Latest Updates
-
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ!
ಮುಂಜಾನೆಯೇ ಕಣ್ ಕತ್ತಲೆ ಬಂದರೆ ನಿರ್ಲಕ್ಷ್ಯ ಬೇಡ!

ಬೆಳಿಗ್ಗೆ ಎದ್ದ ತಕ್ಷಣ ಕಣ್ ಮಂಜಾಗಿ ಬಿದ್ದು ಬಿಡುವುದು. ಸ್ವಲ್ಪ ಹೊತ್ತಿನ ನಂತರ ಎಚ್ಚರ ಆದಾಗ ಏನಾಯಿತು ಎಂದು ಅವರಿಗೇ ಗೊತ್ತಿರುವುದಿಲ್ಲ. ಇದನ್ನೇ ಬ್ಲಾಕ್ಡ್ ಔಟ್ ಅಥವಾ ಕಣ್ ಮಂಜಾಗುವುದು ಅಂತ ಹೇಳುವುದು. ಈ ರೀತಿ ಉಂಟಾಗಲು ಕಾರಣದ ಬಗ್ಗೆ ತಿಳಿಯಲು ಮುಂದೆ ಓದಿ.
1. ಮದ್ಯಪಾನ: ರಾತ್ರಿ ಮಿತಿ ಮೀರಿ ಕುಡಿದರೆ ಬೆಳಗ್ಗೆ ಏಳುವಾಗ ಅದರ ಮಬ್ಬು ಇನ್ನೂ ಇರುತ್ತದೆ. ರಾತ್ರಿಯಲ್ಲಿ ಕುಡಿತದಿಂದ ವಾಂತಿಯಾಗಿದ್ದರೆ ದೇಹದ ಶಕ್ತಿ ಮತ್ತಷ್ಟು ಕಡಿಮೆಯಾಗಿರುತ್ತದೆ. ಈ ರೀತಿಯಾದಾಗ ಬೆಳಗ್ಗೆ ಎದ್ದ ಕೂಡಲೇ ಕಣ್ ಕತ್ತಲೆ ಬರುವುದು, ಹಿಂದಿನ ರಾತ್ರಿಯ ಬಗ್ಗೆ ಏನೂ ತಕ್ಷಣ ನೆನಪಿಗೆ ಬರದೆ ತಾತ್ಕಾಲಿಕ ಮರೆವು ಉಂಟಾಗುತ್ತದೆ.
2. ಕಡಿಮೆ ರಕ್ತದೊತ್ತಡ: ದೇಹದಲ್ಲಿ ರಕ್ತದೊತ್ತಡ ಕಡಿಮೆಯಾದಾಗ ಕಣ್ಣು ಮಂಜಾಗಿ ಪ್ರಜ್ಞಾಹೀನರಾಗುತ್ತಾರೆ. ಊಟ ಸರಿಯಾಗಿ ಮಾಡದಿದ್ದರೆ, ಪೌಷ್ಠಿಕ ಆಹಾರದ ಕೊರತೆಯಿದ್ದರೆ, ಉಪವಾಸ ಇವುಗಳಿಂದ ರಕ್ತಸಂಚಲನದಲ್ಲಿ ವ್ಯತ್ಯಾಸ ಉಂಟಾಗಿ ಕಣ್ಣು ಕತ್ತಲಾಗುವುದು.
3. ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗುವುದು: ದೇಹದಲ್ಲಿ ಸಕ್ಕರೆ ಅಂಶ ಜಾಸ್ತಿಯದರೂ ತೊಂದರೆ, ಕಡಿಮೆಯಾದರೂ ತೊಂದರೆ. ಆರೋಗ್ಯವಾಗಿರಲು ಸಕ್ಕರೆ ಅಂಶ ಸಮಪ್ರಮಾಣದಲ್ಲಿರ ಬೇಕು. ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾದರೂ ತುಂಬಾ ಚಳಿಯಾಗುವುದರ ಜೊತೆಗೆ ಕಣ್ಣಿಗೆ ಕತ್ತಲೆ ಆವರಿಸುತ್ತದೆ. ಮೆದುಳಿಗೆ ಸಕ್ಕರೆ ಅಂಶ ಪೂರೈಕೆಯಾಗದಿದ್ದರೆ ಈ ರೀತಿ ಉಂಟಾಗುತ್ತದೆ. ಆದ್ದರಿಂದ ಈ ರೀತಿ ಲಕ್ಷಣ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
4. ಒತ್ತಡ: ತುಂಬಾ ಮಾನಸಿಕ ಒತ್ತಡ ಅನುಭವಿಸಿದಾಗ ಹಾರ್ಮೋನ್ ಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಇದರಿಂದ ಕೂಡ ತಲೆಸುತ್ತು ಬರುತ್ತದೆ.
5. ಬಿಗಿಯಾದ ಉಡುಪು ಧರಿಸುವುದು: ತುಂಬಾ ಬಿಗಿಯಾದ ಉಡುಪು ಧರಿಸಿದಾಗ ದೇಹಕ್ಕೆ ಆಮ್ಲಜನಕದ ಪೂರೈಕೆ ಸರಿಯಾಗಿ ಆಗುವುದಿಲ್ಲ. ಇದರಿಂದ ಕೂಡ ತಲೆಸುತ್ತು ಉಂಟಾಗುವುದು.
ಬೆಳಗ್ಗೆ ಎದ್ದಾಗ ಕಣ್ ಮಂಜಾಗುವ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣ ವೈದ್ಯರ ಸಲಹೆಗಳನ್ನು ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
