Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಅಧಿಕ ವ್ಯಾಯಾಮದಿಂದ ಆರೋಗ್ಯಕ್ಕೆ ಅಪಾಯ!

ಏಕೆಂದರೆ ತುಂಬ ಹೊತ್ತು ವ್ಯಾಯಾಮ ಮಾಡಿದರೆ ಹೊಟ್ಟೆ ಹಸಿವು ಪ್ರಾರಂಭವಾಗಿ ದೇಹದಲ್ಲಿ ಕೋರ್ಟಿಸೋಲ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ದೇಹದಲ್ಲಿರುವ ಸ್ನಾಯುಗಳ ಸಾಮರ್ಥ್ಯವನ್ನು ಕುಗ್ಗಿಸಲಾರಂಭಿಸುತ್ತದೆ. ಮಿತಿ ಮೀರಿ ವ್ಯಾಯಾಮ ಮಾಡಿದರೆ ಈ ಕೆಳಗಿನ ಅಪಾಯಗಳು ಉಂಟಾಗುವುದು:
1. ಮೂಳೆ ಮುರಿಯುವುದು: ದೇಹದ ಸಾಮರ್ಥ್ಯಕ್ಕೆ ಮೀರಿ ವ್ಯಾಯಾಮ ಮಾಡಿದರೆ ಮೂಳೆ ಬಲವಾಗುವುದರ ಬದಲು ಮೂಳೆ ಮುರಿತ ಉಂಟಾಗುವುದು. ಅಲ್ಲದೆ ದೇಹದ ಅಂಗಾಂಶಗಳಲ್ಲಿ ನೋವು, ಸ್ನಾಯು ಸೆಳೆತ ಮುಂತಾದ ತೊಂದರೆ ಉಂಟಾಗುವುದು.
2. ರೋಗ ನಿರೋಧಕ ಸಾಮರ್ಥ್ಯ ಕುಂದುವುದು: ವ್ಯಾಯಾಮ ತುಂಬಾ ಹೊತ್ತು ಮಾಡುವುದರಿಂದ ರೋಗ ನಿರೋಧಕ ಸಾಮರ್ಥ್ಯ ಕಡಿಮೆಯಾಗುವುದು. ಇದರಿಂದಾಗಿ ದೇಹಕ್ಕೆ ಶೀತ, ಸೋಂಕಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಕಡಿಮೆಯಾಗುವುದು. ಅಲ್ಲದೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಕೂಡ ಅಧಿಕ ವ್ಯಾಯಾಮ ಮಾಡಿದಾಗ ವ್ಯಯವಾಗುವುದರಿಂದ ಸದೃಢರಾಗುವ ಬದಲು ರೋಗಗ್ರಸ್ಥರಾಗಬೇಕಾಗುತ್ತದೆ.
3. ಮುಟ್ಟಿನ ತೊಂದರೆ: ಅಮೆನೊರೆಹಾ ಈ ರೀತಿಯ ತೊಂದರೆ ಸ್ಪೋರ್ಟ್ಸ್ ನಲ್ಲಿರುವ ಮಹಿಳೆಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ತುಂಬಾ ಹೊತ್ತು ಕಠಿಣವಾದ ಅಭ್ಯಾಸ ಮಾಡುವುದರಿಂದ ಮೂಳೆಗಳಲ್ಲಿ ಸವೆತ ಕಂಡುಬಂದು, ಮುಟ್ಟಿನ ಸಮಸ್ಯೆ ಉಂಟಾಗುತ್ತದೆ.
4. ಅಧಿಕ ತಿನ್ನುವ ಕಾಯಿಲೆ: ತೂಕ ಕಮ್ಮಿಯಾಗಬೇಕೆಂದು ಮಿತಿ ಮೀರಿ ವ್ಯಾಯಾಮ ಮಾಡಿದರೆ ಬುಲೆಮಿಯೊದಂತಹ ಕಾಯಿಲೆ (ವಿಪರೀತ ತಿನ್ನುವ ಕಾಯಿಲೆ) ಉಂಟಾಗುವ ಸಾಧ್ಯತೆ ಕೂಡ ಹೆಚ್ಚು.
5. ನಿದ್ದೆ ಸಮಸ್ಯೆ: ಮಿತಿ ಮೀರಿ ವ್ಯಾಯಾಮ ಮಾಡಿದರೆ ದೇಹ ತುಂಬಾ ಬಳಲುವುದು. ಇದರಿಂದಾಗಿ ಬೇರೆ ಕೆಲಸ ಮಾಡುವ ಚೈತನ್ಯವಿಲ್ಲದೆ ಕೂತಲ್ಲಿಯೆ ತೂಕಡಿಕೆ, ಮಿತಿ ಮೀರಿದ ನಿದ್ದೆ ಸಮಸ್ಯೆ ಉಂಟಾಗುವುದು.
ಆರೋಗ್ಯಕರ ದೇಹಕ್ಕಾಗಿ ವ್ಯಾಯಾಮವನ್ನು ಎಷ್ಟು ಹೊತ್ತು ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಯಲು ಮುಂದೆ ಓದಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
