Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಅಪಾಯಕಾರಿ ಕೇಕ್ ಬಗ್ಗೆ ಸರ್ಕಾರ ಎಚ್ಚರಿಸಿದ ಕೆಲ ದಿನಗಳಲ್ಲಿಯೇ ಕೇಕ್ ಸೇವಿಸಿ ಬಾಲಕ ಸಾವು
ಕೆಲ ದಿನಗಳ ಹಿಂದಷ್ಟೆ ರಾಜ್ಯದ ಕೆಲವು ಬೇಕರಿಯ ಕೇಕ್ ಸೇರಿ ಕೆಲವು ಆಹಾತ ತಿನಿಸುಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಅಂಶಗಳು, ರಾಸಾಯಾನಿಕ ಪತ್ತೆಯಾಗಿದೆ ಎಂಬ ವಿಚಾರ ಆತಂಕಕ್ಕೆ ಕಾರಣವಾಗಿತ್ತು. ಆದ್ರೆ ಈಗ ಬೇಕರಿಯಿಂದ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಕೇಕ್ ಸೇವಿಸಿದ ಬಳಿಕ ಬಾಲಕ ಮೃತಪಟ್ಟು ಪೋಷಕರು ಆಸ್ಪತ್ರೆ ಪಾಲಾಗಿದ್ದಾರೆ.
ಬಾಲಕನ ತಂದೆಯೇ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರೇ ಕ್ಯಾನ್ಸಲ್ ಆಗಿದ್ದ ಕೇಕ್ ಅನ್ನ ಮನೆಗೆ ತಂದಿದ್ದಾರೆ. ಗ್ರಾಹಕರೊಬ್ಬರು ತಮ್ಮ ಆರ್ಡರ್ ತೆಗದುಕೊಳ್ಳದೆ ಕೇಕ್ ಅನ್ನು ಕ್ಯಾನ್ಸಲ್ ಮಾಡಿದ್ದಾರೆ. ಆದ್ರೆ ಇದೇ ಕೇಕ್ ಅನ್ನು ಮಗುವಿನ ತಂದೆ ಮನೆಗೆ ತಂದಿದ್ದಾರೆ ಎಂದು ತಿಳಿದುಬಂದಿದೆ. ಇದೇ ದಿನ ಮಗುವಿನ 5ನೇ ವರ್ಷ ಹುಟ್ಟುಹಬ್ಬ ಇರುವುದು ಸಹ ತಿಳಿದುಬಂದಿದೆ.

ಮನೆಗೆ ತಂದು ಮಗನಿಗೆ ನೀಡಿ ತಾವು ಸಹ ಸೇವಿಸಿದ್ದಾರೆ. ಆದರೆ 5 ವರ್ಷದ ಮಗು ಕೇಕ್ ಸೇವಿಸಿದ ತಕ್ಷಣವೇ ಆರೋಗ್ಯದಲ್ಲಿ ಏರುಪೇರಾಗಿ ಕುಸಿದು ಬಿದ್ದಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರು ಮಗು ಬದುಕುಳಿದಿಲ್ಲ. ಇದೇ ವೇಳೆ ಮಗುವಿನ ತಾಯಿ ಹಾಗೂ ತಂದೆ ಕೂಡ ಅನಾರೋಗ್ಯಕ್ಕೆ ಒಳಗಾಗಿದ್ದು ಅವರನ್ನು ಐಸಿಯುಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಈ ಘಟನೆಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಅಧಿಕಾರಿಗಳು ಫುಡ್ ಪಾಯಿಸನ್ ಈ ಘಟನೆಗೆ ಸಂಭವನೀಯ ಅಂಶವೆಂದು ಶಂಕಿಸಿದ್ದಾರೆ. ಹಾಗೆ ಅವರೇ ಕೇಕ್‌ಗೆ ವಿಷ ಹಾಕಿ ಆತ್ಮಹತ್ಯೆಗೆ ಯತ್ನಿಸಿದ್ದಾರೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಕೇಕ್ ಸೇವನೆಗೂ ಮುನ್ನ ಏನೆಲ್ಲಾ ಘಟನೆಗಳು ನಡೆದಿದೆ. ಈ ಕೇಕ್ ಮೊದಲು ಆರ್ಡರ್ ಮಾಡಿರುವುದು ಯಾರು ಎಂಬೆಲ್ಲಾ ಮಾಹಿತಿ ಕಲೆಹಾಕಿದ್ದಾರೆ ಎಂದು ವರದಿಗಳಾಗಿವೆ.
ಕೆಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಘಟನೆಯ ಸಂಪೂರ್ಣ ತನಿಖೆಯನ್ನು ಆರಂಭಿಸಿದ್ದಾರೆ. ಈ ನಡುವೆ ಕೇಕ್‌ನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ. ಹಾಗೆ ಈ ಘಟನೆ ಸಂಬಂಧ ಆನ್‌ಲೈನ್ ಫುಡ್ ಡೆಲಿವರಿ ಅಗ್ರಿಗೇಟರ್ ಸ್ವಿಗ್ಗಿ ಪ್ರತಿಕ್ರಿಯಿಸಿದೆ.
"ಬೆಂಗಳೂರಿನಲ್ಲಿ ನಡೆದ ದುರದೃಷ್ಟಕರ ಘಟನೆಯಿಂದ ನಾವು ಆಘಾತಕ್ಕೆ ಒಳಗಾಗಿದ್ದೇವೆ. ಈ ನಂಬಲಾಗದಂತಹ ಕಷ್ಟದ ಸಮಯದಲ್ಲಿ ನಾವು ಕುಟುಂಬದೊಂದಿಗೆ ಇದ್ದೇವೆ. ಕುಟುಂಬಸ್ಥರ ಭೇಟಿಗಾಗಿ ನಮ್ಮ ತಂಡ ಆಸ್ಪತ್ರೆಗೂ ಭೇಟಿ ನೀಡಿದೆ. ಅವರಿಗೆ ಸಾಧ್ಯವಿರುವಷ್ಟು ಬೆಂಬಲ ನಾವು ನೀಡಿದ್ದೇವೆ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುವುದರಿಂದ ನಾವು ಸಹ ಸಂಪೂರ್ಣವಾಗಿ ಸಹಕರಿಸುತ್ತೇವೆ. ಆಹಾರ ಸುರಕ್ಷತೆಯು ನಮಗೆ ಪ್ರಮುಖ ಆದ್ಯತೆಯಾಗಿದೆ'' ಎಂದು ತಿಳಿಸಿದೆ.
ಬೆಂಗಳೂರಿನ ಈ ಘಟನೆ ಭಾರೀ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ರಾಜ್ಯದ ಹಲವು ಬೇಕರಿಗಳ ಆಹಾರದ ಸ್ಯಾಂಪಲ್‌ಗಳನ್ನು ಆಹಾರ ಇಲಾಖೆ ಈ ಮೊದಲು ಪರೀಕ್ಷೆಗೆ ಒಳಪಡಿಸಿತ್ತು. ರಾಜ್ಯಾದ್ಯಂತ 235 ಕೇಕ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಿದೆ. ಅವುಗಳಲ್ಲಿ 12ರಲ್ಲಿ ಕಾರ್ಸಿಯೋಜೆನಿಕ್ ಪದಾರ್ಥಗಳನ್ನು ಸೇರ್ಪಡೆ ಮಾಡಿರುವುದನ್ನು ಪತ್ತೆ ಮಾಡಿದೆ. 12 ಮಾದರಿ ಕೇಕ್‍ಗಳಲ್ಲಿ ಅಲ್ಲೂರಾ ರೆಡ್, ಸನ್ ಸೆಟ್ ಯೆಲ್ಲೋ, ಟಾರ್ಟಾಝೈನ್, ಪ್ಯಾಂಸೂ 4 ಆರ್ ಮತ್ತು ಕಾರ್ಮೋಸಿನ್ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗಿದೆ ಎಂಬುದು ತಿಳಿದುಬಂದಿತ್ತು. ಈ ಅಂಶಗಳು ಕ್ಯಾನ್ಸರ್‌ನ ಅಪಾಯವನ್ನು ಮತ್ತಷ್ಟು ಹೆಚ್ಚಿಸುವ ರಾಸಾಯನಿಕಗಳಾಗಿವೆ. ಸದ್ಯ ಈ ಆತಂಕದ ನಡುವೆ ಈಗ ಕೇಕ್ ಸೇವಿಸಿ ಮಗು ಮೃತಪಟ್ಟು ಇಡೀ ಕುಟುಂಬ ಐಸಿಯುವಿನಲ್ಲಿ ಮಲಗುವಂತಾಗಿರುವುದು ಆಹಾರ ಸುರಕ್ಷತೆಯ ಕುರಿತಂತೆ ಇನ್ನಷ್ಟು ಆತಂಕ ಹೆಚ್ಚಾಗಲು ಕಾರಣವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications