Latest Updates
-
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ?
ಕಿಡ್ನಿಗೆ ಆರೋಗ್ಯಕರ ಮತ್ತು ಆರೋಗ್ಯಕರವಲ್ಲದ ಡಯಟ್

1. ಕೆಂಪು ದುಂಡು ಮೆಣಸಿನ ಕಾಯಿ: ಇದನ್ನು ತಿಂದರೆ ತೂಕ ಕಡಿಮೆಯಾಗುವುದು ಮಾತ್ರವಲ್ಲ ಕಿಡ್ನಿ ಸ್ಟೋನ್ ಹೋಗಲಾಡಿಸಲು ಕೂಡ ಸಹಕಾರಿಯಾಗಿದೆ. ಇದರಲ್ಲಿ ನಾರಿನಂಶ, ವಿಟಮಿನ್ ಬಿ6, ವಿಟಮಿನ್ ಎ, ಫೋಲಿಕ್ ಆಸಿಡ್ ಮತ್ತು ಇತರ ಕಿಡ್ನಿಯನ್ನು ಶುದ್ಧಗೊಳಿಸುವ ಅಂಶಗಳಿವೆ. ಇದನ್ನು ಎಣ್ಣೆಯಲ್ಲಿ ಹುರಿದು ತಿನ್ನದೆ ಬೇಯಿಸಿ ಅದರಲ್ಲೂ ಅರ್ಧ ಬೆಂದ ದುಂಡು ಮೆಣಸು ತಿನ್ನುವುದು ಒಳ್ಳೆಯದು.
2. ಮೊಟ್ಟೆ: ಮೊಟ್ಟೆ ಬಿಳಿ ಭಾಗದಲ್ಲಿ ಅಧಿಕ ಪ್ರೊಟೀನ್ ಇರುವುದರಿಂದ ಪ್ರತಿನಿತ್ಯ ಒಂದು ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಕಿಡ್ನಿ ಸಮಸ್ಯೆ ಇರುವವರು ದಿನಕ್ಕೆ ಒಂದು ಅಥವಾ ಎರಡು ಮೊಟ್ಟೆಯ ಬಿಳಿ (ಬಿಳಿಭಾಗ ಮಾತ್ರ) ತಿನ್ನಬೇಕು.
3. ಹೂಕೋಸು ಮತ್ತು ಎಲೆಕೋಸು: ಎಲೆಕೋಸಿನಲ್ಲಿರುವ ವಿಟಮಿನ್ ಕೆ ಮತ್ತು ಹೂಕೋಸಿನಲ್ಲಿರುವ ವಿಟಮಿನ್ ಸಿ ಕಿಡ್ನಿಗೆ ಆರೋಗ್ಯ ನೀಡುತ್ತದೆ. ಕಿಡ್ನಿ ಸಮಸ್ಯೆ ಇರುವವರು ಪೊಟಾಶ್ಯಿಯಂ ಇರುವ ಆಹಾರವನ್ನು ತಿನ್ನಬಾರದು. ಕಲ್ಲಂಗಡಿ ಹಣ್ಣಿನಲ್ಲಿ ಪೊಟಾಷಿಯಂ ಇರುವುದರಿಂದ ಅದನ್ನು ತಿನ್ನಬಾರದು.
4. ಹಣ್ಣುಗಳು: ಕಿತ್ತಳೆ, ಸ್ಟ್ರಾಬೆರಿ, ದ್ರಾಕ್ಷಿ ಎರಡೂ ತರಹದ ದ್ರಾಕ್ಷಿ ಹಣ್ಣು ಕಿಡ್ನಿಗೆ ನಿಜಕ್ಕೂ ಅವಶ್ಯಕ ಆಹಾರ. ಇದು ದೇಹದ ಉರಿ ಕಡಿಮೆ ಮಾಡುತ್ತದೆ. ಆದ್ದರಿಂದ ಈ ಹಣ್ಣುಗಳನ್ನು ತಿನ್ನಬೇಕು. ಬೆಳಗ್ಗೆ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದು ಒಳ್ಳೆಯದು.
5. ಆಲೀವ್ ಎಣ್ಣೆ: ಆಲೀವ್ ಎಣ್ಣೆ ದೇಹಕ್ಕೆ ತುಂಬಾ ಒಳ್ಳೆಯದು ಎಂದು ವೈಜ್ಞಾನಿಕವಾಗಿ ಸಾಬೀತುಗೊಂಡಿದೆ. ಇದು ಕಿಡ್ನಿಗೆ ಮಾತ್ರವಲ್ಲ, ಇಡೀ ದೇಹಕ್ಕೂ ಒಳಿತನ್ನು ಉಂಟುಮಾಡುತ್ತದೆ.
ಕಿಡ್ನಿ ಸಮಸ್ಯೆ ಇರುವವರು ತಿನ್ನಬಾರದ ಆಹಾರಗಳು:
* ಸೋಡಿಯಂ ಇರುವ ಆಹಾರ: ಅಧಿಕ ಸೋಡಿಯಂ ಇರುವ ಆಹಾರವನ್ನು ತಿನ್ನಬಾರದು. ಉಪ್ಪನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಬಳಸಬೇಕು.
* ಮದ್ಯವನ್ನು ಮುಟ್ಟಬಾರದು, ಮಾಂಸವನ್ನು ತಿನ್ನದಿದ್ದರೆ ಒಳ್ಳೆಯದು ಅಥವಾ ಸ್ವಲ್ಪ ಪ್ರಮಾಣದಲ್ಲಿ ತಿನ್ನಬಹುದು.
* ದೇಹದಲ್ಲಿ ಉಷ್ಣತೆ ಹೆಚ್ಚಿಸುವ ಆಹಾರ ಸೇವನೆ ಮಾಡಬಾರದು.
* ನಟ್ಸ್ ಮತ್ತು ಪಾಲಾಕ್ ಸೊಪ್ಪನ್ನು ತಿನ್ನದಿರುವುದು ಒಳ್ಳೆಯದು ಏಕೆಂದರೆ ಆಕ್ಸಿಲೇಟ್ (oxilate) ಇರುವ ಆಹಾರಗಳು ಕಿಡ್ನಿ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ.
* ಪಾನೀಯಗಳಲ್ಲಿ ಕೂಡ ತಂಪು ಪಾನೀಯಗಳನ್ನು ಕುಡಿಯಾರದು.
* ತುಂಬಾ ಸಕ್ಕರೆ ಬಳಸಿ ತಯಾರಿಸಿದ ಪದಾರ್ಥಗಳನ್ನು ಹೆಚ್ಚು ತಿನ್ನಲು ಹೋಗಬಾರದು.
* ಕಿಡ್ನಿ ಸಮಸ್ಯೆ ಇರುವವರು ಟೀ ಕುಡಿಯುವ ಅಭ್ಯಾಸವನ್ನು ಬಿಡಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
