Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಡಯೆಟ್ ಪಿಲ್ಸ್ ಆರೋಗ್ಯಕ್ಕೆ ಡೇಂಜರ್!

ನಿಯಮಿತವಾಗಿ ವ್ಯಾಯಾಮ ಮಾಡಿದರೆ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬಹುದು. ಆದರೆ ವ್ಯಾಯಾಮ ಮಾಡಲು ಸೋಮಾರಿತನ. ಆಗ 'ಸಣ್ಣಗಾಗ ಬೇಕೆ ಈ ಮಾತ್ರೆ ಸೇವಿಸಿ' ಎನ್ನುವ ಜಾಹೀರಾತುಗಳು ಹೆಚ್ಚಿನ ಪ್ರಭಾವವನ್ನು ಬೀರುತ್ತದೆ.
ಡಯೆಟ್ ಪಿಲ್ಸ್ ಗಳು ಆಪತ್ಬಾಂಧವರಂತೆ ಕಾಣಿಸಲಾರಭಿಸುತ್ತದೆ. ಆದರೆ ಇಂತಹ ಡಯೆಟ್ ಪಿಲ್ಸ್ ಗಳು ದೇಹದ ಮೇಲೆ ಅನೇಕ ಅಡ್ಡ ಪರಿಣಾಮವನ್ನು ಉಂಟುಮಾಡುತ್ತದೆ. ಆದ್ದರಿಂದ ಡಯೆಟ್ ಪಿಲ್ಸ್ ಸೇವಿಸುವ ಮೊದಲು ಇದರ ಅಡ್ಡಪರಿಣಾಮದ ಬಗ್ಗೆ ತಿಳಿದುಕೊಂಡು ಅಂತಹ ಮಾತ್ರೆಗಳನ್ನು ಸೇವಿಸಬೇಕೆ? ಎಂದು ಯೋಚಿಸಿ.
1. ಡಯೆಟ್ ಮಾತ್ರೆಗಳಲ್ಲಿ 30 ದಿನ ಅಥವಾ 45 ದಿನಗಳವರೆಗೆ ತಿಂದರೆ ಸಣ್ಣಗಾಗ ಬಹುದು ಎಂದು ಬರೆದಿರುವ ಸೂಚನೆಯನ್ನು ನೋಡಿರಬಹುದು, ಆದರೆ ಇದನ್ನು ಸೇವಿಸುವುದರಿಂದ ಈ ರೀತಿಯ ಮಾತ್ರೆಗಳಿಗೆ ಅಡಿಕ್ಟ್ ಆಗುತ್ತಾರೆ. ಡಯೆಟ್ ಮಾತ್ರೆ ಸೇವಿಸುವುದನ್ನು ಬಿಟ್ಟ ಸ್ವಲ್ಪ ದಿನದಲ್ಲಿ ಪುನಃ ದಪ್ಪಗಾಗುವುದರಿಂದ ಅದನ್ನು ನಿರಂತರವಾಗಿ ತೆಗೆದು ಕೊಳ್ಳುವ ಅಭ್ಯಾಸ ಬಂದು ಬಿಡುತ್ತದೆ.
2. ಈ ರೀತಿಯ ಡಯೆಟ್ ಮಾತ್ರೆಗಳು ಅತಿ ಶೀಘ್ರವೆ ತೂಕ ಕಡಿಮೆಮಾಡುವುದರಿಂದ ದೇಹದಲ್ಲಿ ನಿಶ್ಯಕ್ತಿ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಹೊಟ್ಟೆಯಲ್ಲಿ ಅನೇಕ ರೀತಿಯ ತೊಂದರೆಗಳು ಕಾಣಿಸಿಕೊಳ್ಳತೊಡಗುತ್ತದೆ.
3. ಡಯೆಟ್ ಮಾತ್ರೆಗಳು ದೇಹದ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ಎ, ಡಿ, ಇ ಮತ್ತು ಕೆ ವಿಟಮಿನ್ ಗಳನ್ನು ಕಡಿಮೆ ಮಾಡುವುದರಿಂದ ಅನಾರೋಗ್ಯಗಳು ಹೆಚ್ಚಾಗುತ್ತದೆ.
4. ತೂಕ ಕಡಿಮೆ ಮಾಡುವ ಮಾತ್ರೆಗಳು ಮಕ್ಕಳಲಾಗದಿರುವಿಕೆ, ಕಿಡ್ನಿ ಸಮಸ್ಯೆ, ಕೂದಲು ಉದುರುವುದು, ಎದೆ ನೋವು , ಹೃದಯದ ಸಮಸ್ಯೆ ಮುಂತಾದವುಗಳಿಗೆ ಆಮಂತ್ರಣವನ್ನು ಕೊಡುತ್ತದೆ.
ಆದ್ದರಿಂದ ಸಣ್ಣಗಾಗಲು ವ್ಯಾಯಾಮ, ಆರೋಗ್ಯಕರ ಆಹಾರಕ್ರ ಪಾಲಿಸಿ, ಇವುಗಳನ್ನು ಮಾಡಲು ಕಷ್ಟ ಅನಿಸಿ ಮಾತ್ರೆಗಳಂತಹ ಸುಲಭ ಉಪಾಯ ಹುಡುಕಿದರೆ ಆರೋಗ್ಯ ಮೇಲೆ ಅಡ್ಡ ಪರಿಣಾಮ ಖಂಡಿತ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
