Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಪ್ರತಿದಿನ ದ್ರಾಕ್ಷಿ ತಿನ್ನುವುದರಿಂದ ನಿಮ್ಮ ದೇಹಕ್ಕೆ ಏನಾಗುತ್ತೆ ಗೊತ್ತಾ?
ಪ್ರತಿದಿನ ದ್ರಾಕ್ಷಿ ತಿಂದರೆ ಎಷ್ಟೆಲ್ಲಾ ಗುಣಗಳು ಇವೆ ಗೊತ್ತಾ? ಈ ಗುಣಗಳು ತಿಳಿದರೆ ನೀವು ಪ್ರತಿದಿನ ದ್ರಾಕ್ಷಿ ತಿನ್ನಲು ಆರಂಭಿಸುತ್ತೀರಿ, ಇದನ್ನು 7-8 ತಿಂಗಳ ಮಗುವಿಗೂ ಕೊಡಬಹುದು, ಆದರೆ ಕೊಡುವಾಗ ಕೈಯಿಂದ ಅದರ ಸಿಪ್ಪೆ ಸುಲಿದು ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಮಾಡಿ ಕೊಡಿ.
ನೀವು ದ್ರಾಕ್ಷಿಯನ್ನು ಪ್ರತಿದಿನ ತಿನ್ನುವುದರಿಂದ ಯಾವೆಲ್ಲಾ ಪ್ರಯೋಜನಗಳು ದೊರೆಯಲಿದೆ ಎಂದು ನೋಡೋಣ:

ರೋಗನಿರೋಧಕ ಶಕ್ತಿ ಹೆಚ್ಚಾಗುವುದು
ದ್ರಾಕ್ಷಿಯನ್ನು ಪ್ರತಿದಿನ ತಿನ್ನುವುದರಿಂದ antioxidants ಅಧಿಕವಿರುವುದರಿಂದ ಹೊಟ್ಟೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅಲ್ಲದೆ ಉರಿಯೂತ, ಮಧುಮೇಹ, ಕೆಲವೊಂದು ಬಗೆಯ ಕ್ಯಾನ್ಸರ್, ಹೃದಯದ ಸಮಸ್ಯೆ ಈ ಎಲ್ಲಾ ತೊಂದರೆಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ. ಅದರಲ್ಲೂ ಕಪ್ಪು, ನೇರಳೆ ಬಣ್ಣದ ದ್ರಾಕ್ಷಿಯಲ್ಲಿ ಆಂಟಿಆಕ್ಸಿಡೆಂಟ್ ಅಧಿಕವಿರುತ್ತದೆ.
ಮೆದುಳು ಹಾಗೂ ಹೃದಯದ ಆರೋಗ್ಯಕ್ಕೆ ಒಳ್ಳೆಯದು
ದ್ರಾಕ್ಷಿ ಮೆದುಳು ಹಾಗೂ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂಬುವುದು ಅಧ್ಯಯನದಿಂದ ತಿಳಿದು ಬಂದಿದೆ. ಅಲ್ಲದೆ ಪ್ರತಿದಿನ ದ್ರಾಕ್ಷಿ ಸೇವಿಸುವುದರಿಂದ ನೆನಪಿನ ಶಕ್ತಿ ಚೆನ್ನಾಗಿರುತ್ತೆ, ಮೆದುಳು ಚೆನ್ನಾಗಿ ಕಾರ್ಯ ನಿರ್ವಹಿಸಲು ಸಹಕಾರಿ.
ಈ ಪೋಷಕಾಂಶಗಳು ದೊರೆಯುವುದು:
ಕ್ಯಾಲೋರಿ:104
ಕಾರ್ಬೋಹೈಡ್ರೇಟ್ಸ್: 27ಗ್ರಾಂ
ನಾರಿನಂಶ: 11/2 ಗ್ರಾಂ
ಸಕ್ಕರೆಯಂಶ: 23 ಗ್ರಾಂ
ಪ್ರೊಟೀನ್: 1 ಗ್ರಾಂ
ಫ್ಯಾಟ್: 0 ಗ್ರಾಂ
ಸ್ಯಾಚುರೇಟಡ್ ಫ್ಯಾಟ್ 0ಗ್ರಾಂ
ಸೋಡಿಯಂ: 3 ಮಿ.ಗ್ರಾಂ
ಪೊಟಾಷ್ಯಿಯಂ: 288 ಮಿ.ಗ್ರಾಂ
ವಿಟಮಿನ್ ಸಿ: 5 ಮಿ.ಗ್ರಾಂ
ವಿಟಮಿನ್ ಕೆ: 22 ಮೈಕ್ರೋಗ್ರಾಂ
ನಿದ್ದೆ ಚೆನ್ನಾಗಿ ಬರುತ್ತದೆ
ನಿದ್ರಾಹೀನತೆ ಸಮಸ್ಯೆ ಇರುವವರು ಪ್ರತಿದಿನ ದ್ರಾಕ್ಷಿ ತಿನ್ನುವುದರಿಂದ ಸುಖನಿದ್ದೆಗೆ ಸಹಕಾರಿ. ಆದ್ದರಿಂದ ದ್ರಾಕ್ಷಿ ತಿನ್ನಿ ಚೆನ್ನಾಗಿ ನಿದ್ದೆ ಮಾಡಿ ಎಂದು ಹೇಳಲಾಗುವುದು.
ಎಲ್ಲರೂ ದ್ರಾಕ್ಷಿ ತಿನ್ನಬಹುದೇ?
ಕೆಲವರಿಗೆ ದ್ರಾಕ್ಷಿ ತಿಂದರೆ ಅಲರ್ಜಿ ಉಂಟಾಗುವುದು ಅಂಥವರು ತಿನ್ನಬೇಡಿ, ಉಳಿದಂತೆ ಎಲ್ಲರೂ ತಿನ್ನಬಹುದು. 5 ವರ್ಷದ ಕೆಳಗಿನ ಮಕ್ಕಳಿಗೆ ದ್ರಾಕ್ಷಿ ನೀಡುವುದಾರೆ ಚಿಕ್ಕ ಚಿಕ್ಕ ಪೀಸ್ ಮಾಡಿ ಕೊಡಿ, ಅಲ್ಲದೆ ಅವರ ಬಳಿ ಜಗಿಯಲು ಹೇಳಿ, ಇಲ್ಲದಿದ್ದರೆ ನುಂಗಬಹುದು ಜಾಗ್ರತೆವಹಿಸಿ.ಪ್ರತಿದಿನ ಎಷ್ಟು ದ್ರಾಕ್ಷಿ ತಿನ್ನಬೇಕು?
ಪ್ರತಿದಿನ 20-22 ದ್ರಾಕ್ಷಿ ತಿಂದರೆ ಒಳ್ಳೆಯದು, ನೀವು ಪ್ರತಿದಿನ ದ್ರಾಕ್ಷಿ ತಿಂದರೆ ದೇಹದಲ್ಲಿರುವ ಕಶ್ಮಲವನ್ನು ಹೊರಹಾಕಲು ಸಹಕಾರಿ. ದ್ರಾಕ್ಷಿಯನ್ನು ಎಲ್ಲರು ತಿನ್ನಬಹುದು, ಆದರೆ ಮಧುಮೇಹಿಗಳು ಮಿತಿಯಲ್ಲಿ ತಿನ್ನಿ.
ಕೆಮ್ಮು-ಶೀತವಿದ್ದರೆ ದ್ರಾಕ್ಷಿ ತಿನ್ನಬಹುದೇ?
ಕೆಮ್ಮು ಶೀತವಿದ್ದರೆ ದ್ರಾಕ್ಷಿ ಕೊಡಬೇಡಿ ಎಂದು ಮಕ್ಕಳ ತಜ್ಞರು ಸಲಹೆ ನೀಡುತ್ತಾರೆ, ಶೀತ-ಕೆಮ್ಮು ಕಡಿಮೆ ಆದ ಮೇಲೆ ಕೊಡಬಹುದು. ಇದು ತಿನ್ನುವುದರಿಂದ ಶೀತ ಬರಲ್ಲ, ಶೀತವಿದ್ದಾಗ ಕೊಡಬೇಡಿ.
ಇತರ ಪ್ರಯೋಜನಗಳು:
- ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ
- ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಸಹಕಾರಿ
- ಕ್ಯಾನ್ಸರ್ ಕಣಗಳು ಉಂಟಾಗದಂತೆ ತಡೆಗಟ್ಟುವಲ್ಲಿಯೂ ಸಹಕಾರಿ.
- ಮಧುಮೇಹಿಗಳಿಗೂ ಒಳ್ಳೆಯು
- ಇನ್ಸುಲಿನ್ ಸೆನ್ಸಿವಿಟಿ ಹೆಚ್ಚು ಮಾಡುತ್ತದೆ
- ಪ್ಯಾಂಕ್ರಿಯಾಸ್ ಬೀಟಾ ಕಣಗಳನ್ನು ರಕ್ಷಣೆ ಮಾಡುತ್ತದೆ
- ಇನ್ಸುಲಿನ್ ಉತ್ಪತ್ತಿಗೆ ಸಹಕಾರಿ
- ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು
- ಮೂಳೆಯ ಆರೋಗ್ಯಕ್ಕೂ ಒಳ್ಳೆಯದು
- ತ್ವಚೆಯ ಆರೋಗ್ಯಕ್ಕೂ ಒಳ್ಳೆಯದು
- ಉರಿಯೂತದ ಸಮಸ್ಯೆ ಕಡಿಮೆಯಾಗುವುದು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
