Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಹಾಪ್ ಕಾಮ್ಸ್ ನಲ್ಲಿ ಹಾರಿ ಬಂದು ಕುಂತಿದೆ ಅಪಾಯ!

ಯಾರೋ ಹಿರಿಯರು ಇದಕ್ಕೆ ವಿವರ ಕೊಟ್ಟಿದ್ದರು ಒಂದು ಸಲ. ಪರಿಶುಧ್ಧ ಊಟ ಮಾಡುವಾಗ ಮನಸ್ಸು ಸ್ಥಿಮಿತದಲ್ಲಿಟ್ಟು ಕೊಂಡರೆ ಊಟ ರುಚಿಯಾಗಿರುತ್ತೆ, ದೇಹಕ್ಕೆ ಚೆನ್ನಾಗಿ ಒಗ್ಗುತ್ತೆ. ಊಟ ಮಾಡುವುದೂ ಒಂದು ತಪಸ್ಸಿನ ತರಹ. ಪದೇ ಪದೇ ಏಳುವುದರಿಂದ ನಮ್ಮ ಏಕಾಗ್ರತೆಗೆ ಭಂಗ ಬರುತ್ತೆ.
ಊಟ ಶುರುಮಾಡುವುದಕ್ಕೆ ಮೊದಲು ಎಲೆಯ ಸುತ್ತ ನೀರನ್ನು ಪ್ರೋಕ್ಷಣೆ ಮಾಡುವದರಿಂದ ಹುಳ, ಹುಪ್ಪಟ್ಟೆಗಳು ಎಲೆಯ ಮೇಲೇರಿ ನಮ್ಮ ಊಟದ ಜೊತೆ ಪಾಲುಗಾರಾಗುವುದು ತಪ್ಪತ್ತೆ. ಊಟವನ್ನು ಒಮ್ಮೆಲೇ ಬಕಾಸುರನ ಹಾಗೆ ಅಟ್ಟ್ಯಾಕ್ ಮಾಡುವ ಬದುಲು, ಒಂದೊಂದೇ ಅಗಳನ್ನು ತಿಂದರೆ ದವಡೆ ಹಲ್ಲು ಮುರಿದು ಹೋಗುವ ಸಂಭವವಿಲ್ಲ ಇತ್ಯಾದಿ. ಇದನ್ನು ಬಹಳಮನೆಗಳಲ್ಲಿ 'ಅ' ಇಂದ 'ಷ' ವರೆಗೆ ಪಾಲಿಸಿಕೊಂಡುಂದಿರುವುದನ್ನು ನೋಡಿದ್ದೇನೆ.
ಈಗಿನ ಮಾಡರ್ನ ಪದ್ದತಿ ಏನಿರಬಹುದು? ನೆಲದಲ್ಲಿ ಕೂತರೆ ಧೂಳು, ಸೂಕ್ಷಾಣು ಜೀವಿಗಳು ಊಟದ ಜೊತೆಗೆ ಸೇರಿ ಅದನ್ನು ಸೇವಿಸಿದರೆ ಆರೋಗ್ಯ ಕೆಡುವುದು ಅಂತ ಊಟ ಬಹಳ ಮನೆಗಳಲ್ಲಿ ಡೈನಿಂಗ್ ಟೇಬಲ್ ನಲ್ಲಿಯೆ ಊಟ. ಅಪ್ಪಟ ಭಾರತೀಯ ಶೈಲಿಯಲ್ಲಿ (ಕೈಯಲ್ಲಿ) ತಿಂದರೆ ಉಗುರುಸಂದಿನಲ್ಲಿ ಸೇರಿರುವ ಕೊಳೆ ಹೊಟ್ಟೆಗೆ ಹೋಗಬಹುದೆಂಬ ಹೆದರಿಕೆಯಿಂದ, 'ಈ ತಂಟೆಯೇಬೇಡ', ಅಂತ ತಿಂಡಿಯಿಂದ ಊಟದವರೆಗೆ ಸ್ಪೂನ್, ಫೋರ್ಕ್ ಹಿಡೀತಾರೆ.
ಮುಂಚೆಯೆಲ್ಲಾ ನಮ್ಮಲ್ಲಿರುವ ಒಂದಿಷ್ಟು ವ್ಯಾಪಾರಿಗಳು ತಮ್ಮ ಲಾಭಕ್ಕಾಗಿ, ಅಕ್ಕಿಗೆ ಬೆಣಚುಕಲ್ಲು, ಗೋಧಿಗೆ ರಬ್ಬರ್ ಪೀಸುಗಳು, ತುಪ್ಪಕ್ಕೆ ಪ್ರಾಣಿಗಳ ಕೊಬ್ಬು, ಮೆಣಸಿಗೆ ಪರಂಗಿ ಬೀಜ,ಕಡಲೇಕಾಯಿಯಲ್ಲಿ ಅದೇ ಬಣ್ಣದ ಕಲ್ಲುಗಳು ಇತ್ಯಾದಿ ಹಾಕೋವ್ರು.
ಈಗ ಆಧುನಿಕ ವಿಧಾನ ಬಳಕೆಗೆ ಬಂದಿದೆ. ನಿಮ್ಮ ಕೋಸ್ಗಡ್ಡೆಗೆ, ದೊಣ್ಣೆ ಮೆಣಸಿನ ಕಾಯಿಗೆ 'ಬಿ' ಕಾಂಪ್ಲೆಕ್ಸ್ ಇಂಜೆಕ್ಷನ್ ಹಾಕಿ, ಒಂದೊಂದು ತರಕಾರಿಯೂ, ಭೀಮ, ಘಟೋತ್ಕಚನ ಹಾಗೆ ಮಾಡೀದಾರೆ. ಆದು ಬೆಳದದ್ದು ಟೆಕ್ಸಸ್, ಅಮೇರಿಕಾದಲ್ಲಿ! ಇದು ಒಬಾಮಾ ಇಲ್ಲಿಗೆ ಬಂದಾಗ ನಮ್ಮ ಪ್ರಧಾನಿ ಮನಮೋಹನಸಿಂಗ್ ಅವರ ಜೊತೆ ಮೋಹಕ ಮುಗುಳ್ನಕ್ಕು ಮಾಡಿದ ಒಪ್ಪಂದದ ಪರಿಣಾಮದ ಫಲ! ಅದನ್ನು ಸೆಲ್ಫ್ ಅಡಿಸೀವ್ ಪ್ಲಾಸ್ಟಿಕ್ ಕವರನಲ್ಲಿ ಸುತ್ತಿ ಮೂರು ತಿಂಗಳ ಹಿಂದೆ ಇಲ್ಲಿಗೆ ಕಳಿಸಿ, ನಮ್ಮ ಹಾಪ್ ಕಾಮ್ ನಲ್ಲಿ ಹಾರಿ ಬಂದು ಕೂತಿದೆ! ಪ್ಲಾಸ್ಟಿಕ್ ತೆಗೆಯೊಷ್ಟರಲ್ಲಿ ನಿಮಗೆ ಎರಡು ಚಮಚ ಗ್ಲೂಕೋಸ್ ಬೇಕೇ ಬೇಕು!
ಜೊತೆಗೆ, 'ಜೆನೆಟಿಕಲೀ ಮಾಡಿಫೈಡ್' (ವಂಶವಾಹಿ ಸುಧಾರಿತ ಆಹಾರ) ಅಂತ ಹೇಳಿ, ಸೌತೆಕಾಯಿಯ ಕುಲ, ಗೋತ್ರ ಎಲ್ಲಾ ಬದಲಾಯಿಸೋಹಾಗೆ ಅದಕ್ಕೆ ಇಂಜಕ್ಷನ್ ಕೊಟ್ಟು ಅದನ್ನು ಕುಂಬಳಕಾಯಿ ಗಾತ್ರ ಮಾಡಿಡುತ್ತಾರೆ! ಅದರ ಬೀಜಗಳು, ಗೋಡಂಬಿ ಗಾತ್ರ ಇರತ್ತೆ. ಕೋಳಿಗೆ ಜಿ ಎಮ್ ಮಂತ್ರ ಹಾಕಿ, ಅದನ್ನು ಹಂದಿ ಗಾತ್ರ ಮಾಡ್ತಾರೆ.
ಮುಂಚೆಯೆಲ್ಲಾ ಡಾಕ್ಟರ್ ಗಳು ನಮಗೆಲ್ಲಾ ತಾಖತ್ತು ಬರಲಿ ಅಂತ, ಬಿ12 ಇಂಜೆಕ್ಷನ್ ಕೊಡೋವ್ರು. ಈಗ ನಾವು ತಿನ್ಮುತ್ತಿರುವ ಆಹಾರಕ್ಕೆ ಲ್ಯಾಬ್ನಲ್ಲಿ ಡೈರೆಕ್ಟಾಗಿ ಹಾರ್ಮೋನ್ ಗಳನ್ನು, ಕೃತಕ ಬಣ್ಣ ಮತ್ತು ಸಿಹಿಯನ್ನು ಹಾಕಿ ಬಿಡ್ತಾರೆ! ನೀವು ಏನೂ ಮಾಡ್ಬೇಕಾಗಿಲ್ಲ! ಬರೀ ಕೂತ್ಕೊಂಡ್ ತಿನ್ಬೇಕು. ಅಷ್ಟೇ! ಈಗ ನಿಮ್ಮ ಹೊಟ್ಟೆ ಆಸಿಡ್ ಮತ್ತು ಗ್ಯಾಸ್ ಫ್ಯಾಕ್ಟರಿ! ಸೋಡಾ ಕುಡಿದರೆ ಈ ಗ್ಯಾಸ್ಗಳು ಜಗ್ಗಲ್ಲ!
ಅದಕ್ಕೇ ಇರಬೇಕು. ಹೊಸ ಹೊಸ ಕಾಯಿಲೆಗಳು ಹುಡ್ಕೊಂಡಿವೆ! ಅನೀಮಿಯ, ಖಿನ್ನತೆ, ಆಲ್ಜೈಮರ್ಸ್, ಕ್ಯಾನ್ಸರ್ ಇತ್ಯಾದಿ.
ಮುಂಚೆಯೆಲ್ಲಾ ಸಿಗರೇಟು ಸೇದಿದರೆ ಕ್ಯಾನ್ಸರ್ ಬರುತ್ತೆಅಂತ ಹೆದರ್‍ಸೋವ್ರು. ಈಗ ಹೊಟ್ಟೆ ತುಂಬಾ ಊಟ ಮಾಡಿದ್ರೆ ಕ್ಯಾನ್ಸರ್ ಬರುತ್ತೆ! ಮದುವೆ, ಮುಂಜೀಲಿ 'ಹೊಟ್ಟೆ ತುಂಬಾ ಊಟ ಮಾಡಿ' ಅಂತ ಯಾರಾದ್ರೂ ಉಪಚಾರ ಮಾಡಿದ್ರೆ ನನಗೆ ಮೈಯೆಲ್ಲಾ ನಡುಕ ಬರುತ್ತೆ!
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
