Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹಬ್ಬದ ಸಮಯ ತೂಕ ಹೆಚ್ಚದಿರಲು ಹೀಗೆ ಮಾಡಿ

* ಸಮತೋಲನವಾಗಿ ತಿನ್ನಿ: ಹಬ್ಬಗಳಲ್ಲಿ ತಿಂಡಿ ತಿನಿಸುಗಳ ಆಕರ್ಷಣೆ ಸಾಮಾನ್ಯ. ಡಯಟ್ ಕಾರಣಕ್ಕಾಗಿ ಎಲ್ಲವನ್ನೂ ತ್ಯಜಿಸಲೂ ಸಾಧ್ಯವಿಲ್ಲ. ಆದ್ದರಿಂದ ಇಷ್ಟಪಟ್ಟ ತಿಂಡಿಯನ್ನು ಸ್ವಲ್ಪವೇ ತಿಂದರೆ ಸಾಕು. ಗಬ ಗಬನೆ ಹೆಚ್ಚು ತಿಂದು ಕ್ಯಾಲೊರಿ ಹೆಚ್ಚಿಸಿಕೊಳ್ಳುವುದಕ್ಕಿಂತ ಸ್ವಲ್ಪವೇ ತಿಂದರೆ ಒಳಿತು.
* ವ್ಯಾಯಾಮ ಬಿಡಬೇಡಿ: ಹಬ್ಬಗಳ ಸಮಯದಲ್ಲಿ ರಜೆ ಇತ್ತೆಂದು, ಹೆಚ್ಚು ತಿಂದ ಕಾರಣಕ್ಕೆಂದು ವ್ಯಾಯಾಮವನ್ನು ಬಿಡಬೇಡಿ. ತಿಂದ ಪದಾರ್ಥ ಕರಗದಂತೆ ಹಾಗೆಯೇ ಬಿಡಬೇಡಿ. ಒಂದೈದು ನಿಮಿಷ ಹೆಚ್ಚಿಗೆಯೇ ನಿಮ್ಮ ವ್ಯಾಯಾಮವಿರಲಿ. ಹೆಚ್ಚು ನಡೆದಾಡಿದರೂ ಆಯಿತು. ಇದರಿಂದ ಹಬ್ಬದ ಸಮಯದಲ್ಲಿ ಸೇರಿದ ಹೆಚ್ಚು ಕ್ಯಾಲೊರಿ ತೊಲಗಲು ಸಹಾಯವಾಗುತ್ತದೆ.
* ಕಡಿಮೆ ಕೊಬ್ಬಿನಂಶ ಬಳಸಿ: ನೀವೆ ಸ್ವೀಟ್ ತಯಾರಿಸುತ್ತಿದ್ದರೆ ಕಡಿಮೆ ಕೊಬ್ಬಿನಂಶವಿರುವ ಸಾಮಗ್ರಿಗಳನ್ನು ಬಳಸಿ. ಸಕ್ಕರೆ ಬದಲು ಜೇನು, ಬೆಲ್ಲ, ಇಂತಹ ಕಡಿಮೆ ಕೊಬ್ಬಿರುವ ಅಂಶಗಳನ್ನು ಅಡುಗೆಯಲ್ಲಿ ಬಳಸಿ.
* ಕರಿದ ಪದಾರ್ಥಕ್ಕಿಂತ ಡ್ರೈ ಫ್ರೂಟ್ ಇರಲಿ: ಒಣಹಣ್ಣುಗಳು ಮತ್ತು ಕರಿದ ಸ್ವೀಟ್ ಎರಡರ ಆಯ್ಕೆಯಲ್ಲಿ, ಡ್ರೈ ಫ್ರೂಟ್ ಆಯ್ಕೆ ನಿಮ್ಮದಿರಲಿ. ಡ್ರೈ ಫ್ರೂಟ್ ನಲ್ಲಿ ಕ್ಯಾಲೊರಿ ಹೆಚ್ಚಿದೆಯೆಂದಾದರೂ ಸ್ವೀಟ್ ನಷ್ಟು ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ.
* ತಿನ್ನುವ ಮುನ್ನ ನೀರು ಕುಡಿಯಿರಿ: ನೀವು ತಿಂಡಿಯನ್ನು ತಿನ್ನಲು ಆರಂಭಿಸುವ ಮುನ್ನ ಹೊಟ್ಟೆ ತುಂಬ ನೀರು ಕುಡಿಯಿರಿ. ಇದರಿಂದ ಸ್ವೀಟ್ ತಿನ್ನುವು ಪ್ರಮಾಣವೂ ಕಡಿಮೆಯಾಗುತ್ತದೆ. ಕಡಿಮೆ ಪ್ರಮಾಣದಲ್ಲಿ ಸೇವಿಸುವುದರಿಂದ ಕ್ಯಾಲೊರಿಯೂ ಹೆಚ್ಚು ಸೇರಿಕೊಳ್ಳುವುದಿಲ್ಲ.
* ನಿಧಾನವಾಗಿ ತಿನ್ನಿ: ತಿನ್ನುವಾಗ ನಿಧಾನವಾಗಿ ತಿನ್ನಿ. ಇದು ಹೆಚ್ಚು ಸೇವಿಸದಂತೆ ತಡೆಯುತ್ತದೆ. ಮತ್ತು ರುಚಿಯ ಅನುಭವವನ್ನೂ ನೀಡಿ ತೃಪ್ತಿ ತರುತ್ತದೆ.
* ಎರಡನೇ ಬಾರಿ ಬೇಡ: ತಿಂಡಿಗಳ ಹತ್ತಿರ ಕೂರುವುದನ್ನು ಬಿಟ್ಟುಬಿಡಿ. ಒಂದೇ ಬಾರಿ ತಿನ್ನಿ. ಎರಡನೇ ಬಾರಿ ಹಾಕಿಸಿಕೊಂಡು ತಿನ್ನುವುದನ್ನು ನಿಮ್ಮ ಡಯಟ್ ವಿಧಾನದಿಂದ ನಿಷಿದ್ಧಗೊಳಿಸಿ.
* ಸ್ವೀಟ್ ಹಂಚಿ ತಿನ್ನಿ: ಗಿಫ್ಟ್ ಆಗಿ ಬಂದ ಚಾಕಲೇಟ್, ಸ್ವೀಟ್ ಗಳನ್ನು ಒಬ್ಬರೇ ತಿನ್ನದಂತೆ ಇತರರಿಗೂ ಹಂಚಿ ತಿನ್ನಿ. ಇದರಿಂದ ನಿಮಗೂ ಸಂತೋಷ, ಅನಗತ್ಯ ಕ್ಯಾಲೊರಿಯೂ ತಪ್ಪುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
