Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಅತಿ ಬೇಗನೆ ತೆಳ್ಳಗಾಗಿಸುವ ಡಯಟ್ ಅಪಾಯ!

ಈ ರೀತಿಯ ಆಹಾರಕ್ರಮದಿಂದ ದೇಹದ ತೂಕ ಕಡಿಮೆಯಾದರೆ ಅದು ತಾತ್ಕಾಲಿಕವಷ್ಟೆ. ಈ ರೀತಿಯ ಡಯಟ್ ದೇಹದ ಮೇಲೆ ಬೀರುವ ಅಡ್ಡ ಪರಿಣಾಮದ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ:
1.ದೇಹದ ತೂಕ ತಾತ್ಕಾಲಿಕವಾಗಿ ಇಳಿಯುವುದು: ಊಟ ಬಿಟ್ಟು ದೇಹದ ತೂಕ ಇಳಿಸಿದರೆ, ಅಷ್ಟೇ ಬೇಗನೆ ದೇಹದ ಮೊದಲಿಗಿಂತ ಹೆಚ್ಚು ದಪ್ಪಗಾಗುವುದು. ಏಕೆಂದರೆ ಈ ರೀತಿ ಡಯಟ್ ಮಾಡಿದಾಗ ದೇಹಕ್ಕೆ ಅವಶ್ಯಕವಾದ ಪೋಷಕಾಂಶಗಳು ದೊರೆಯುವುದಿಲ್ಲ. ಆದ್ದರಿಂದ ದೇಹದಲ್ಲಿ ಸಂಗ್ರಹವಾಗಿದ್ದ ಕ್ಯಾಲೋರಿಯನ್ನು ಕರಗಿಸುತ್ತದೆ. ಆದರೆ ಈ ರೀತಿಯ ಡಯಟ್ ತುಂಬಾ ಸಮಯ ಪಾಲಿಸಲಾಗುವುದಿಲ್ಲ. ಆದ್ದರಿಂದ ಪುನಃ ತಿನ್ನಲು ಪ್ರಾರಂಭಿಸಿದಾಗ ದೇಹದ ತೂಕ ಮತ್ತೆ ಹೆಚ್ಚಾಗುವುದು.
2. ತ್ವಚೆ ಕಾಂತಿ ಕುಂದುವುದು: ಹೊಳಪಿನ ತ್ವಚೆ ಬೇಕೆಂದರೆ ಪೋಷಕಾಂಸವಿರುವ ಆಹಾರ ತಿನ್ನಬೇಕು. ಆದರೆ ಈ ರೀತಿ ಡಯಟ್ ಮಾಡಿದರೆ ಮುಖದ ಕಳೆ ಮಾಯವಾಗುತ್ತದೆ. ಇದರಿಂದಾಗಿ ಅಕಾಲಿಕ ನೆರಿಗೆ ಉಂಟಾಗುವುದು.
3. ಸ್ನಾಯುಗಳು ದುರ್ಬಲವಾಗುತ್ತದೆ: ದಿನನಿತ್ಯದ ಚಟುವಟಿಕೆ ಮಾಡಲು ಶಕ್ತಿ ಇಲ್ಲದಂತೆ ಆಗುತ್ತದೆ. ಮೂಳೆಗಳ ಸಾಮರ್ಥ್ಯ ಕಡಿಮೆಯಾಗುವುದು. ಇದರಿಂದಾಗಿ ಬೇಗನೆ ಮುಪ್ಪಾಗುವುದು. ದೇಹದ ಸಾಮರ್ಥ್ಯ ಕಡಿಮೆಯಾಗುವುದು.
4. ಪೋಷಕಾಂಶಗಳ ಕೊರತೆ: ದೇಹ ದುರ್ಬಲವಾಗುವುದರಿಂದ ರೋಗ ನಿರೋಧಕ ಸಾಮರ್ಥ್ಯ ಕಡಿಮೆಯಾಗಲಾರಂಭಿಸುತ್ತದೆ. ತ್ವಚೆ ಮತ್ತು ದೇಹ ಸೊರಗುವುದು, ಕೂದಲು ಉದುರಲಾರಂಭಿಸುತ್ತದೆ.
5.ಆಹಾರಸೇವನೆಯಲ್ಲಿ ಅಸಮತೋಲನ: ಅನಾರೋಗ್ಯಕರ ಆಹಾರಕ್ರಮದಿಂದ ತುಂಬಾ ಹೊಟ್ಟೆ ಹಸಿವು, ಅನೇಕ ಆಹಾರ ಸೇವನೆ, ತಿಂದ ತಕ್ಷಣ ವಾಂತಿ ಮಾಡುವುದು ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುವುದು.
ಆದ್ದರಿಂದ ಬೇಗನೆ ತೂಕ ಕಡಿಮೆ ಮಾಡುವ ಯೋಚನೆ ಬಿಟ್ಟು ಸರಿಯಾದ ಆಹಾರಕ್ರಮ ಮತ್ತು ವ್ಯಾಯಾಮ ಮಾಡಿದರೆ ಸ್ವಲ್ಪ ನಿಧಾನವಾದರೂ ದೇಹದ ತೂಕ ಕಡಿಮೆಯಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
