Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಸುಟ್ಟ ಗಾಯಗಳಾದಾಗ ಪ್ರಥಮ ಚಿಕಿತ್ಸೆ ಹೀಗಿರಲಿ

ತಣ್ಣೀರು ಹಾಕುವುದು: ಸಣ್ಣ ಪುಟ್ಟ ಸುಟ್ಟಗಾಯಗಳಾದರೂ ಕೂಡ ಪ್ರಥಮ ಚಿಕಿತ್ಸೆಯಾಗಿ ಮೊದಲು ಮಾಡಬೇಕಾದ ಕೆಲಸವೆಂದರೆ ತಣ್ಣೀರನ್ನು ಹಾಕುವುದು. ಉರಿ ಸ್ವಲ್ಪ ಕಡಿಮೆಯಾಗುವವರೆಗೆ ನೀರು ಹಾಕಬೇಕು. ಮೈ ಸುಟ್ಟುಕೊಂಡಿದ್ದರೆ ಸುಟ್ಟ ಬಟ್ಟೆಗಳನ್ನು ಮೈಯಿಂದ ಹಾಗೇ ಎಳೆದು ತೆಗೆಯಬಾರದು. ಬಟ್ಟೆ ಎಳೆದು ತೆಗೆದದರೆ ಬಟ್ಟೆ ಜೊತೆ ಚರ್ಮ ಕೂಡ ಕಿತ್ತುಕೊಂಡು ಬರುತ್ತದೆ. ಅದರ ಬದಲು ಮೈಗೆ ತುಂಬಾ ನೀರು ಹಾಕಬೇಕು.
ಟೂತ್ ಪೇಸ್ಟ್: ಟೂತ್ ಪೇಸ್ಟ್‌ಯನ್ನು ಹಲ್ಲುಜ್ಜಲು ಅಷ್ಟೆ ಅಲ್ಲ ಸುಟ್ಟ ಗಾಯಗಳ ಚಿಕಿತ್ಸೆಯಲ್ಲಿ ಬಳಸಬಹುದು. ಸುಟ್ಟಗಾಯಾಗಳಾದಾಗ ಟೂತ್ ಪೇಸ್ಟ್ ಹಚ್ಚಿದರೆ ಅದು ಗಾಯ ಗುಳ್ಳೆಗಳಾಗುವುದನ್ನು ತಡೆಯುತ್ತದೆ. ಅಲ್ಲದೆ ಗಾಯದ ಉರಿ ಕೂಡ ಕಡಿಮೆಯಾಗುತ್ತದೆ.
ಲೋಷನ್: ಸುಟ್ಟಗಾಯಾಗಳಾದಾಗ ಯಾವುದೇ ರೀತಿಯ ಲೋಷನ್ ಹಚ್ಚಬಾರದು. ಈ ರೀತಿ ಹಚ್ಚಿದರೆ ಗಾಯ ಮತ್ತಷ್ಟು ಹೆಚ್ಚಾಗುವುದು. ಸುಟ್ಟಗಾಯಾಗಳಾದಾಗ ಬ್ಯಾಂಡೇಜ್ ಸುತ್ತುವುದು ಕೂಡ ಒಳ್ಳೆಯದಲ್ಲ. ಸುಟ್ಟ ಗಾಯಗಳು ಗಾಳಿಗೆ ತೆರೆದುಕೊಂಡಿದ್ದರೆ ಚರ್ಮಕ್ಕೆ ಉಸಿರಾಟಕ್ಕೆ ಅನುಕೂಲವಾಗುತ್ತದೆ.
ಗಾಬರಿ ಬೀಳುವುದು:ಆಕಸ್ಮಿಕ ಬೆಂಕಿ ಕಾಣಿಸಿಕೊಂಡರೆ ಗಾಬರಿ ಬೀಳುವುದರಿಂದ ಅಪಾಯ ಮತ್ತಷ್ಟು ಹೆಚ್ಚಾಗುವುದು. ಬೆಂಕಿ ಮೈಹಚ್ಚಿಕೊಂಡಾಗ ಓಡಾಡಿದರೆ ಅಕ್ಕಪಕ್ಕದಲ್ಲಿ ಬೆಂಕಿ ಹರಡಿ, ಬೆಂಕಿ ಕೆಡುವುದರ ಬದಲು ಮತ್ತಷ್ಟು ಹೆಚ್ಚಾಗುವುದು. ಈ ಸಮಯದಲ್ಲಿ ನೆಲದಲ್ಲಿ ಮಲಗಿ ಹೊರಳಾಡಬೇಕು. ನಂತರ ಸಹಾಯಕ್ಕಾಗಿ ಕೂಗಿ, ಸಹಾಯ ಮಾಡಲು ಬಂದವರು ನೀರು ಅಥವಾ ಬ್ಲಾಂಕೆಟ್ ಹಾಕಿ ಬೆಂಕಿಯನ್ನು ನಂದಿಸುವಂತೆ ಹೇಳಿ. ಅವರು ಅವಸರದಿಂದ ಬಟ್ಟೆ ಎಳೆದರೆ ಚರ್ಮ ಕಿತ್ತು ಗಾಯದೊಡ್ಡದಾಗುವ ಸಾಧ್ಯತೆ ಹೆಚ್ಚು.
ವೈದ್ಯರನ್ನು ಸಂಪರ್ಕಿಸುವುದು: ನಂತರ ಸುಟ್ಟಗಾಯವಾದವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಆಸ್ಪತ್ರೆಗೆ ಕೊಂಡೊಯ್ಯುವಾಗ ಬಟ್ಟೆಯೆಲ್ಲಾ ಸುತ್ತಿಕೊಂಡು ಕೊಂಡೊಯ್ಯಬೇಡಿ. ಚರ್ಮಕ್ಕೆ ಗಾಳಿಯಾಡುವಂತೆ ಇದ್ದರೆ ಉರಿ ಸ್ವಲ್ಪ ಕಡಿಮೆಯಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
