Latest Updates
-
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ
ಅನ್ನ ತಿನ್ನಲೇಬೇಕಾದ ಐದು ಕಾರಣ ಯಾವುದು?

ಆರೋಗ್ಯಕ್ಕೆ ಅನ್ನದಿಂದ ಏನೇನು ಪ್ರಯೋಜನ?
* ಶಕ್ತಿ ನೀಡುತ್ತೆ: ಅಕ್ಕಿಯಲ್ಲಿ ಕಾರ್ಬೊಹೈಡ್ರೇಡ್ ಹೆಚ್ಚಿರುತ್ತದೆ. ಇದು ದೇಹಕ್ಕೆ ಶಕ್ತಿ ನೀಡುವ ಇಂಧನದಂತೆ ಕೆಲಸ ನಿರ್ವಹಿಸುವುದಲ್ಲದೆ ಮೆದುಳಿನ ಕಾರ್ಯವೈಖರಿ ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತದೆ. ಅನ್ನದಲ್ಲಿ ದೇಹಕ್ಕೆ ಅಗತ್ಯವಾದ ಕೊಲೆಸ್ಟ್ರಾಲ್ ಇರುವುದರಿಂದ ನಿಮ್ಮ ದಿನನಿತ್ಯದ ಆಹಾರದೊಂದಿಗೆ ಅನ್ನವಿದ್ದರೆ ಯಾವುದೇ ತೊಂದರೆಯುಂಟಾಗುವುದಿಲ್ಲ.
* ಹೃದಯದ ರೋಗ ತಡೆಯುತ್ತದೆ: ಭತ್ತದ ಹೊಟ್ಟಿನಿಂದ ತಯಾರಿಸುವ ಎಣ್ಣೆ (ರೈಸ್ ಬ್ರಾನ್ ಆಯಿಲ್) ಯಲ್ಲಿರುವ ಕೆಲವು ಆರೋಗ್ಯಕರ ಅಂಶ ಹೃದಯಕ್ಕೆ ಶಕ್ತಿ ನೀಡಿ ದೇಹದಲ್ಲಿ ಬೊಜ್ಜಿನ ಮಟ್ಟವನ್ನು ಕಡಿಮೆಮಾಡುತ್ತದೆ.
* ಅತಿಯಾದ ರಕ್ತದೊತ್ತಡ ನಿಯಂತ್ರಣ: ಅನ್ನದಲ್ಲಿ ಕಡಿಮೆ ಸೋಡಿಯಂ ಇರುವುದರಿಂದ ಇದರ ಸೇವನೆ ರಕ್ತದೊತ್ತಡ ನಿಯಂತ್ರಿಸಲು ಸಹಕಾರಿ. ಅತಿಯಾದ ರಕ್ತದೊತ್ತಡ ಮತ್ತು ಹೃದ್ರೋಗದಿಂದ ಬಳಲುತ್ತಿದ್ದವರಿಗೆ ಇದು ಒಳ್ಳೆಯ ಆಹಾರ.
* ಕ್ಯಾನ್ಸರ್ ತಡೆ: ಕೆಂಪಕ್ಕಿ ಅನ್ನದಲ್ಲಿ ಹೆಚ್ಚು ನಾರಿನಂಶವಿರುವುದರಿಂದ ಅನೇಕ ತರಹದ ಕ್ಯಾನ್ಸರ್ ದೂರಿವಿರಿಸಲು ಸಹಾಯವಾಗುತ್ತದೆ. ದೇಹದಲ್ಲಿ ಕ್ಯಾನ್ಸರ್ ತರುವ ಕಣಗಳು ಇರದಂತೆ ಅನ್ನದಲ್ಲಿನ ಫೈಬರ್ ಅಂಶ ಹೋರಾಡುತ್ತದೆ ಎನ್ನಲಾಗಿದೆ.
* ತ್ವಚೆ ರಕ್ಷಣೆ: ಅಕ್ಕಿ ಹಿಟ್ಟು ಮೊಡವೆ ಮತ್ತು ಕಲೆಗಳನ್ನು ತೊಲಗಿಸುವಲ್ಲಿ ಹೆಚ್ಚು ಪರಿಣಾಮಕಾರಿ. ಚರ್ಮ ಉರಿಯುತ್ತಿದ್ದರೆ ಅಕ್ಕಿ ಗಂಜಿ ಲೇಪಿಸಿದರೆ ಮತ್ತು ಹೊಟ್ಟೆ ಕೆಟ್ಟರೆ ಅಕ್ಕಿ ಗಂಜಿ ಕುಡಿದರೆ ಉಪಶಮನವಾಗುತ್ತದೆ ಎನ್ನಲಾಗಿದೆ.
ದಿನಕ್ಕೆ ಒಂದು ಕಪ್ ಅನ್ನ ಅಥವಾ ಕೆಂಪಕ್ಕಿ ಅನ್ನದ ಸೇವನೆ ನಿಮ್ಮ ದೇಹವನ್ನು ಶಕ್ತಿಯುತವಾಗಿರಿಸಿ ಕ್ಯಾನ್ಸರ್ ಮತ್ತು ಹೃದ್ರೋಗದಿಂದಲೂ ತಡೆಯಲು ಸಹಾಯಕವಾಗುತ್ತದೆ. ಆದರೆ ಪಾಲಿಶ್ ಅಕ್ಕಿಯನ್ನು ಬಳಸುತ್ತಿರುವವರಿಗೆ ಇದರ ಸಂಪೂರ್ಣ ಪ್ರಯೋಜನ ದೊರೆಯದೆ ಹೋಗಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
