Latest Updates
-
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ!
ಬೆಳಗ್ಗೆ ಈ ಸಮಯದೊಳಗೆ ಬ್ರೇಕ್‌ಫಾಸ್ಟ್ ಸೇವಿಸಿದರೆ ಹೃದಯಕ್ಕೆ ಒಳ್ಳೆಯದಂತೆ!
ಬ್ರೇಕ್‌ಫಾಸ್ಟ್ ಅನ್ನು ಕೆಲವರು ಬೆಳಗ್ಗೆ 8ರ ಒಳಗೆ ತಿಂದರೆ ಇನ್ನು ಕೆಲವರು 10 ಗಂಟೆಯಾದರೂ ತಿನ್ನುವುದಿಲ್ಲ, ಆದರೆ ವಿಜ್ಞಾನವು ಹೃದಯ ಆರೋಗ್ಯಕ್ಕೆ ಯಾವ ಸಮಯದಲ್ಲ ತಿಂದರೆ ಒಳ್ಳೆಯದು ಎಂಬುವುದನ್ನು ಕಂಡು ಹಿಡಿದಿದೆ. ನೀವು ತಿನ್ನುವ ಆಹಾರಕ್ಕೂ ನಿಮ್ಮ ಆರೋಗ್ಯಕ್ಕೂ ಸಂಬಂಧವಿದೆ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ.
2009ರಿಂದ 2022ರವರೆಗೆ ಈ ಅಧ್ಯಯನ ನಡೆಸಲಾಗಿತ್ತು, 103,000 ಜನರು ಈ ಸಂಶೋಧನೆಯಲ್ಲಿ ಒಳಪಟ್ಟಿದ್ದರು. ಹೃದಯದ ಆರೋಗ್ಯಕ್ಕೂ ಬ್ರೇಕ್‌ಪಾಸ್ಟ್‌ಗೂ, ಅದರ ಸಮಯಕ್ಕೂ ಸಂಬಂಧವಿದೆ ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಬ್ರೇಕ್‌ಫಾಸ್ಟ್ ಸರಿಯಾದ ಸಮಯಕ್ಕೆ ತಿನ್ನುವುದರಿಂದ ಹೈಪರ್‌ಟೆನ್ಷನ್, ಹೃದಯಾಘಾತ, ಹೃದಯ ಬಡಿತದಲ್ಲಿ ವ್ಯತ್ಯಾಸ ಈ ಬಗೆಯ ಸಮಸ್ಯೆಗಳನ್ನು ತಡೆಗಟ್ಟಬಹುದು, ಅಲ್ಲದೆ ಪಾರ್ಶ್ವವಾಯು ಸಮಸ್ಯೆ ತಡೆಗಟ್ಟಲು ಸಹಕಾರಿ ಎಂದು ವಿಜ್ಞಾನ ಹೇಳಿದೆ, ಹಾಗಾದರೆ ಬ್ರೇಕ್‌ಫಾಸ್ಟ್‌ಗೆ ಸೂಕ್ತ ಸಮಯ ಯಾವಾಗ?

ಬ್ರೇಕ್‌ಫಾಸ್ಟ್‌ಗೆ ಸೂಕ್ತ ಸಮಯ
ನಾವು 8 ಗಂಟೆಯ ಒಳಗಡೆ ತಿನ್ನುವುದಕ್ಕಿಂತ ನಾವು 9 ಗಂಟೆಗೆ ಬ್ರೇಕ್‌ಫಾಸ್ಟ್ ತಿನ್ನುವುದರಿಂದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಶೇ. 6ರಷ್ಟು ಹೆಚ್ಚಾಗುವುದು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದ್ದರಿಂದ ತುಂಬಾ ಲೇಟ್ ಆಗಿ ತಿನ್ನುವುದಕ್ಕಿಂತ 8 ಗಂಟೆಯ ಒಳಗಡೆ ಬ್ರೇಕ್‌ಫಾಸ್ಟ್ ಮಾಡಿ.
ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ ಹೃದಯಾಘಾತ
ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ ಸಮಸ್ಯೆ ಹೆಚ್ಚಾಗುತ್ತಿದೆ, ಬದಲಾಗಿರುವ ಜೀವನಶೈಲಿ ಅಂದರೆ ತುಂಬಾ ದೈಹಿಕ ವ್ಯಾಯಾಮ ಇಲ್ಲದಿರುವುದು, ಅನಾರೋಗ್ಯ ಆಹಾರ ಶೈಲಿ, ಒತ್ತಡದ ಬದುಕು ಇವೆಲ್ಲಾ ಹೃದಯಾಘಾತ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ.
ಬ್ರೇಕ್‌ಫಾಸ್ಟ್‌ಗೆ ಈ ಆಹಾರಗಳು ಆರೋಗ್ಯಕರವಾಗಿದೆ
* ಮೊಟ್ಟೆ: ಮೊಟ್ಟೆ ಹಸಿವು ನಿಯಂತ್ರಿಸುತ್ತದೆ, ದೇಹಕ್ಕೆ ಬೇಕಾದ ಶಕ್ತಿಯನ್ನು ತುಂಬುತ್ತದೆ. ಮೊಟ್ಟೆಯಲ್ಲಿ ಪ್ರೊಟೀನ್ ಅಧಿಕವಾಗಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು.
ಗ್ರೀಕ್ ಯೋಗರ್ಟ್
ಯೋಗರ್ಟ್‌ನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ 12, ಸತು, ಪೊಟಾಷ್ಯಿಯಂ, ರಂಜಕ ಅಧಿಕವಿರುತ್ತದೆ.
ಕಾಫಿ
ಬೆಳಗ್ಗೆ ಕಾಫಿ ಕುಡಿಯುವುದು ಒಳ್ಳೆಯ ಅಭ್ಯಾಸ. ಅದರಲ್ಲೂ ಬೆಲ್ಲ ಹಾಕಿ ತಯಾರಿಸಿದ ಬ್ಲ್ಯಾಕ್ ಕಾಫಿ ತುಂಬಾ ಒಳ್ಳೆಯದು. ಸಕ್ಕರೆ ಕಾಫಿ ಆರೋಗ್ಯಕರವಲ್ಲ.
ಓಟ್‌ಮೀಲ್ಸ್
ಓಟ್‌ಮೀಲ್ಸ್ ತುಂಬಾ ಆರೋಗ್ಯಕರ. ನಿಮ್ಮ ದಿನವನ್ನು ಓಟ್ಸ್‌ಮೀಲ್ಸ್ ಜೊತೆ ಪ್ರಾರಂಭಿಸಿದರೆ ಇನ್ನೂ ಒಳ್ಳೆಯದು.
ಓಟ್ಸ್‌ನಲ್ಲಿ ಈ ಪೋಷಕಾಂಶಗಳಿವೆ
* ಕಬ್ಬಿಣದಂಶ
* ವಿಟಮಿನ್ ಬಿ
* ಮ್ಯಾಂಗನೀಸ್
* ಮೆಗ್ನಿಷ್ಯಿಯಂ
* ಸತು
* ಸೆಲೆನಿಯಂ
ಚಿಯಾ ಸೀಡ್ಸ್
ನೀರಿಗೆ ಸ್ವಲ್ಪ ಚಿಯಾ ಸೀಡ್ಸ್ ಹಾಕಿ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಥವಾ ಹಾಲಿಗೆ ಚಿಯಾ ಚೀಡ್‌ಗೆ ಹಾಕಿ ಕುಡಿಯಬಹುದು, ಮಿಲ್ಕ್‌ಶೇಕ್ ಮಾಡಿ ಸೇವಿಸಬಹುದು.
ಬೆರ್ರಿ ಹಣ್ಣು
ಬೆರ್ರಿ ಹಣ್ಣುಗಳು ಕೂಡ ತುಂಬಾ ಒಳ್ಳೆಯದು, ಓಟ್ಸ್ ಮೀಲ್ಸ್‌ಗೆ ಇದನ್ನು ಹಾಕಿ ಸೇವಿಸಬಾರದು.
ಕಾಟೇಜ್ ಚೀಸ್
ಕಾಟೇಜ್ ಚೀಸ್ ಕೂಡ ಒಳ್ಳೆಯದು.
ನಮ್ಮ ಭಾರತೀಯ ಆಹಾರಕ್ರಮ ಒಳ್ಳೆಯದು
* ದೋಸೆ, ಇಡ್ಲಿ, ಉಪ್ಪಿಟ್ಟು ಈ ಬಗೆಯ ಆಹಾರಗಳು ಕೂಡ ಆರೋಗ್ಯಕರ.
ಬೆಳಗ್ಗೆ ಎದ್ದು ಒಂದು ಲೋಟ ಬಿಸಿ ನೀರು ಕುಡಿದು ಸ್ವಲ್ಪ ಹೊತ್ತಿನ ಬಳಿಕ 8 ಗಂಟೆಯ ಒಳಗೆ ಆರೋಗ್ಯಕರ ಆಹಾರ ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications