Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸಂಜೆ ಸಮಯದ ಆರೋಗ್ಯಕರ ಸ್ನ್ಯಾಕ್ಸ್ ಯಾವುದು?

ಸಂಜೆ ತಿಂಡಿಗೆ ಏನನ್ನು ತಿನ್ನಬಹುದು?
* ಬಾಳೆ ಹಣ್ಣು: ಪೋಷಕಾಂಶವಿರುವ ಈ ಹಣ್ಣು ರುಚಿಯೊಂದಿಗೆ ಆರೋಗ್ಯಕ್ಕೂ ಹಿತ. ಆದರೆ ಒಂದು ಬಾಳೆಹಣ್ಣಿಗಿಂತ ಹೆಚ್ಚು ತಿನ್ನಬಾರದು. ಇದರಿಂದ ತೂಕ ಹೆಚ್ಚಬಹುದು. ವಿಟಮಿನ್ ಬಿ6 ಮತ್ತು ಸಿ ಇರುವ ಈ ಬಾಳೆಹಣ್ಣು ಸಂಜೆಯ ಬಳಲಿಕೆಯನ್ನು ನಿವಾರಿಸಿ ಶಕ್ತಿ ನೀಡುತ್ತದೆ. ಕೆಲಸಕ್ಕೆ ಹೋಗುವವರಿಗಂತೂ ಒಂದು ಬಾಳೆಹಣ್ಣಿನ ಸೇವನೆ ಒತ್ತಡ ನಿವಾರಿಸಲು ಸಹಕಾರಿ.
* ಮೊಸರು: ಹಾಲಿನ ಉತ್ಪನ್ನವಾದ ಮೊಸರು ಸಂಜೆ ಸೇವನೆಗೆ ಒಳ್ಳೆಯದು. ಆದರೆ ಕಡಿಮೆ ಕೊಬ್ಬಿನಂಶವಿರುವ ಮೊಸರನ್ನು ಆಯ್ದುಕೊಳ್ಳಬೇಕು. ಹಾಲಿಗೆ ಹೋಲಿಸಿದರೆ ಮೊಸರು ಬೇಗನೆ ಜೀರ್ಣಗೊಳ್ಳುತ್ತದೆ ಆದ್ದರಿಂದ ಹಾಲು ಹಿಡಿಸದವರಿಗೆ ಮೊಸರು ಆರೋಗ್ಯಕರ ಆಯ್ಕೆ. ಕ್ಯಾಲ್ಸಿಯಂ ಹೆಚ್ಚಿರುವ ಮೊಸರು ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾ ಉತ್ಪಾದನೆಗೆ ಸಹಕಾರಿ.
* ತರಕಾರಿ ಸ್ಯಾಂಡ್ ವಿಚ್: ತರಕಾರಿಗಳಲ್ಲಿ ದೇಹಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳಿರುವುದರಿಂದ ತರಕಾರಿ ಸ್ಯಾಂಡ್ ವಿಚ್ ಸೇವನೆ ಸಂಜೆ ಸಮಯಕ್ಕೆ ಒಳ್ಳೆಯದು. ಬ್ರೆಡ್ ನೊಂದಿಗೆ ಕ್ಯಾರೆಟ್, ದುಂಡುಮೆಣಸಿನಕಾಯಿ, ಸೌತೆಕಾಯಿ, ಟೊಮೆಟೊ, ಈರುಳ್ಳಿ, ಕೊತ್ತಂಬರಿ ಇವುಗಳನ್ನು ಹಾಕಿ ತಿಂದರೆ ರುಚಿ ಜೊತೆ ಹೊಟ್ಟೆಯೂ ತುಂಬುತ್ತದೆ. ಚೀಸ್ ಜೊತೆಗಿದ್ದರೆ ಇನ್ನೂ ಚೆಂದ.
* ಫ್ರೂಟ್ ಸಲಾಡ್: ಹಣ್ಣುಗಳ ಮಿಶ್ರಣದ ಸಲಾಡ್ ಆರೋಗ್ಯದೊಂದಿಗೆ ದಣಿವನ್ನೂ ನಿವಾರಿಸುತ್ತೆ, ಬಾಳೆ ಹಣ್ಣು, ಸ್ಟ್ರಾಬೆರಿ, ಸೇಬು, ದ್ರಾಕ್ಷಿ, ಮೊಸರು, ನಿಂಬೆರಸ ಎಲ್ಲವನ್ನೂ ಸೇರಿಸಿ ತಿಂದರೆ ಬಳಲಿಕೆಯ ಸಂಜೆ ಚೈತನ್ಯಭರಿತವಾಗುತ್ತದೆ. ಈ ಹಣ್ಣಿನ ಮಿಶ್ರಣಕ್ಕೆ ಸಕ್ಕರೆ ಬೆರೆಸುವ ಅವಶ್ಯಕತೆಯಿಲ್ಲದಿರುವುದರಿಂದ ಮತ್ತು ಇವುಗಳಲ್ಲಿ ವಿಟಮಿನ್ ಸಿ, ಫೋಲಿಕ್ ಆಸಿಡ್, ಮತ್ತು ನಾರಿನಂಶ ಇರುವುದರಿಂದ ಆರೋಗ್ಯಕ್ಕೆ, ಕೂದಲು ಮತ್ತು ತ್ವಚೆಗೆ ಹೆಚ್ಚು ಉಪಯೋಗ ಪಡೆಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
