Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ನೀರಿನ ಉಪವಾಸದಿಂದ ಮೂರೇ ದಿನಕ್ಕೆ 5.7 ಕೆಜಿ ತೂಕ ಕಮ್ಮಿಯಾಗುವುದು, ಕಡಿಮೆಯಾದ ಮೈ ತೂಕ ಮತ್ತೆ ಏರುವುದಿಲ್ಲ
ತೂಕ ಕಡಿಮೆ ಮಾಡಬೇಕೆಂಬುವುದು ಬಹುತೇಕರ ಬಯಕೆ. ಅನೇಕ ಕಾರಣಗಳಿಂದ ಮೈ ತೂಕ ಹೆಚ್ಚಾಗಿರುತ್ತದೆ. ಜೀವನಶೈಲಿ, ಮಾನಸಿಕ ಒತ್ತಡ, ಮಹಿಳೆಯರು ಹೆರಿಗೆಯ ಬಳಿಕ , ಕೆಲವೊಂದು ಔಷಧಿಗಳ ಪ್ರಭಾವ ಹೀಗೆ ಅನೇಕ ಕಾರಣಗಳಿಂದ ಮೈ ತೂಕ ಹೆಚ್ಚಾಗಿರುತ್ತದೆ.
ಹೆಚ್ಚಾದ ಮೈ ತೂಕ ಕಡಿಮೆ ಮಾಡುವುದು ಹೇಗೆ ಎಂಬುವುದೇ ಬಹುತೇಕರ ದೊಡ್ಡ ಸಮಸ್ಯೆಯಾಗಿರುತ್ತದೆ, ಏಕೆಂದರೆ ಮೈ ತೂಕ ಹೆಚ್ಚಾದರೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳೂ ಬಾಧಿಸುವುದು. ಮೈ ತೂಕ ಕಡಿಮೆ ಮಾಡುವಲ್ಲ ನೀರಿನ ಆಹಾರಕ್ರಮ ಸಹಕಾರಿ. ಬನ್ನಿ ಈ ವಾಟರ್ ಡಯಟ್ ದೇಹದ ಮೇಲೆ ಬೀರುವ ಪ್ರಭಾವವೇನು?

ವಾಟರ್ ಫಾಸ್ಟಿಂಗ್ ಅಥವಾ ನೀರಿನ ಡಯಟ್ ತೂಕ ಇಳಿಕೆಗೆ ಸಹಕಾರಿ
ತೂಕ ಇಳಿಕೆಗೆ ನೀರಿನ ಡಯಟ್ ತುಂಬಾನೇ ಸಹಕಾರಿ ಎಂಬುವುದು ವೈಜ್ಞಾನಿಕವಾಗಿ ಪರೀಕ್ಷೆ ಮಾಡಿ ಹೇಳಲಾಗಿದೆ. ಈ ಅಧ್ಯಯನದಲ್ಲಿ 12 ಜನ ಸ್ವಯಂವಾಗಿ ಬಂದು ಅಧ್ಯಯನಕ್ಕೆ ಒಳಪಟ್ಟಿದ್ದರು. ಅವರ ದೇಹದಲ್ಲಿ ಆಗುತ್ತಿದ್ದ ಬದಲಾವಣೆಯನ್ನು ಪ್ರತಿದಿನವೂ ಅಧ್ಯಯನ ಮಾಡಲಾಗುತ್ತಿತ್ತು. ಈ ಅಧ್ಯಯನದಲ್ಲಿ ಕಂಡು ಕೊಂಡ ಅಂಶವೆಂದರೆ 2-3 ದಿನಗಳ ಉಪವಾಸದಲ್ಲಿ ಈ ಅಧ್ಯಯನದಲ್ಲಿ ಭಾಗವಹಿಸಿದವರು 5.7 ಕೆಜಿ ತೂಕ ಕಳೆದುಕೊಂಡಿದ್ದರು, 3 ದಿನದ ನಂತರ ತಿಂದ ಮೇಲೂ ಕಡಿಮೆಯಾದ ಮೈ ತೂಕ ಹೆಚ್ಚಾಗಿರಲಿಲ್ಲ.
ಉಪವಾಸವನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಪರಿಣಾಮಕಾರಿಯಾಗಿ ಮೈ ತೂಕ ಕಡಿಮೆಯಾಗುವುದು, ಅಲ್ಲದೆ ಇದರಿಂದ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂದು ಈ ಅಧ್ಯಯನ ನಡೆಸಿದ ಹೆಲ್ತ್ ಯೂನಿವರ್ಸಿಟಿ ರಿಸರ್ಚ್ ಸೆಂಟರ್‌ನ(Claudia Langenberg) ನಿರ್ದೇಶಕರಾದ ಕ್ವೀನ್ ಮೇರಿ ಹೇಳಿದ್ದಾರೆ.
ಈ ವಾಟರ್ ಫಾಸ್ಟಿಂಗ್ ಅಥವಾ ನೀರಿನ ಉಪವಾಸ ಎಂದರೇನು
ಈ ನೀರಿನ ಉಪವಾಸವೆಂದರೆ ನಿರ್ಧಿಷ್ಟ ಸಮಯದವರೆಗೆ ನೀರು ಬಿಟ್ಟು ಬೇರೆ ಏನೂ ಸೇವಿಸದೆ ಇರುವುದು. ಈ ನೀರಿನ ಉಪವಾಸ 24 ಗಂಟೆಯಿಂದ ಕೆಲ ದಿನಗಳವರೆಗೆ ಮುಂದುವರೆಯಬಹುದು. ಈ ನೀಇರನ ಉಪವಾಸ ಮಾಡಿದಾಗ ದೇಹದ ಸ್ನಾಯುಗಳಲ್ಲಿ ಸಂಗ್ರಹವಾಗಿದ್ದ ಕೊಬ್ಬಿನಂಶ ಕರಗುವುದು, ಕೊಬ್ಬು ಶಕ್ತಿಯಾಗಿ ಪರಿವರ್ತನೆಯಾಗುವುದು. ಇದರಿಂದ ಮೈ ತೂಕ ಬೇಗನೆ ಕಡಿಮೆಯಾಗುವುದು.
ನೀರಿನ ಉಪವಾಸ ಮಾಡುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ
ನೀರಿನ ಉಪವಾಸ ಮಾಡುವುದರಿಂದ ದೇಹವನ್ನು ಡಿಟಾಕ್ಸ್ ಮಾಡಲು ಕೂಡ ತುಂಬಾನೇ ಪ್ರಯೋಜನಕಾರಿ. ದೇಹದಲ್ಲಿರುವ ಕಶ್ಮಲಗಳು ಹೊರಹೋದರೆ ಕ್ಯಾನ್ಸರ್ ಸೇರಿ ಅನೇಕ ಕಾಯಿಲೆಯನ್ನು ತಡೆಗಟ್ಟಬಹುದು.
ನೀರಿನ ಉಪವಾಸದಿಂದ ಅಡ್ಡಪರಿಣಾಮವಿದೆಯೇ?
ಈ ಉಪವಾಸವನ್ನು ಮಾಡುವಾಗ ನೀವು ತಜ್ಞರ ಅಥವಾ ನ್ಯೂಟ್ರಿಷಿಯನಿಸ್ಟ್ ಸಲಹೆ ಪಡೆಯಬೇಕು, ಅಲ್ಲದೆ ಈ ಅವಧಿಯಲ್ಲಿ ವರ್ಕೌಟ್ ಮಾಡಬಹುದು, ದೈಹಿಕ ಶ್ರಮ ಅಧಿಕವಿರುವ ಕೆಲಸ ಮಾಡಬಹುದೇ ಎಂಬೆಲ್ಲಾ ಮಾಹಿತಿ ಪಡೆಯಬೇಕು. ಏಕೆಂದರೆ ಬರೀ ನೀರಿನ ಉಪವಾಸ ಮಾಡುವಾಗ ಬೇಗನೆ ಸುಸ್ತು ಆಗುವ ಸಾಧ್ಯತೆ ಇದೆ, ಆದ್ದರಿಂದ ಈ ಬಗ್ಗೆ ತುಂಬಾನೇ ಜಾಗ್ರತೆವಹಿಸಿ.
ಯಾರು ಈ ಉಪವಾಸ ಮಾಡಬಾರದು?
ಮೈ ತೂಕ ತುಂಬಾ ಕಡಿಮೆ ಇರುವವರು
ಹೃದಯ ಸಮಸ್ಯೆ ಇರುವವರು
ಟೈಪ್ 1 ಮಧುಮೇಹದ ಸಮಸ್ಯೆ ಇರುವವರು
ಇತರ ಆರೋಗ್ಯ ಸಮಸ್ಯೆ ಇರುವವರು
ಮೈಗ್ರೇನ್ ಸಮಸ್ಯೆ ಇದ್ದರೆ
ಇತ್ತೀಚೆಗೆ ರಕ್ತ ದಾನ ಪಡೆದಿದ್ದರೆ
ಈ ಬಗೆಯ ತೊಂದರೆಗಳಿದ್ದರೆ ನೀರಿನ ಉಪವಾಸ ಮಾಡಬೇಡಿ. 24 ಗಂಟೆ ಉಪವಾಸವಾದರೆ ತೊಂದರೆಯಿಲ್ಲ, ಅದಕ್ಕಿಂತ ಹೆಚ್ಚಿನ ಅವಧಿ ಉಪವಾಸ ಮಾಡುವ ಪ್ಲ್ಯಾನ್ ಇದ್ದರೆ ನೀವು ವೈದ್ಯರಿಗೆ ಬಗ್ಗೆ ಹೇಳಬೇಕು, ಯಾವುದಾದರೂ ಅಸ್ವಸ್ಥತೆ ಇದ್ದರೆ ಉಪವಾಸ ಮಾಡಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











