರುಳಿನ ಕ್ರಿಯೆಗೆ ಈ ಆಲೂಗೆಡ್ಡೆ ಸಿಪ್ಪೆ ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ ಅಂಶವಿದ್ದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
2. ಸೌತೆಕಾಯಿ: ಸೌತೆಕಾಯಿಯನ್ನು ಕೆಲವರು ಸಿಪ್ಪೆ ತೆಗೆದು, ಮತ್ತೆ ಕೆಲವರು ಸಿಪ್ಪೆ ಸಹಿತ ಅಡುಗೆ ಮಾಡುತ್ತಾರೆ. ಆದರೆ ಸೌತೆಕಾಯಿಯನ್ನು ಸಿಪ್ಪೆ ಸಹಿತ ಹಾಕಿ ಅಡುಗೆ ಮಾಡುವುದು ಸರಿಯಾದ ಕ್ರಮ. ಈ ಸೌತೆಕಾಯಿ ಸಿಪ್ಪೆಗೆ ಕರುಳಿನ ಕ್ಯಾನ್ಸರ್ ಅನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ.
3. ಕುಂಬಳ ಕಾಯಿ ಮತ್ತು ನುಗ್ಗೆ ಕಾಯಿ: ಈ ತರಕಾರಿಯ ಸಿಪ್ಪೆಯಲ್ಲಿ ಸತುವಿನಂಶ ಅಧಿಕವಿರುತ್ತದೆ. ಈ ಪೋಷಕಾಂಶ ತ್ವಚೆ ಮತ್ತು ಉಗುರಿನ ಆರೋಗ್ಯಕ್ಕೆ ಒಳ್ಳೆಯದು.
4. ಬೀಟ್ ರೂಟ್: ಬೀಟ್ ರೂಟ್ ಸಿಪ್ಪೆಯಲ್ಲಿ antioxidants ಪ್ರಮಾಣ ಅಧಿಕವಾಗಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ಹಸಿಯಾಗಿ ತಿಂದರೆ ಆರೋಗ್ಯಕ್ಕೆ ಮತ್ತಷ್ಟು ಒಳ್ಳೆಯದು.
5. ಬದನೆಕಾಯಿ: ಬದನೆಕಾಯಿಯಲ್ಲಿ antioxidants ಅಧಿಕವಿದ್ದು ಅದರಲ್ಲೂ ಎಣ್ಣೆ ಬದನೆಯಲ್ಲಿ ಅಧಿಕ ಪೋಷಕಾಂಶವಿದೆ.
ಆದ್ದರಿಂದ ಈ ಮೇಲಿನ ತರಕಾರಿಗಳನ್ನು ಬಳಸುವಾಗ ಸಿಪ್ಪೆ ಬಿಸಾಡಿ ಬಳಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
