Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಖಾರಗಳನ್ನು ತಿನ್ನದಿದ್ದರೆ ಆರೋಗ್ಯಕ್ಕೆ ನಷ್ಟ
ಊಟಕ್ಕೆ ಸ್ವಲ್ಪ ಖಾರವಿದ್ದರೆ ಮಾತ್ರ ಊಟ ರುಚಿಸುವುದು. ಆದರೆ ಕೆಲವರು ಖಾರ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ತುಂಬಾ ಖಾರ ತಿಂದರೆ ಹೊಟ್ಟೆ ಉರಿ ಕಾಣಿಸಿಕೊಳ್ಳುವುದು. ಆದರೆ ದೇಹದ ಆರೋಗ್ಯಕ್ಕೆ ಸ್ವಲ್ಪವಾದರೂ ಖಾರ ತಿನ್ನಬೇಕು! ಯಾವ ಬಗೆಯ ಖಾರದ ಸಾಮಾಗ್ರಿಗಳು ಆರೋಗ್ಯಕ್ಕೆ ಒಳ್ಳೆಯದು ಮತ್ತು ಅದು ಏಕೆ ಒಳ್ಳೆಯದು ಎಂಬ ಅಂಶಗಳನ್ನು ಇಲ್ಲಿ ನೀಡಲಾಗಿದೆ ನೋಡಿ:

ದೊಡ್ಡ ಮೆಣಸಿನ ಕಾಯಿ: ಕೆಂಪು ಮೆಣಸಿನ ಕಾಯಿ antioxidants ಗುಣವನ್ನು ಹೊಂದಿದ್ದು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ದೇಹದಲ್ಲಿ ಜೀರ್ಣಕ್ರಿಯೆಯನ್ನು ಹೆಚ್ಚು ಮಾಡುವುದರ ಜೊತೆಗೆ ಡಯಾರಿಯಾ ರೋಗದ ವಿರುದ್ಧ ಹೋರಾಡುವ ಸಾಮಾರ್ಥ್ಯವನ್ನು ಹೊಂದಿದೆ. ಆಹಾರ ವಿಷಮಯವಾದರೆ (ಫುಟ್ ಪಾಯಿಷನ್) ದೊಡ್ಡ ಮೆಣಸಿನ ಕಾಯಿ ತಿನ್ನುವುದು ಒಳ್ಳೆಯದು.
ಅರಿಶಿಣ: ಯಾವುದೇ ಆಹಾರವಾಗಿರಲಿ ಅದಕ್ಕೆ ಸ್ವಲ್ಪ ಅರಿಶಿಣ ಸೇರಿಸಿದರೆ ಆಹಾರದ ರುಚಿ ಹೆಚ್ಚಾಗುವುದು. ಇದು ಆಹಾರದ ರುಚಿಯಷ್ಟೇ ಅಲ್ಲ ಆರೋಗ್ಯವನ್ನು ಕೂಡ ಹೆಚ್ಚಿಸುತ್ತದೆ. ಗಂಟಲಿನಲ್ಲಿ ಕೆರತ ಉಂಟಾದರೆ ಬಿಸಿ ಹಾಲಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿದರೆ ಸಾಕು ಕೂಡಲೇ ನಿವಾರಣೆ ಆಗುವುದು. ಗಾಯಗಳು ಉಂಟಾದರೆ ಬೇಗನೆ ಒಣಗಲು, ಜೀರ್ಣಕ್ರಿಯೆ ಸುಲಭವಾಗಿ ಆಗಲು, ದೇಹದಲ್ಲಿರುವ ಕಷ್ಮಲಗಳನ್ನು ತೆಗೆದು ಹಾಕಲು ಅರಿಶಿಣ ಸಹಾಯ ಮಾಡುತ್ತದೆ. ಅರಿಶಿಣ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡುವ ಸಾಮಾರ್ಥ್ಯವನ್ನು ಹೊಂದಿದೆ.
ಬೆಳ್ಳುಳ್ಳಿ: ಹೊಟ್ಟೆಗೆ ಏನಾದರೂ ಸೋಂಕು ತಾಗಿದ್ದರೆ ಬೆಳ್ಳುಳ್ಳಿ ತಿಂದರೆ ಗುಣಮುಖವಾಗುವುದು. ಇದನ್ನು ಟೀಯಲ್ಲಿ ಹಾಕಿ ಕುಡಿದರೆ ತಲೆ ನೋವು ತಕ್ಷಣ ಕಡಿಮೆಯಾಗುತ್ತದೆ. ಕೆಮ್ಮು ಮತ್ತು ಶೀತವನ್ನು ಹೋಗಲಾಡಿಸುತ್ತದೆ. ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಖಿನ್ನತೆಯನ್ನು ಹೋಗಲಾಡಿಸುವಲ್ಲಿ ಬೆಳ್ಳುಳ್ಳಿ ಸಹಕರಿಯಾಗಿದೆ.
ಕೆಂಪು ಮೆಣಸಿನ ಕಾಯಿ: ದೇಹದಲ್ಲಿರುವ ಕಷ್ಮಲಗಳನ್ನು ಹೋಗಲಾಡಿಸುವಲ್ಲಿ ಕೆಂಪು ಮೆಣಸಿನಕಾಯಿ ತುಂಬಾ ಸಹಕಾರಿಯಾಗಿದೆ.
ಚಕ್ಕೆ: ಚಕ್ಕೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡಲು ಸಹಕಾರಿಯಾಗಿದೆ. ಅಜೀರ್ಣ ಸಮಸ್ಯೆ ಇದ್ದರೆ ಟೀಗೆ ಚಕ್ಕೆ ಹಾಕಿ ಕುಡಿದರೆ ಆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಹಲ್ಲು ನೋವು ಉಂಟಾದರೆ ಚಕ್ಕೆ ಪುಡಿ ಮಾಡಿ ಸ್ವಲ್ಪ ಹೊತ್ತು ಹಲ್ಲಿನಲ್ಲಿಟ್ಟರೆ ನೋವು ಕಡಿಮೆಯಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
