Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಈ ಪ್ರೋಟಿನ್ ಆಹಾರಗಳನ್ನು ಸೇವಿಸಿದ್ರೆ ಕೆಲವೇ ದಿನಗಳಲ್ಲಿ ಮೈಕರಗಿಸಬಹುದು!
ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿಯನ್ನು ನಡೆಸಬೇಕೆಂದರೆ ಸಮತೋಲಿತ ಆಹಾರವು ಅತ್ಯಂತ ಮುಖ್ಯವಾಗಿದೆ. ತೂಕವನ್ನು ಕಳೆದುಕೊಳ್ಳಲು ಹಲವು ರೀತಿಯ ಆಹಾರಗಳನ್ನು ಜನ ಸೇವಿಸುತ್ತಾರೆ. ಆದರೆ ನೀವು ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಿಕೊಳ್ಳಲು ಬಯಸಿದರೆ ಪ್ರೋಟೀನ್ ಯುಕ್ತ ಆಹಾರವನ್ನು ಸೇವಿಸುವುದರತ್ತ ಗಮನ ಹರಿಸಬೇಕು. ತೂಕ ನಷ್ಟದಲ್ಲಿ ಪ್ರೋಟೀನ್ ದೊಡ್ಡ ಪಾತ್ರವನ್ನು ವಹಿಸುತ್ತದೆ.

ಏಕೆಂದರೆ ಪ್ರೋಟೀನ್ ದೀರ್ಘಕಾಲದವರೆಗೆ ನಿಮಗೆ ಹಸಿವಾಗದಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲದೇ, ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಮತ್ತು ಕೊಬ್ಬನ್ನು ಸುಡುವಾಗ ಸ್ನಾಯುಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಆದರೆ ಎಲ್ಲಾ ರೀತಿಯ ಪ್ರೋಟೀನ್ ತೂಕವನ್ನು ಕಡಿಮೆ ಮಾಡಲು ಕೆಲಸ ಮಾಡುವುದಿಲ್ಲ. ಅಷ್ಟಕ್ಕೂ ದೇಹದ ಕೊಬ್ಬನ್ನು ಕಡಿಮೆ ಮಾಡಿ ತೂಕ ನಷ್ಟವಾಗಲು ಎಂತಹ ಆಹಾರ ಸೇವನೆ ಮಾಡ್ಬೇಕು ಅನ್ನೋದನ್ನು ತಿಳಿಯೋಣ.
ಅಧ್ಯಯನದ ಪ್ರಕಾರ ನೇರ ಪ್ರೋಟೀನ್ ಸೇವನೆ ಮಾಡೋದ್ರಿಂದ ಅದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಅಷ್ಟಕ್ಕೂ ನೇರ ಪ್ರೋಟೀನ್ ಯಾವುದು ಅಂತ ನೋಡೋದಾದ್ರೆ ಕೊಬ್ಬಿನಾಂಶ ಕಡಿಮೆ ಇರುವ ಆಹಾರಗಳು. ವಿಶೇಷವಾಗಿ ಸ್ಯಾಚುರೇಟೆಡ್ ಕೊಬ್ಬು ಮತ್ತು ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರ ಪದಾರ್ಥಗಳು.
ನೇರ ಪ್ರೋಟೀನ್ ಸೇವಿಸೋದು ಒಳ್ಳೆಯದು ಯಾಕೆ?
ನೇರ ಪ್ರೋಟೀನ್ ಗಳನ್ನು ಸೇವನೆ ಮಾಡೋದ್ರಿಂದ ಇದು ಹೊಟ್ಟೆಯನ್ನು ತುಂಬುವಂತೆ ಮಾಡುತ್ತದೆ. ಮತ್ತು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಸ್ನಾಯುಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಅಷ್ಟಕ್ಕೂ ಯಾವೆಲ್ಲಾ ನೇರ ಪ್ರೋಟೀನ್ ಗಳು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಅಂತ ನೋಡುತ್ತಾ ಹೋಗೋದಾದ್ರೆ..
ಟರ್ಕಿಯ ಬ್ರೆಸ್ಟ್ ಭಾಗ
ಚಿಕನ್ ಬ್ರೆಸ್ಟ್ ವೈಟ್ ಲಾಸ್ ಮಾಡುವವರಿಗೆ ಉತ್ತಮ ಆಹಾರ ಅಂತಾನೇ ಹೇಳಬಹುದು. ಅದೇ ರೀತಿ ಟರ್ಕಿಯ ಬ್ರೆಸ್ಟ್ ಕೂಡ ಪ್ರೋಟೀನ್‌ನ ಮೂಲವಾಗಿದೆ. ಇದು ಕೂಡ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಬೇಕು ಅಂದುಕೊಳ್ಳುತ್ತಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇದು ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ.
ಮೊಟ್ಟೆ
ಮೊಟ್ಟೆಗಳು ಪ್ರೋಟೀನ್‌ನ ಅಗ್ಗದ ಮತ್ತು ಪೌಷ್ಟಿಕ ಮೂಲವಾಗಿದೆ. ಅವು ಜೀವಸತ್ವಗಳು, ಖನಿಜಗಳು ಮತ್ತು ಅಗತ್ಯವಾದ ಅಮೈನೋ ಆಮ್ಲಗಳಿಂದ ಸಮೃದ್ಧವಾಗಿವೆ. ದೈನಂದಿನ ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡುವ ಮೂಲಕ ಬೆಳಗಿನ ಉಪಾಹಾರಕ್ಕಾಗಿ ಮೊಟ್ಟೆಗಳನ್ನು ತಿನ್ನುವುದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಮೀನು
ಮೀನಿನಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಿದೆ. ನೀವು ಸಾಲ್ಮನ್, ಟ್ಯೂನ ಮತ್ತು ಬಾಂಗ್ಡಾದಂತಹ ವಿವಿಧ ಮೀನುಗಳನ್ನು ತಿನ್ನಬಹುದು. ಒಮೆಗಾ -3 ಕೊಬ್ಬಿನಾಮ್ಲಗಳು ಕೊಬ್ಬನ್ನು ಸುಡುತ್ತದೆ. ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕೋಳಿಯ ಬೆಸ್ಟ್ ಭಾಗ
ಕೋಳಿನ ಬ್ರೆಸ್ಟ್ ತೂಕ ನಷ್ಟಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಉತ್ತಮ ಆಹಾರವಾಗಿದೆ. ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಕೊಬ್ಬಿನ ಅಂಶ ಹೊಂದಿರೋದ್ರಿಂದ ಹೆಚ್ಚಿನವರು ಇದನ್ನೇ ಸೇವಿಸುತ್ತಾರೆ. ಚಿಕನ್ ಬ್ರೆಸ್ಟ್ ನಲ್ಲಿ ಅಗತ್ಯ ಅಮೈನೋ ಆಮ್ಲಗಳು ಇದೆ. ಇದು ಸ್ನಾಯುಗಳನ್ನು ಸರಿಪಡಿಸಲು ಉತ್ತಮವಾಗಿದೆ.
ಪನ್ನೀರ್
ಪನ್ನೀರ್ ಕಡಿಮೆ ಕ್ಯಾಲೋರಿ ಹೊಂದಿರುವ ಡೈರಿ ಉತ್ಪನ್ನವಾಗಿದೆ. ಇದು ಪ್ರೋಟೀನ್ ಮತ್ತು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ. ಇದು ಹೊಟ್ಟೆಯೊಳಗಡೆ ನಿಧಾನವಾಗಿ ಜೀರ್ಣವಾಗೋದ್ರಿಂದ ನಿಮಗೆ ಬಹು ಬೇಗ ಹಸಿವಾಗೋದಿಲ್ಲ. ಇವುಗಳ ಹೊರತಾಗಿ ಕೆಲವು ಸಸ್ಯ ಆಧಾರಿತ ವಸ್ತುಗಳು ಕೂಡ ಪ್ರೋಟೀನ್ ನ ಮೂಲವಾಗಿದೆ. ಇನ್ನೂ ಗ್ರೀಕ್ ಮೊಸರು ಮತ್ತು ಸೀಗಡಿ, ಗೋಮಾಂಸ(ತಿನ್ನುವವರಿಗೆ ಮಾತ್ರ) ಇತ್ಯಾದಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಏಕೆಂದರೆ ಅವುಗಳು ನೇರ ಪ್ರೋಟೀನ್‌ನ ಉತ್ತಮ ಮೂಲಗಳಾಗಿವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
