Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ವೇಯ್ಟ್‌ಲಾಸ್‌ಗೆ ಪ್ರಯತ್ನಿಸುತ್ತಿದ್ದೀರಾ? ಕಾಫಿ ಹೀಗೆ ಕುಡಿದರೆ ಒಳ್ಳೆಯದು
ಈ ಜಗತ್ತಿನಲ್ಲಿ ಅತೀ ಹೆಚ್ಚಿನ ಜನರು ಇಷ್ಟಪಡುವ ಪಾನೀಯವೆಂದರೆ ಅದು ಟೀ... ಕೆಲವರಿಗೆ ಬೆಡ್ ಕಾಫಿ ಕುಡಿದೇ ದಿನವನ್ನು ಆರಂಭಿಸುತ್ತಾರೆ, ಇನ್ನು ಕೆಲವರು ದಿನದಲ್ಲಿ 10 ಲೋಟಕ್ಕಿಂತ ಹೆಚ್ಚು ಕಾಫಿ ಕುಡಿಯುವವರೂ ಇದ್ದಾರೆ, ದಿನದ ಯಾವುದೇ ಹೊತ್ತಿನಲ್ಲಿ ಕಾಫಿ ಕೊಟ್ಟರೂ ಕುಡಿಯುತ್ತಾರೆ. ಈ ಕಾಫಿಯನ್ನು ಸರಿಯಾದ ರೀತಿಯಲ್ಲಿ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇನ್ನು ವೇಯ್ಟ್‌ಲಾಸ್ ಜರ್ನಿಯಲ್ಲಿದ್ದು ಕಾಫಿ ನಿಮ್ಮ ಅಚ್ಚುಮೆಚ್ಚಾಗಿದ್ದರೆ ಈ ಟಿಪ್ಸ್ ತೂಕ ಕಡಿಮೆ ಮಾಡಲು ತುಂಬಾನೇ ಸಹಕಾರಿಯಾದೀತು ನೋಡಿ:

ಮೊದಲಿಗೆ ಕಾಫಿ ತೂಕ ಇಳಿಕೆಗೆ ಹೇಗೆ ಸಹಕಾರಿ ಎಂದು ನೋಡೋಣ ಬನ್ನಿ:
ಚಯಪಚಯ ಕ್ರಿಯೆಗೆ ಸಹಕಾರಿ
ಕಾಫಿ ಕುಡಿಯುವುದರಿಂದ ಚಯಚಚಯ ಕ್ರಿಯೆಗೆ ತುಂಬಾನೇ ಸಹಕಾರಿ. ಚಯಪಚಯ ಕ್ರಿಯೆ ಉತ್ತಮವಾಗಿ ನಡೆದರೆ ತೂಕವೂ ನಿಯಂತ್ರಣದಲ್ಲಿರುತ್ತದೆ. ಚಯಪಚಯ ಕ್ರಿಯೆ ಉತ್ತಮವಾಗಿದ್ದರೆ ಶೇ. 11ರಷ್ಟು ಕ್ಯಾಲೋರಿ ಬರ್ನ್ ಆಗುತ್ತದೆ.
ಹೊಟ್ಟೆ ಹಸಿವು ನಿಯಂತ್ರಿಸುತ್ತದೆ
ಕೆಫೀನ್ ಇರುವುದರಿಂದ ಹೊಟ್ಟೆ ಹಸಿವು ಕಡಿಮೆಯಾಗುವುದು. ಕಾಫಿ ಹಸಿವನ್ನು ನಿಯಂತ್ರಿಸುವುದರಿಂದ ಹೆಚ್ಚು ತಿನ್ನುವುದಕ್ಕೆ ಕಡಿವಾಣ ಹಾಕಬಹುದು.
ಕೊಬ್ಬು ಕರಗುವುದು
ಕೊಬ್ಬು ಕರಗಿಸುವಲ್ಲಿ ಕಾಫಿ ಸಹಕಾರಿಯಾಗಿದೆ. ವ್ಯಾಯಾಮ ಮಾಡಿದ ಬಳಿಕ ಕಾಫಿ ಕುಡಿಯುವುದರಿಂದ ಸುಸ್ತು ದೂರಾಗುವುದು, ವ್ಯಾಯಾಮದಿಂದ ಹಾಗೂ ಕಾಫಿಯಿಂದಾಗಿ ಕೊಬ್ಬು ಕರಗುವುದರಿಂದ ಮೈ ತೂಕ ಕಡಿಮೆಯಾಗುವುದು.
ಈ ಬಗೆಯ ಕಾಯಿಲೆಗಳನ್ನು ತಡೆಗಟ್ಟಲು ಕೂಡ ಸಹಕಾರಿ
ಕಾಫಿ ಕುಡಿಯುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು, ಪಾರ್ಶ್ವವಾಯು ತಡೆಗಟ್ಟುತ್ತದೆ, ಟೈಪ್ 2 ಮಧುಮೇಹ ತಡೆಗಟ್ಟುವಲ್ಲಿ ಕೂಡ ಕಾಫಿ ಸಹಕಾರಿಯಾಗಿದೆ.
ತೂಕ ಇಳಿಕೆಗೆ ಕಾಫಿಯನ್ನು ಹೇಗೆ ಕುಡಿಯಬೇಕು?
* ಕಾಫಿಯಲ್ಲಿ ಬ್ಲಾಕ್ ಕಾಫಿ ಮಾಡಿದರೆ ಒಳ್ಳೆಯದು. ಬ್ಲ್ಯಾಕ್ ಕಾಫಿ ಕುಡಿಯಲು ಸಾಧ್ಯವಿಲ್ಲದಿದ್ದರೆ ಲೋ ಫ್ಯಾಟ್ ಹಾಲನ್ನು ಬಳಸಿ. ಆದರೆ ಸಿಹಿ ತುಂಬಾನೇ ಕಡಿಮೆ ಬಳಸಿ. ಸಕ್ಕರೆ ಹಾಕದೇ ಇದ್ದರೆ ಇನ್ನೂ ಆರೋಗ್ಯಕರ.
* ಕಾಫಿಯಲ್ಲಿ ಸಕ್ಕರೆ ಬದಲಿಗೆ ಬೆಲ್ಲ ಬಳಸಿದರೆ ಆರೋಗ್ಯಕರ. ಆದರೆ ತುಂಬಾನೇ ಸಿಹಿ ಹಾಕಬೇಡಿ.
* ಕಾಫಿಯನ್ನು ತುಂಬಾ ಮಿತಿಯಲ್ಲಿ ಕುಡಿಯಿರಿ: ಕಾಫಿಯನ್ನು ಕುಡಿಯುವುದು ಒಳ್ಳೆಯದು, ಆದರೆ ಅತಿಯಾದ ಕಾಫಿ ಕುಡಿಯುವುದು ಒಳ್ಳೆಯದಲ್ಲ. ತುಂಬಾನೇ ಕಾಫಿ ಕುಡಿದರೆ ತಲೆನೋವು, ನಿದ್ರಾಹೀನತೆ ಈ ಬಗೆಯ ಸಮಸ್ಯೆ ಕಂಡು ಬರುವುದು.
* ವರ್ಕೌಟ್ ಮಾಡುವ ಮುನ್ನ ಕಾಫಿ ಕುಡಿಯುವುದು ಒಳ್ಳೆಯದು. ವರ್ಕೌಟ್ ನಂತರ ಕೂಡ ಕಾಫಿ ಕುಡಿಯಬಹುದು. ಆದರೆ ಸಕ್ಕರೆ ಬಳಸಲೇಬೇಡಿ, ನಿಮ್ಮ ವರ್ಕೌಟ್ ಪ್ರಯತ್ನ ಹಾಳಾಗುವುದು.
* ಮಧ್ಯರಾತ್ರಿಯಲ್ಲಿ ಕಾಫಿ ಕುಡಿಯಬೇಡಿ, ನಿದ್ದೆಗೆ ಭಂಗ ಉಂಟಾಗುವುದು. ನಿದ್ರೆ ಕಡಿಮೆಯಾದರೆ ಇದರಿಂದ ಕೂಡ ಮೈ ತೂಕ ಹೆಚ್ಚಾಗುವುದು
* ದಿನದಲ್ಲಿ 2-3 ಲೋಟ ಕಾಫಿಕುಡಿಯಿರಿ, ಜೊತೆಗೆ ಬ್ಯಾಲೆನ್ಸ್ ಡಯಟ್ ಪಾಲಿಸಿ. ಇದರಿಂದ ಮೈ ತೂಕ ನಿಯಂತ್ರಣದಲ್ಲಿಡಲು ಸಹಕಾರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
