Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ತುಂಬಾ ತೆಳ್ಳಗಿದ್ದರೆ ಖುಷಿ ಪಡಬೇಡಿ!

ಕೆಲವರು ತೂಕ ಇಳಿಸಿಕೊಳ್ಳುವ ಭರದಲ್ಲಿ ವಿಪರೀತ ಸಣ್ಣಗಾಗುತ್ತಾರೆ. ತೂಕ ಹೆಚ್ಚಾಗದಿರಲು ಊಟ ಸರಿಯಾಗಿ ಮಾಡುವುದಿಲ್ಲ. ಈ ರೀತಿ ತುಂಬಾ ಸಣ್ಣಗಾಗುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳುವುದು. ದೇಹದ ತೂಕ ತುಂಬಾ ಕಡಿಮೆ ಇದೆಯೆ ಅಥವಾ ಮಿತಿ ಮಿರಿ ಇದೆಯೆ ಅನ್ನುವುದನ್ನು ಬಾಡಿ ಮಾಸ್ ಇಂಡೆಕ್ಸ್‌ನಿಂದ ತಿಳಿದುಕೊಳ್ಳಬಹುದು.
ಬಾಡಿ ಮಾಸ್ ಇಂಡೆಕ್ಸ್‌ನಲ್ಲಿ(BMI) ತೂಕ ಮಿತಿಯಲ್ಲಿ ಇದೆಯೆ ಅನ್ನುವುದನ್ನು ಈ ಕೆಳಗಿನ ಅಳತೆಯಿಂದ ಕಂಡುಹಿಡಿಯಬಹುದು.
BMI ಅಳತೆಯಲ್ಲಿ -16.5 ಕ್ಕಿಂತ ಕಡಿಮೆ ತೋರಿಸಿದರೆ ತುಂಬಾ ತೆಳ್ಳಗಿನ ಮೈಕಟ್ಟು
16.5ರಿಂದ 18.4 ತೋರಿಸಿದರೆ ತೆಳ್ಳಗಿನ ಮೈಕಟ್ಟು
18.5 ರಿಂದ 24.9 ಹೊಂದಿದ್ದರೆ ಆರೋಗ್ಯಕರ ಮೈಕಟ್ಟು
25.0 ರಿಂದ 29.0 ಹೊಂದಿದ್ದರೆ ಅಧಿಕ ತೂಕ
30.0 ಮತ್ತು ಅಧಿಕ ಹೆಚ್ಚಿನ ಅಳತೆ ಹೊಂದಿದ್ದರೆ ಅದು ಒಬೆಸಿಟಿ ಆಗಿದೆ.
ಇದರಲ್ಲಿ ತುಂಬಾ ತೆಳ್ಳಗೆ ಇರುವವರಿಗೆ ಈ ಕೆಳಗಿನ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ:
1. ಕಡಿಮೆ ತೂಕದ ಮಹಿಳೆಯರಲ್ಲಿ ಹಾರ್ಮೋನ್‌ಗಳ ವ್ಯತ್ಯಾಸದಿಂದಾಗಿ, ಮುಟ್ಟಿನ ಅವಧಿ ಮತ್ತು ಓವ್ಯೂಲೇಶನ್‌ನಲ್ಲಿ ವ್ಯತ್ಯಾಸ ಉಂಟಾಗಿ ಮಕ್ಕಳಾಗುವುದಕ್ಕೆ ತೊಂದರೆ ಕಾಣಿಸಿಕೊಳ್ಳಬಹುದು. ತುಂಬಾ ಕಡಿಮೆ ತೂಕದವರು ಗರ್ಭಿಣಿಯಾದರೆ ಅವಧಿ ತುಂಬುವ ಮೊದಲೆ ಹೆರಿಗೆಯಾಗುವುದು, ಕಡಿಮೆ ತೂಕದ ಮಗು ಹುಟ್ಟುವುದು ಮುಂತಾದ ಸಮಸ್ಯೆಗಳು ಕಂಡು ಬರುತ್ತವೆ.
2. ರಕ್ತಹೀನತೆ (ಅನಿಮೀಯಾ) ಸಮಸ್ಯೆ ಕಾಣಿಸಿಕೊಳ್ಳುವುದು. ದೇಹದಲ್ಲಿ ರಕ್ತ ಕಣಗಳ ಉತ್ಪತ್ತಿ ಕಡಿಮೆಯಾಗಿ ದೇಹದ ಅಂಗಗಳಿಗೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕದ ಪೂರೈಕೆ ಆಗುವುದಿಲ್. ಇದರಿಂದ ತಲೆಸುತ್ತು, ಸುಸ್ತು ಮುಂತಾದ ತೊಂದರೆಗಳು ಕಾಣಿಸಿಕೊಳ್ಳುವುದು.
3. ಕಡಿಮೆ ತೂಕದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ತೊಂದರೆ ಅಂದರೆ ಮೂಳೆ ಸವೆತ. ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗಿ ಕೈಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು, ಅಲ್ಲದೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು.
ಕಡಿಮೆ ತೂಕಕ್ಕೆ ಕಾರಣಗಳು:
ಸರಿಯಾಗಿ ತಿನ್ನದಿರುವುದು, ಟೈಪ್ 1 ಡಯಾಬಿಟಿಸ್, ಹೈಪರ್ ಥೈರಾಯ್ಡ್, ಏಡ್ಸ್‌ನಂತಹ ಕಾಯಿಲೆಗಳು, ಖಿನ್ನತೆ ಮತ್ತು ವಂಶಪಾರಂಪಾರ್ಯ
ಚಿಕಿತ್ಸೆ: ತುಂಬಾ ತೆಳ್ಳಗೆ ಇರುವವರು ವೈದ್ಯರನ್ನು ಕಂಡು ಸಲಹೆಗಳನ್ನು ಪಡೆಯಬೇಕು. ಪ್ರೊಟೀನ್ ಪುಡಿ ಮತ್ತು ಪದಾರ್ಥಗಳನ್ನು ಹೆಚ್ಚಾಗಿ ತಿನ್ನಬೇಕು, ಪ್ರತಿನಿತ್ಯ ವ್ಯಾಯಾಮ ಮಾಡಬೇಕು. ಈ ರೀತಿ ಮಾಡಿದರೆ ದೇಹದ ಆರೋಗ್ಯ ಹೆಚ್ಚಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
