Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಸೂರ್ಯ ನಮಸ್ಕಾರದ ನಿಯಮ ಮತ್ತು ಪ್ರಯೋಜನಗಳು

ಸೂರ್ಯ ನಮಸ್ಕಾರದ ನಿಯಮಗಳು:
* ಸೂರ್ಯ ನಮಸ್ಕಾರಗಳನ್ನು ಒಂದು ಚಾಪೆ ಅಥವಾ ವಸ್ತ್ರದ ಮೇಲೆ ಮಾಡಬೇಕು. ಬರೀ ನೆಲದಲ್ಲಿ ಮಾಡಬಾರದು.
* ಮೊದಲ ಬಾರಿಗೆ ಅಭ್ಯಾಸ ಮಾಡುವವರು 12 ಸೂರ್ಯ ನಮಸ್ಕಾರಗಳನ್ನು ಒಂದೇ ಬಾರಿಯಲ್ಲಿ ಮಾಡಬೇಕಾಗಿಲ್ಲ. ಒಂದು ವಾರದವರೆಗೆ ದಿನಕ್ಕೆ (3 ರಿಂದ 6) ಕಡಿಮೆ ನಮಸ್ಕಾರಗಳನ್ನು ಪ್ರಾರಂಭಿಸಬೇಕು, ತದನಂತರ ಕ್ರಮೇಣ 12 ನಮಸ್ಕಾರಗಳನ್ನು ಮಾಡಬೇಕು.
* ಶವಾಸನವನ್ನು ಅಭ್ಯಾಸದ ಕೊನೆಯಲ್ಲಿ ಮಾಡಬೇಕು. ಮಂತ್ರಗಳನ್ನು ಪ್ರತಿ ಸೂರ್ಯ ನಮಸ್ಕಾರ ಆರಂಭದಲ್ಲಿ ಉಚ್ಚರಿಸಬೇಕು.
* ಸೂರ್ಯ ನಮಸ್ಕಾರದಲ್ಲಿ ಒಟ್ಟು 8 ವಿವಿಧ ಭಂಗಿಗಳು, ಸರಣಿಯಲ್ಲಿ 12 ನಿಲುವು ಬದಲಾವಣೆಗಳು ಇವೆ.
* ಕೆಲವು ಆಸನಗಳು ಒಂದು ಸೂರ್ಯ ನಮಸ್ಕಾರದ ಅದೇ ಚಕ್ರದಲ್ಲಿ ಎರಡು ಬಾರಿ ಪುನರಾವರ್ತಿಸಲಾಗುವುದು.
*ಸೂರ್ಯ ನಮಸ್ಕಾರವನ್ನು ಯಾವಾಗಲೂ ಸೂರ್ಯೋದಯ (ಪೂರ್ವ) ಅಥವಾ ಸೂರ್ಯಾಸ್ತದ (ಪಶ್ಚಿಮ) ದಿಕ್ಕಿನಲ್ಲಿ ಮುಖಮಾಡಿ ಮಾಡಲಾಗುವುದು.
* ಶವಾಸನವನ್ನು ಅಭ್ಯಾಸದ ಕೊನೆಯಲ್ಲಿ ಆಚರಿಸಬೇಕು.
ಸೂರ್ಯ ನಮಸ್ಕಾರದ ಪ್ರಯೋಜನಗಳು:
* ದೇಹ ಸದೃಢವಾಗುವುದು: ಈ ವ್ಯಾಯಾಮ ಅಷ್ಟೇನು ಶ್ರಮದಾಯಕವಲ್ಲ, ಆದ್ದರಿಂದ ಇದನ್ನು ಪ್ರತಿಯೊಬ್ಬರು ಮಾಡಬಹುದಾಗಿದ್ದು, ಇದನ್ನು ಮಾಡಿದರೆ ಆಕರ್ಷಕವಾದ ಮೈಕಟ್ಟು ಪಡೆಯಬಹುದು. ಬೆಳಗ್ಗೆ ಮಾಡಿದರೆ ದೇಹ ಫಿಟ್ ನೆಸ್ ಹೊಂದುವುದು. ಸೂರ್ಯಾಸ್ತದ ನಂತರ ಅಭ್ಯಾಸ ಮಾಡಿದರೆ ಒತ್ತಡ ಕಡಿಮೆಮಾಡಿ ಮನಸ್ಸು ನೆಮ್ಮದಿ ದೊರೆಯುತ್ತದೆ.
* ರಕ್ತ ಸಂಚಲನ: ಸೂರ್ಯ ನಮಸ್ಕಾರ ಮಾಡಿದರೆ ರಕ್ತ ಸಂಚಾರ ಸರಾಗವಾಗಿ ನಡೆಯಲು ಸಹಕಾರಿಯಾಗುವುದು. ರಕ್ತಸಂಚಾರ ಸರಾಗವಾಗಿ ನಡೆದರೆ ಕೀಲು ನೋವು ಮುಂತಾದ ಕಾಯಿಲೆಗಳನ್ನು ತಡೆಗಟ್ಟಬಹುದು.
* ಜೀರ್ಣಕ್ರಿಯೆ: ಸೂರ್ಯನಮಸ್ಕಾರ ಮಾಡಿದರೆ ಅಜೀರ್ಣದಂತಹ ಸಮಸ್ಯೆ ಕಂಡು ಬರುವುದಿಲ್ಲ. ಇದರಿಂದ ಮಲಬದ್ಧತೆ ಉಂಟಾಗುವುದಿಲ್ಲ. ಮಲಬದ್ಧತೆ ಮೂಲವ್ಯಾಧಿ ಸಮಸ್ಯೆಯನ್ನು ತರಬಹುದು.
* ಶ್ವಾಸಕೋಶದ ಆರೋಗ್ಯ: ಇದು ಥೈರಾಯ್ಡ್, ಪ್ಯಾರಾಥೈರಾಯ್ಡ್ ಮತ್ತು ಪಿಟ್ಯುಟರಿ ಗ್ರಂಥಿ, endocrinal ಗ್ರಂಥಿಗಳು ಸಾಮಾನ್ಯವಾಗಿ ಕೆಲಸ ಮಾಡುವಂತೆ ಮಾಡುತ್ತದೆ.
* ನರವ್ಯೂಹ ಮತ್ತು ಮೆದುಳು ಚುರುಕಾಗುವುದು: ಇದರಿಂದ ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆ ಹೆಚ್ಚುವುದು. ಆದ್ದರಿಂದ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ ಅಭ್ಯಾಸ ಮಾಡುವುದು ಒಳ್ಳೆಯದು.
* ಖಿನ್ನತೆ ಇರುವುದಿಲ್ಲ: ಸೂರ್ಯ ನಮಸ್ಕಾರ ಅಭ್ಯಾಸ ಇರುವವರೆಗೆ ಖಿನ್ನತೆ ಕಾಡುವುದಿಲ್ಲ.
* ನಿದ್ರಾಹೀನತೆ ಸಮಸ್ಯೆ ದೂರವಾಗುವುದು: ಒತ್ತಡ ಮತ್ತು ಜೀವನ ಶೈಲಿಯಿಂದಾಗಿ ನಿದ್ರಾಹೀನತೆ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುತ್ತದೆ. ಇದನ್ನು ಹೋಗಲಾಡಿಸಲು ಸೂರ್ಯ ನಮಸ್ಕಾರ ಅಭ್ಯಾಸ ಮಾಡುವುದು ಒಳ್ಳೆಯದು.
* ಸೌಂದರ್ಯ ಹೆಚ್ಚುವುದು: ಸೂರ್ಯ ನಮಸ್ಕಾರ ವ್ಯಾಯಾಮ ಪ್ರತಿನಿತ್ಯ ಮಾಡಿದರೆ ಚರ್ಮದ ಸಮಸ್ಯೆ ದೂರವಾಗಿ ತ್ವಚೆ ಕಾಂತಿ ಹೆಚ್ಚುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications