Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪ್ಲಾಸ್ಟಿಕ್ ತಟ್ಟೆಯಲ್ಲಿ ತಿಂದರೆ ಕೆಡುವುದು ಹೊಟ್ಟೆ...

ಬೆಳಗಾಯ್ತು ಅಂದ್ರೆ ಜನ ಅಂಗಡಿಗಳಿಗೆ, ಹೋಟೆಲ್ ಗಳಿಗೆ ಹೋಗಿ ತಿಂಡಿನೋ, ತರಕಾರಿನೋ ತರೋದಕ್ಕೆ ಪ್ಲಾಸ್ಟಿಕ್ ಬ್ಯಾಗ್ ಗಳನ್ನೋ, ಕವರ್ ಗಳನ್ನೋ ಬಳಕೆ ಮಾಡ್ತಾರೆ. ಪ್ಲಾಸ್ಟಿಕ್ ನಲ್ಲೇ ಆಹಾರನೂ ತಯಾರಿಸ್ತಾರೆ, ಆಹಾರನೂ ಇಡ್ತಾರೆ. ಸೇವಿಸ್ತಾರೆ ಕೂಡ. ಅದರಿಂದ ಎಷ್ಟೋ ತೊಂದರೆ ಇದೆ ಬಳಕೆ ಮಾಡ್ಬೇಡಿ ಅಂದ್ರೂ ಕೇಳೋದೆ ಇಲ್ಲ.
ಪ್ಲಾಸ್ಟಿಕ್ ಬಗ್ಗೆ ಹೇಳೋದು ಹಳೆ ವಿಷಯ ಬಿಡಿ. ಆದರೆ ಈ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ತಿಂಡಿ ಊಟ ತರಕಾರಿಗಳನ್ನ ತರುತ್ತೀರಲ್ಲಾ, ಅದರಿಂದ ಎಷ್ಟು ತೊಂದರೆ ಇದೆ ಅಂತ ನೀವು ಎಂದಾದರೂ ಯೋಚನೆ ಮಾಡಿದ್ದೀರ? ಪರಿಸರದ ಜೊತೆ ನಮ್ಮ ಆರೋಗ್ಯನೂ ಹಾಳುಗೆಡಹುವ ಈ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿದಷ್ಟು ನಮಗೇ ಒಳ್ಳೆಯದು.
ಆಹಾರದ ಮೇಲಿನ ಪರಿಣಾಮ:
* ಪ್ಲಾಸ್ಟಿಕ್ ನಲ್ಲಿನ ಅತಿ ಹಾನಿಕಾರಕ ಅಂಶ ಡೈಯಾಕ್ಸಿನ್ ರಾಸಾಯನಿಕ ಆಹಾರದೊಂದಿಗೆ ಸೇರಿ ಮಾರಣಾಂತಿಕ ಕಾಯಿಲೆ ತರುತ್ತದೆ. ಪ್ಲಾಸ್ಟಿಕ್ ನಲ್ಲಿ ಆಹಾರ ಪದಾರ್ಥಗಳನ್ನು ತರುವುದು ಮತ್ತು ಅದರಲ್ಲಿ ಆಹಾರ ಸಾಮಾಗ್ರಿಗಳನ್ನು ಶೇಖರಿಸಿ ಇಡುವುದು ಆರೋಗ್ಯಕ್ಕೆ ಅತಿ ಹಾನಿಕರ, ಅದರಲ್ಲೂ ಮಕ್ಕಳು ತುಂಬಾ ಸೂಕ್ಷ್ಮವಾದ ಕಾರಣ ಇದರಿಂದ ಕಾಯಿಲೆ ಬೇಗ ಹರಡುತ್ತದೆ.
* ಪ್ಲಾಸ್ಟಿಕ್ ನಲ್ಲಿರುವ ಡೈಯಾಕ್ಸಿನ್ ಆಹಾರದೊಂದಿಗೆ ಸೇರಿಕೊಂಡು ಆರೋಗ್ಯ ಸಮಸ್ಯೆಗಳನ್ನು ಸದ್ದೇ ಇಲ್ಲದಂತೆ ಹುಟ್ಟಿ ಹಾಕುತ್ತೆ. ಎಷ್ಟು ಪ್ರಮಾಣದ ರಾಸಾಯನಿಕ ಒಬ್ಬ ವ್ಯಕ್ತಿಯ ದೇಹ ಸೇರಿದೆ ಎಂಬುದರ ಮೇಲೆ ಆರೋಗ್ಯ ಸಮಸ್ಯೆಯನ್ನು ಲೆಕ್ಕ ಹಾಕಬಹುದು. ರಾಷ್ಟ್ರೀಯ ಪರಿಸರ ಆರೋಗ್ಯ ವಿಜ್ಞಾನ ಕೇಂದ್ರದ ಪ್ರಕಾರ ಈ ಡೈಯಾಕ್ಸಿನ್ ನ ಹೆಚ್ಚು ಅಂಶವು ವಾಸಿ ಮಾಡಲು ಸಾಧ್ಯವಾಗದ ಕ್ಯಾನ್ಸರ್ ನಂತಹ ರೋಗಗಳನ್ನು ತರುತ್ತದೆ.
* ಇದಿಷ್ಟೇ ಅಲ್ಲ, ಈ ಡೈಯಾಕ್ಸಿನ್ ನಿಂದ ಮಹಿಳೆಯರಲ್ಲೂ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಸಂತಾನೋತ್ಪತ್ತಿ ಮತ್ತು ಬೆಳವಣಿಗೆಯ ಸಮಸ್ಯೆಗಳು ಕಂಡುಬರುತ್ತವೆ. ಆಹಾರ ಸಾಮಾಗ್ರಿಗಳಲ್ಲಿ ಅದು ಹೇಗೆ ಈ ರಾಸಾಯನಿಕ ಸೇರಿಕೊಳ್ಳುತ್ತದೆ ಎಂದು ನೀವು ಪ್ರಶ್ನಿಸುವುದಾದರೆ, ಆಹಾರ ಸಾಮಾಗ್ರಿಗಳಲ್ಲಿ ಅತಿ ಬೇಗನೆ ಡೈಯಾಕ್ಸಿನ್ ಸೇರಿಕೊಳ್ಳುವ ಸಾಧ್ಯತೆ ಹೆಚ್ಚು. ಆದ್ದರಿಂದ ಆದಷ್ಟು ಕಳಪೆ ಮಟ್ಟದ ಪ್ಲಾಸ್ಟಿಕ್ ಗಳನ್ನು ಅಡುಗೆ ಮನೆಯಲ್ಲಿ ಬಳಸದಿದ್ದರೆ ಉತ್ತಮ. ಅಂಗಡಿಗೆ ಹೋದರೆ ಅಲ್ಲಿಯೂ ಉತ್ತಮ ಗುಣಮಟ್ಟದ ಪ್ಲಾಸ್ಟಿಕನ್ನು ಕೇಳಿ ಪಡೆಯಲು ಮರೆಯಬೇಡಿ.
* ಆದರೆ ಮೈಕ್ರೋವೇವ್ ಪ್ಲಾಸ್ಟಿಕ್ ನಲ್ಲಿ ಅಡುಗೆ ತಯಾರಿಸಿದರೆ ಅಷ್ಟೊಂದು ತೊಂದರೆ ಇಲ್ಲ ಎಂಬುದೂ ಇದೆ. ಈ ಮೈಕ್ರೋವೇವ್ ಕಂಟೇನರ್ ಗಳಲ್ಲಿ ಅಷ್ಟಾಗಿ ಡೈಯಾಕ್ಸಿನ್ ಇರುವುದಿಲ್ಲ ಎನ್ನಲಾಗಿದೆ. ಅತಿ ಒಳ್ಳೆ ಗುಣಮಟ್ಟದ ಪ್ಲಾಸ್ಟಿಕ್ ನಲ್ಲಿ ನಾವು ಆಹಾರ ಸಾಮಾಗ್ರಿಗಳನ್ನು ಇಡುತ್ತೇವೆ, ಇನ್ನೆಲ್ಲಿ ತೊಂದರೆ ಎಂದು ನೀವು ಭಾವಿಸಬಹುದು.
ಆದರೆ ಆರೋಗ್ಯದ ವಿಷಯದಲ್ಲಿ ಚಾನ್ಸ್ ತೆಗೆದುಕೊಳ್ಳುವುದು ಬೇಡ ಎಂಬುದು ನಮ್ಮ ಸಲಹೆ. ಅದಕ್ಕೆ ಪೂರಕವಾಗಿ ಮತ್ತೊಂದು ವಸ್ತುಗಳನ್ನು ಬಳಸಿದರೆ ಉತ್ತಮ. ಪ್ಲಾಸ್ಟಿಕ್ ಬದಲು ಗಾಜು ಪಿಂಗಾಣಿ ಇನ್ನಿತರ ವಸ್ರುಗಳನ್ನು ಬಳಸಬಹುದು. ಸಾದ್ಯವಾದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿದರೆ ನಮ್ಮ ಆರೋಗ್ಯಕ್ಕೂ, ನಮ್ಮ ಪರಿಸರದ ಆರೋಗ್ಯಕ್ಕೂ ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
