Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಈ ಸಿಹಿ ಪದಾರ್ಥಗಳನ್ನು ದೂರ ಮಾಡಬೇಡಿ!
ಸಿಹಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದಲ್ಲ ನಿಜ, ಆದರೆ ಹಾಗಂತ ಎಲ್ಲಾ ಬಗೆಯ ಸಿಹಿ ಪದಾರ್ಥಗಳೂ ಆರೋಗ್ಯಕ್ಕೆ ಒಳ್ಳೆಯದಲ್ಲವೆಂದು ಭಾವಿಸಿ ತಿನ್ನದೇ ಇದ್ದರೆ ಆರೋಗ್ಯಕ್ಕೆ ಮೋಸವಾದೀತು! ಹೌದು ಸಿಹಿ ಪದಾರ್ಥಗಳಲ್ಲಿ ಕೆಲವೊಂದು ನೈಸರ್ಗಿಕವಾಗಿ ಸಿಹಿಯಾಗಿರುವ ಹಣ್ಣುಗಳು ಮತ್ತು ಪದಾರ್ಥಗಳು ಆರೋಗ್ಯವನ್ನು ಹೆಚ್ಚಿಸುವಲ್ಲಿ ತುಂಬಾ ಸಹಕಾರಿಯಾಗಿದೆ. ಈ ಕೆಳಗಿನ ಸಿಹಿ ಪದಾರ್ಥಗಳನ್ನು ದಿನನಿತ್ಯದ ಆಹಾರಕ್ರಮದಲ್ಲಿ ಸೇರಿಸಿದರೆ ದೇಹದ ಸ್ವಾಸ್ಥ್ಯ ಹೆಚ್ಚುವುದು.

1. ಬೆಲ್ಲ: ಸಿಹಿ ಪದಾರ್ಥಗಳನ್ನು ಮಾಡುವಾಗ ಸಕ್ಕರೆ ಬದಲು ಬೆಲ್ಲ ಬಳಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಕಬ್ಬಿನ ಹಾಲಿನಿಂದ ತಯಾರಿಸುವ ಬೆಲ್ಲದಲ್ಲಿ ಕಾರ್ಬೋಹೈಡ್ರೇಟ್ ಮತ್ತು ನಾರಿನಂಶ ಅಧಿಕವಾಗಿರುತ್ತದೆ. ಆದರೆ ಸಕ್ಕರೆಯಲ್ಲಿ ನಾರಿನಂಶ ತುಂಬಾ ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತದೆ. ನಾರಿನಂಶ ಅಧಿಕವಿರುವ ಆಹಾರದ ಬಳಕೆಯಿಂದ ಆರೋಗ್ಯ ಹೆಚ್ಚುವುದು.
2. ಜೇನು: ಜೇನು ತೂಕವನ್ನು ಕಡಿಮೆ ಮಾಡಲು ತುಂಬಾ ಸಹಕಾರಿಯಾಗಿದೆ. ಅಲರ್ಜಿ ಸೀನು ಅಥವಾ ಕೆಮ್ಮು ಉಂಟಾದರೆ ಜೇನಿಗೆ ಸ್ವಲ್ಪ ಕರಿಮೆಣಸಿನ ಪುಡಿ ಮತ್ತು ತುಳಸಿ ರಸ ಹಾಕಿ ಕುಡಿದರೆ ಕೆಮ್ಮು ನಿವಾರಣೆ ಆಗುವುದು, ಈ ಔಷಧಿ ಶೀತಕ್ಕೂ ಕೂಡ ತುಂಬಾ ಒಳ್ಳೆಯದು. ಟೀ ಜೊತೆ ಸಕ್ಕರೆ ಹಾಕಿ ಕುಡಿಯುವ ಬದಲು ಜೇನು ಹಾಕಿ ಕುಡಿಯುವುದು ಒಳ್ಳೆಯದು. ಗ್ರೀನ್ ಟೀಗೆ ಜೇನು ಹಾಕಿ ಕುಡಿದರೆ ಕೆಲವೇ ತಿಂಗಳಿನಲ್ಲಿ ದೇಹದ ತೂಕ ಕಡಿಮೆ ಮಾಡಬಹುದು.
3. ಒಣ ಹಣ್ಣುಗಳು: ಕಡಿಮೆ ಕ್ಯಾಲೋರಿ ಇರುವ ಆಹಾರ ಸೇವಿಸಿದರೆ ದೇಹದ ಆರೋಗ್ಯ ಹೆಚ್ಚುವುದು. ಒಣದ್ರಾಕ್ಷಿ, ಒಣ ಖರ್ಜೂರಗಳ ಸೇವನೆ ಒಳ್ಳೆಯದು. ಕರ್ಜೂರ ತಿಂದರೆ ದೇಹಕ್ಕೆ ಶಕ್ತಿ ದೊರೆಯುತ್ತದೆ. ತುಂಬಾ ಸುಸ್ತಾದಾಗ 5-6 ಖರ್ಜುರ ತಿಂದರೆ ಸಾಕು, ಸುಸ್ತು ಕಡಿಮೆಯಾಗುವುದು. ಖರ್ಜೂರದಲ್ಲಿ ಅಧಿಕ ಕಬ್ಬಿಣದಂಶವಿರುವುದರಿಂದ ರಕ್ತ ಹೀನತೆ ಸಮಸ್ಯೆ ನಿವಾರಣೆಗೆ ತುಂಬಾ ಸಹಕಾರಿಯಾಗಿದೆ.
4. ಹಣ್ಣುಗಳು: ಬಾಳೆ ಹಣ್ಣು, ಮಾವಿನ ಹಣ್ಣು, ಸೇಬು ಇವುಗಳ ಸೇವನೆಯಿಂದ ಆರೋಗ್ಯ ಹೆಚ್ಚುವುದು. ಇವುಗಳ ಫ್ರೂಟ್ ಸಲಾಡ್ ಮಾಡಿ ತಿನ್ನುವುದು, ಜ್ಯೂಸ್ ಮಾಡಿ ಕುಡಿಯುವುದರಿಂದ ಬಾಯಿಗೂ ರುಚಿ, ದೇಹಕ್ಕೂ ಒಳ್ಳೆಯದು. ಆದರೆ ಜ್ಯೂಸ್ ಮಾಡುವಾಗ ಸಕ್ಕರೆ ಬಳಸಬೇಡಿ.
ಸಿಹಿ ತಿಂದರೆ ದಪ್ಪಗಾಗುತ್ತೇವೆ ಎಂಬ ಚಿಂತೆ ಬಿಟ್ಟು, ಈ ಮೇಲಿನ ಸಿಹಿಪದಾರ್ಥಗಳನ್ನು ತಿಂದು ಸಮತೂಕದ ಮೈಕಟ್ಟು ಮತ್ತು ಆರೋಗ್ಯವನ್ನು ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
