Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕಿಡ್ನಿಸ್ಟೋನ್ ನಿವಾರಣೆಗೆ ಮನೆಮದ್ದು

ಈ ಕೆಳಗಿನ ವಿಧಾನಗಳು ಕಿಡ್ನಿಯಲ್ಲಿರುವ ಕಲ್ಲು ತೆಗೆಯಲು ಮಾತ್ರವಲ್ಲ, ಕಿಡ್ನಿಯಲ್ಲಿ ಕಲ್ಲು ಉಂಟಾಗದಂತೆ ತಡೆಯಲು ಸಹಕಾರಿಯಾಗಿದೆ.
1. ನೀರು: ಸಾಕಷ್ಟು ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹದಲ್ಲಿ ನಿರಿನಂಶ ಕಡಿಮೆಯಾದರೆ ನಿಶ್ಯಕ್ತಿ, ಕಿಡ್ನಿಯಲ್ಲಿ ಕಲ್ಲು , ತ್ವಚೆ ಸೌಂದರ್ಯ ಹಾಳಾಗುವುದು ಮುಂತಾದ ಸಮಸ್ಯೆ ಉಂಟಾಗುತ್ತದೆ. ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಂಡರೆ ದಿನಕ್ಕೆ 5-6 ಲೀಟರ್ ನೀರು ಕುಡಿದರೆ ಕಲ್ಲು ಮೂತ್ರದಲ್ಲಿ ಹೊರಹೋಗುವುದು.
2. ನೀರಿನಲ್ಲಿ ನೆನೆ ಹಾಕಿದ ಮೆಂತೆ: ಒಂದು ಚಮಚ ಮೆಂತೆಯನ್ನು ಒಂದು ಲೋಟ ನೀರಿನಲ್ಲಿ ನೆನೆ ಹಾಕಿ ಬೆಳ್ಳಗ್ಗೆ ತಿನ್ನಬೇಕು. ಈ ರೀತಿ ಮಾಡಿದರೆ ಕಿಡ್ನಿಯಲ್ಲಿರುವ ಕಲ್ಲು ಮಾತ್ರವಲ್ಲ ದೇಹದಲ್ಲಿರುವ ಕಷ್ಮಲಗಳನ್ನು ತೊಡೆದು ಹಾಕಲು ಸಹಕಾರಿಯಾಗಿದೆ.
3. ತಾಟಿನುಂಗು: ಇದನ್ನು ಪಾಮ್ ಫ್ರೂಟ್ ಅಂತ ಕೂಡ ಕರೆಯುತ್ತಾರೆ. ಇದರಿಂದ 'ತಾಲ್ ಮಿಶ್ರಿ' ಎಂಬ ಸಕ್ಕರೆ ತಯಾರಿಸಲಾಗುವುದು. ಇದನ್ನು ಒಂದು ರಾತ್ರಿ ನೀರಿನಲ್ಲಿ ಕಲೆಸಿ ಬೆಳಗ್ಗೆ ಎದ್ದು ಕುಡಿಯುವುದು ಒಳ್ಳೆಯದು. ಇದು ಸಿಗುವುದು ಸ್ವಲ್ಪ ಕಷ್ಟ. ಆದರೆ ಇದು ಕಿಡ್ನಿಯಲ್ಲಿರುವ ಕಲ್ಲು ನಿವಾರಣೆಗೆ ತುಂಬಾ ಸಹಕಾರಿಯಾಗಿದೆ. ಇಲ್ಲದಿದ್ದರೆ ತಾಟಿನುಂಗು ದಿನಾ ತಿನ್ನುವುದು ಕೂಡ ಒಳ್ಳೆಯದು.
4. ಬಾಳೆ ದಿಂಡು: ಬಾಳೆ ದಿಂಡಿನ ಒಳಭಾಗವನ್ನು ಪಲ್ಯ ಮಾಡಿ ತಿನ್ನಲಾಗುವುದು. ಇದು ಕಿಡಿಯಲ್ಲಿರುವ ಕಲ್ಲನ್ನು ಹೋಗಲಾಡಿಸಲು ಪರಿಣಾಮಕಾರಿಯಾದ ಮನೆ ಔಷಧಿಯಾಗಿದೆ.
5. ಕೊತ್ತಂಬರಿ ಸೊಪ್ಪು: ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಕುಡಿಯುವುದು ಕೂಡ ತುಂಬಾ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
