Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಸೋಮವಾರದ ಸೋಮಾರಿತನಕ್ಕೆ ಇಲ್ಲಿದೆ ಪರಿಹಾರ

ಸೋಮಾರಿತಕ್ಕೆ ಕಾರಣ:
1. ವಾರವಿಡೀ ಬೆಳಗ್ಗೆ 6ಕ್ಕೆ ಏಳುವುದು ರಾತ್ರಿ 10-11ಕ್ಕೆ ಮಲಗುವುದು ದಿನಚರಿಯಾಗಿದ್ದು ರಜಾ ದಿನದಂದು ಬೆಳಗ್ಗೆ 10 ಗಂಟೆವರೆಗೆ ಮಲಗಿ ರಾತ್ರಿ ತಡೆವಾಗಿ ಮಲಗುವುದರಿಂದ ಜೀವನ ಶೈಲಿಯಲ್ಲಿ ವ್ಯತ್ಯಾಸವಾಗಿ ಸೋಮವಾರ ಆಕಳಿಕೆ, ನಿದ್ದೆ ಬರುವುದು ಎಲ್ಲಾ ಉಂಟಾಗುತ್ತದೆ.
2. ಸೋಮವಾರ ಏಳುವಾಗ ತಲೆ ನೋವು ಕಾಣಿಸಿಕೊಂಡರೆ, ಆ ರೀತಿಯ ತಲೆನೋವು ವೀಕೆಂಡ್ ನಲ್ಲಿ ಅತಿ ಹೆಚ್ಚು ನಿದ್ದೆ ಮಾಡಿದರ ಪ್ರಭಾವ.
ಹೋಗಲಾಡಿಸುವ ವಿಧಾನ:
1. ಸೋಮವಾರ ಆಲಸ್ಯ ಬರದಂತೆ ತಡೆಯಲು ವೀಕೆಂಡ್ ನಲ್ಲಿ ಯಾವತ್ತಿಗಿಂತ ಒಂದು ಗಂಟೆ ತಡವಾಗಿಯೆ ಏಳಿ. ಆದರೆ ಎದ್ದ ನಂತರ ಸ್ವಲ್ಪ ಹೊತ್ತು ವ್ಯಾಯಾಮ ಮಾಡಿ. ಮದ್ಯಾಹ್ನದ ಹೊತ್ತು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬೇಕು. ರಾತ್ರಿ ಗರಿಷ್ಠ 8 ಗಂಟೆ ನಿದ್ದೆ ಮಾಡಿದರೆ ಸೋಮವಾರ ಸೋಮಾರಿತನ ಬರುವುದಿಲ್ಲ.
2. ವೀಕೆಂಡ್ ನಲ್ಲಿ ಹೆಚ್ಚು ಪ್ರಯಾಣ ಮಾಡಿದರೆ ಸೋಮವಾರ ಅದರ ಸುಸ್ತು ಕೆಲಸದ ಮೆಲೆ ಪರಿಣಾಮ ಬೀಳುತ್ತದೆ. ಆದ್ದರಿಂದ ವಾರಂತ್ಯದಲ್ಲಿ ಹೆಚ್ಚು ಪ್ರಯಾಣ ಮಾಡುವುದಿದ್ದರೆ ಶುಕ್ರವಾರ ರಾತ್ರಿ ಹೊರಟು ಶನಿವಾರ ಸುತ್ತಾಡಿ ಭಾನುವಾರ ವಿಶ್ರಾಂತಿ ತೆಗೆದುಕೊಳ್ಳಬೇಕು. ಹೀಗೆ ಮಾಡಿದರೆ ಸೋಮವಾರ ಚಟುವಟಿಕೆಯಿಂದ ಇರಬಹುದು.
3. ಕೆಲವೊಮ್ಮೆ ಮಾನಸಿಕ ಒತ್ತಡದಿಂದ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಸೋಮವಾರ ಯಾವುದಾದರೂ ಕೆಲಸವನ್ನು ಪೂರ್ಣ ಮಾಡಿ ಒಪ್ಪಿಸಬೇಕೆಂಬ ಡೆಡ್ ಲೈನ್, ಮೀಟಿಂಗ್ ಇವೆಲ್ಲವೂ ಒತ್ತಡವನ್ನು ತರುವುದರಿಂದ ತಲೆನೋವು ಮತ್ತು ಕೆಲಸವನ್ನು ನಿರ್ಗಳವಾಗಿ ಮಾಡಲು ಸಾಧ್ಯವಾಗುವುದಿಲ್ಲ.
4. ಸಾಧ್ಯವಾದರೆ ಶುಕ್ರವಾರ ರಜೆ ಹಾಕಿ ಶನಿವಾರ ಮತ್ತು ಭಾನುವಾರ ಮಧ್ಯಾಹ್ನದ ಮೇಲೆ ಬಂದು ಕೆಲಸ ಮಾಡಿದರೆ ಸೋಮವಾರ ಯಾವುದೇ ಸೋಮರಿತನವಿಲ್ಲದೆ ಚಟುವಟಿಕೆಯಿಂದ ಕೆಲಸ ಮಾಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
