Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಪ್ತಸಲಹೆ: ಸಂಬಂಧ ಮುರಿದು ಹೋದರೆ ಹೀಗೆ ಮಾಡಿ

* ಒಂಟಿಯಾಗಿರಬೇಡಿ. ಹೊರಗಡೆ ಸುತ್ತಾಡಲು ಹೋಗಿ. ಸ್ನೇಹಿತರನ್ನು ಭೇಟಿಯಾಗಿ. ಮುಚ್ಚುಮರೆಯಿಲ್ಲದೇ ಎಲ್ಲಾ ಹೇಳಿಕೊಳ್ಳಿ. ಹಗುರಾಗಿ.
* ಹೊರಗಡೆ ಪಾರ್ಟಿಗೆ ಹೋಗಿ. ಜೀವನವೇ ಮುಗಿದು ಹೋದಂತೆ ಕೊರಗದಿರಿ. ಸಂಬಂಧ ಮುರಿದಾಕ್ಷಣ ನಿಮ್ಮ ಬದುಕಿನ ಬೆಳಕೆಲ್ಲವೂ ಅಂತ್ಯವಾದಂತೆ ಭಾವಿಸದಿರಿ. ಇಂತಹ ಕ್ಷಣದಲ್ಲಿ ಧೂಮಪಾನ ಮತ್ತು ಕುಡಿತಗಳಿಗೆ ಬಲಿಯಾಗಬೇಡಿ. ಕಾಲಕ್ಕೆ ಎಲ್ಲವನ್ನು ಮರೆಸುವ ಶಕ್ತಿಯಿದೆ. ಅಲ್ಲಿವರೆಗೆ ಕಾಯಿರಿ.
* ಶಾಪಿಂಗ್ ಗೆ ಹೋಗಿ. ಇದು ಮಹಿಳೆಯರಿಗೆ ಹೆಚ್ಚು ಸೂಕ್ತ. ಹೊಸ ಬಟ್ಟೆ ಖರೀದಿಸಿರಿ.
* ಸುಮ್ಮನೆ ಬಟ್ಟೆ ಬದಲಾಯಿಸಿ. ಹೇರ್ ಸ್ಟೈಲ್ ಬದಲಾಯಿಸಿ ನೋಡಿ. ನಿಮ್ಮನ್ನು ನೀವು ವಿಭಿನ್ನ ರೂಪದಲ್ಲಿ ನೋಡಿಕೊಳ್ಳಿ. ಮನಸ್ಸಿನಲ್ಲಿಯೇ ಬಿಟ್ಟುಹೋದವರಿಗೆ ದಿಕ್ಕಾರ ಹೇಳಿ.
* ನೋವಿನ, ರೋಮಾಂಟಿಕ್ ಹಾಡುಗಳನ್ನು ಕೇಳದಿರಿ. ಇಂತಹ ಹಾಡುಗಳು ಭಾವನಾತ್ಮಕವಾಗಿ ನಿಮ್ಮನ್ನು ಹೆಚ್ಚು ಘಾಸಿಗೊಳಿಸುತ್ತವೆ.
* ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಅಂದರೆ ಈಜುವುದು, ಆಟವಾಡುವುದು ಇತ್ಯಾದಿ. ಸುಮ್ಮನೆ ಕುಳಿತು ಧೇನಿಸಲು ಸಮಯವಿಲ್ಲದಂತೆ ನೋಡಿಕೊಳ್ಳಿ. ಕೆಲಸವಿಲ್ಲದ ತಲೆ ಪಿಶಾಚಿಗಳ ಗೂಡಾಗುತ್ತದೆ. ಕಳೆದು ಹೋದ ಪ್ರೀತಿಯನ್ನು ಇತರ ಚಟುವಟಿಕೆಗಳಲ್ಲಿ ಮರೆಯಿರಿ.
* ಆರೋಗ್ಯಕರ ಫ್ಲರ್ಟ್ ಮಾಡಿ. ಇದು ಪುರುಷರಿಗೆ ಹೆಚ್ಚು ಉಪಯುಕ್ತ. ಪ್ರಿಯತಮೆ ಕೈಬಿಟ್ಟು ಹೋದ ಸಂದರ್ಭದಲ್ಲಿ ಆತ್ಮೀಯ ಗೆಳತಿಯರೊಂದಿಗೆ ಕಳೆಯಬಹುದು.
* ಅವನು/ಅವಳು ಬಿಟ್ಟು ಹೋದರೇನಂತೆ. ಬದುಕು ಇನ್ನೂ ಇದೆ. ಪ್ರೀತಿಸೋ ಅಪ್ಪ ಅಮ್ಮ, ಆತ್ಮೀಯರನ್ನು ನೆನಪಿಸಿಕೊಳ್ಳಿ.
* ನಿಮ್ಮನ್ನು ನೀವು ಪ್ರೀತಿಸಿ. ಪ್ರೀತಿ ಹಾಳಾಗಲು ನೀವೇ ಕಾರಣವೆಂದು ಕೊರಗಬೇಡಿ. ಕಳೆದುಹೋದ ಕ್ಷಣಕ್ಕೆ ಚಿಂತಿಸಿ ಏನೂ ಪ್ರಯೋಜನ.
* ಹೆತ್ತವರೊಂದಿಗೆ ಹೃದಯಬಿಚ್ಚಿ ಮಾತನಾಡಬಹುದು. ಅಳುವುದನ್ನು, ಕೊರಗುವುದನ್ನು ನಿಲ್ಲಿಸಿ. ಭಗ್ನಹೃದಯದಲ್ಲಿ ನೋವು ಮರೆಯಾಗಲಿ. ಹೊಸ ಹಕ್ಕಿ ಕೂಗಲಿ. ಮನಸ್ಸು ಹಗುರವಾಗಿಸಲು ಪ್ರಯತ್ನಿಸಿ. ಸಂಬಂಧ ಮುರಿದು ಹೋದವರಿಗೆ ದಿಕ್ಕಾರ ಹಾಕಿ ಬದುಕಿ ತೋರಿಸಿ. ಆಲ್ ದಿ ಬೆಸ್ಟ್.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
