Latest Updates
-
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು!
'ಇನ್ಮುಂದೆ ಬದುಕೋದೆ ಬೇಡ ಎಂದುಕೊಂಡಿದ್ದ': ಅಪರೂಪದ ಕಾಯಿಲೆಗೆ ಒಳಗಾಗಿದ್ದ ತನ್ನಾಜ್ ಇರಾನಿ
ನೀವು ಬಾಲಿವುಡ್‌ನ ಸೂಪರ್ ಹಿಟ್ ಸಿನಿಮಾ ಕಹೋ ನಾ ಪ್ಯಾರ್ ಹೇ ಸಿನಿಮಾ ನೋಡಿದ್ದೀರಾ? ಆ ಸಿನಿಮಾದಲ್ಲಿ ನಟಿಸಿದ್ದ ತನ್ನಾಜ್ ಇರಾನಿ ಕುರಿತು ನಿಮಗೆ ತಿಳಿದಿರಬಹುದು. ಆಕೆ ಈಗ ತನ್ನ ಜೀವನವನ್ನೇ ಕೊನೆಗಾಣಿಸುವಂತಹ ಹಂತ ತಲುಪಿದ್ದಾರೆ. ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿ ಎನಿಸಿದ್ದ ಆಕೆ ಈಗ ತನ್ನ ಕೊನೆ ದಿನಗಳ ಕಳೆಯುತ್ತಿದ್ದಾಳೆ.
ಹಾಗಾದ್ರೆ ಆಕೆ ಯಾವ ಸಮಸ್ಯೆಗೆ ಒಳಗಾಗಿದ್ದಳು, ಆಕೆಗೆ ಉಂಟಾಗಿರುವ ಕಾಯಿಲೆ ಏನು? ಎಂಬ ಕುರಿತು ನಾವಿಂದು ವಿವರವಾಗಿ ತಿಳಿದುಕೊಳ್ಳೋಣ. ತನ್ನಾಜ್ ಇರಾನಿ ಈಗ ತನ್ನ ಎಲ್ಲಾ ಸಮಸ್ಯೆಗಳಿಂದ ಮುಕ್ತಳಾಗಿ ಎಂದಿನಂತಾಗಿದ್ದಾರೆ. ಆದ್ರೆ ಕಳೆದ ಎರಡು ವರ್ಷದ ಹಿಂದೆ ಆಕೆಯ ಪರಿಸ್ಥಿತಿ ಹೀಗಿರಲಿಲ್ಲ. ಬದಲಿಗೆ ಆಕೆ ಸಾವು ಬದುಕಿನ ನಡುವೆ ಹೋರಾಟಕ್ಕಿಳಿದಿದ್ದರು.

ಇತ್ತೀಚಿಗೆ ಅವರು ಪಾಡ್‌ಕಾಸ್ಟ್‌ನಲ್ಲಿ ತಮ್ಮ ಅನಾರೋಗ್ಯ ಸ್ಥಿತಿಯ ಕುರಿತು ವಿವರಿಸಿದಾಗ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. 2021ರಲ್ಲಿ ಅವರಿಗೆ ಬೆನ್ನಿನ ಹಿಂದೆ ಚಿಕ್ಕದಾದ ಗಾಯವೊಂದು ಕಾಣಿಸಿಕೊಂಡಿತ್ತು. ಆದ್ರೆ ಈ ಗಾಯ ದೊಡ್ಡ ಅನಾರೋಗ್ಯ ಸಮಸ್ಯೆಗೆ ಕಾರಣವಾಗಿತ್ತು. ತನ್ನಾಜ್ ಇರಾನಿಗೆ ಅವಾಸ್ಕುಲರ್ ನೆಕ್ರೋಸಿಸ್ ಎಂಬ ಅಪರೂಪದ ಹಾಗೂ ಅಚ್ಚರಿ ಹುಟ್ಟಿಸುವ ಸಮಸ್ಯೆ ಕಾಡಿತ್ತು.
ಬೆನ್ನು ನೋವು ಕಾಣಿಸಿಕೊಂಡ ಪರಿಣಾಮ ಚಿಕಿತ್ಸೆಗೆ ಒಳಗಾದಾಗ ಹಂತ ಹಂತವಾಗಿ ಅವರಿಗೆ ನಡೆಯಲು ಕೂಡ ಕಷ್ಟಪಡಬೇಕಾಯಿತು. ನಡೆಯುವಾಗ ಕುಂಟುವ ಅನುಭವವಾಗುತ್ತಿತ್ತು. ಬೆನ್ನು ನೋವಿನ ಚಿಕಿತ್ಸೆಗೆ ಒಳಗಾದ ಅವರಿಗೆ ನಂತರದಲ್ಲಿ ನಡೆಯಲು ಕೂಡ ಸಾಧ್ಯವಾಗದೆ ವೀಲ್ ಚೇರ್ ಮೇಲೆ ಕುಳಿತುಕೊಳ್ಳಬೇಕಾಯಿತು.
ಹಾಗೆ ಬೆನ್ನು ಮೂಳೆಯಲ್ಲಿನ ಸವೆತ ಎದ್ದು ಓಡಾಡಲು ಕೂಡ ಸಾಧ್ಯವಾಗದ ರೀತಿ ಕುಗ್ಗಿಸಿತಂತೆ. ಇದರಿಂದ ವೀಲ್ ಚೇರ್ ಅವರ ಜೀವನದ ಭಾಗವಾಗುತ್ತಾ ಸಾಗಿತ್ತು ಈ ವೇಳೆ ಅವರು ಖಿನ್ನತೆಗೆ ಒಳಗಾದರು. ಅನೇಕ ಪರೀಕ್ಷೆಗಳು, ಶಸ್ತ್ರಚಿಕಿತ್ಸೆಯ ಬಳಿಕ ಮತ್ತೆ ಎದ್ದು ಓಡಾಡುವಂತಾಯಿತು. ಆದ್ರೆ ನಡೆಯುವಾಗ ಕಾಲುಗಳನ್ನು ಎತ್ತಿ ಮತ್ತೆ ಜೋಡಿಸಿಕೊಂಡು ನಡೆಯುವಂತೆ ಕಾಣಿಸುತ್ತದೆ. ಇದು ಕಷ್ಟದ ಪ್ರಕ್ರಿಯೆ ಎಂದು ಅವರು ಹೇಳಿಕೊಂಡಿದ್ದಾರೆ.
ಅವಾಸ್ಕುಲರ್ ನೆಕ್ರೋಸಿಸ್ ಎಂದರೇನು? ಇದು ಹೇಗೆ ಉಂಟಾಗುತ್ತದೆ?
ಅವಾಸ್ಕುಲರ್ ನೆಕ್ರೋಸಿಸ್ ಎಂಬ ಕಾಯಿಲೆಯು ನಿಮ್ಮ ಮೂಳೆಗೆ ರಕ್ತದ ಹರಿವು ನಿಂತಾಗ ಕಾಣಿಸಿಕೊಳ್ಳುವ ಅಪರೂಪದ ಸಮಸ್ಯೆಯಾಗಿದೆ. ಇದರಿಂದ ಮೂಳೆ ಸವೆಲು ಆರಂಭಿಸುತ್ತದೆ. ಹಾಗೆ ವಿಪರೀತ ನೀವು ಕಾಣಿಸಿಕೊಳ್ಳುತ್ತದೆ. ಅಂಕಿಅಂಶಗಳ ಪ್ರಕಾರ ವಿಶ್ವದಾದ್ಯಂತ ಸುಮಾರು 150,000 ಜನರು ಪ್ರತಿ ವರ್ಷ ಅವಾಸ್ಕುಲರ್ ನೆಕ್ರೋಸಿಸ್ ಸಮಸ್ಯೆಗೆ ಒಳಗಾಗುತ್ತಾರೆ. ಇದು ವಯಸ್ಸಿನ ಅಂತರವಿಲ್ಲದೆ ಎಲ್ಲರಲ್ಲೂ ಕಾಣಿಸಿಕೊಳ್ಳಬಹುದು.
ಅವಾಸ್ಕುಲರ್ ನೆಕ್ರೋಸಿಸ್ ಸಾಮಾನ್ಯವಾಗಿ ಗಂಟುಗಳು, ಕೀಲುಗಳ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತದೆ. ಕಾಲು, ಸೊಂಟದ ಭಾಗದಲ್ಲಿ ಹೆಚ್ಚಾಗಿ ಈ ಸಮಸ್ಯೆ ಉಂಟಾಗುತ್ತದೆ.
ನಿಮ್ಮ ರಕ್ತನಾಳಗಳಲ್ಲಿ ರಕ್ತ ಸಾಗಾಣಿಕೆಯ ವೇಳೆ ಅಡೆತಡೆ ಉಂಟಾಗಿ ಮೂಳೆಗಳ ಸಂಧುಗಳಿಗೆ ರಕ್ತ ಸರಬರಾಜು ಆಗದೆ ಇದ್ದರೆ ಈ ಸಮಸ್ಯೆ ಉಂಟಾಗುತ್ತದೆ. ಹಾಗಾದ್ರೆ ಈ ಸಮಸ್ಯೆಯ ಆರಂಭಿಕ ಲಕ್ಷಣವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಂಧುಗಳು, ಕೀಲು, ಗಂಟುಗಳ ಭಾಗದಲ್ಲಿ ವಿಪರೀತ ನೋವು
ಗಟ್ಟಿಯಾಗಿರುವ ಕೀಲು
ಓಡಾಡುವಾಗ ಕೀಲು ಉಳುಕಿದಂತೆ ಆಗುವುದು
ಮಲಗಿದಾಗ ನೋವು ಕಡಿಮೆ ಎನಿಸಬಹುದು
ಅವಾಸ್ಕುಲರ್ ನೆಕ್ರೋಸಿಸ್ ಉಂಟಾಗಲು ಕಾರಣವೇನು?
ರಕ್ತ ಹೀನತೆ
ಟೈಪ್ 2 ಮಧುಮೇಹ
ವಿಕಿರಣ ಚಿಕಿತ್ಸೆಯಂತಹ ಕ್ಯಾನ್ಸರ್ ಚಿಕಿತ್ಸೆಗಳು
ಸ್ಕೂಬಾ ಡೈವರ್ಸ್‌ನಲ್ಲಿ ಡಿಕಂಪ್ರೆಷನ್ ಕಾಯಿಲೆ
ಎಚ್ಐವಿ/ಏಡ್ಸ್
ಲೂಪಸ್
ಅಂಗಾಂಗ ಕಸಿ
ಅತಿಯಾದ ಮದ್ಯ ಸೇವನೆ
ಧೂಮಪಾನ
ಈ ಯಾವುದೇ ಲಕ್ಷಣಗಳು, ಕಾರಣಗಳಿಂದ ನಿಮಗೆ ಅವಾಸ್ಕುಲರ್ ನೆಕ್ರೋಸಿಸ್ ಉಂಟಾಗುತ್ತದೆ. ಇದಕ್ಕೆ ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಪ್ರಾಣಕ್ಕೂ ಸಂಚಕಾರ ತರಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications