Latest Updates
-
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ನಿದ್ರೆಯಲ್ಲಿ ಮಾತನಾಡುತ್ತೀರಾ? ಈ ರೀತಿ ಆಗೋದ್ಯಾಕೆ..? ತಪ್ಪಿಸುವುದು ಹೇಗೆ?
ನಿದ್ರೆ ಮಾನವನ ದೇಹಕ್ಕೆ ಅತೀ ಅಗತ್ಯವಾಗಿ ಬೇಕಾಗಿರುವ ಅಂಶವಾಗಿದೆ. ಒಂದು ದಿನ ಆಹಾರವಿಲ್ಲದೆ ಕಳೆಯಬಹುದು ಆದ್ರೆ ನಿದ್ರೆ ಇಲ್ಲದೆ ನೀವು ಒಂದು ದಿನ ಕಳೆದರೆ ಆ ದಿನ ಪೂರ್ತಿಯಾಗಿ ಹಾಳಾಗುತ್ತದೆ. ನಿದ್ರೆ ಇಲ್ಲದಿದ್ದರೆ ಇಡೀ ದೇಹದ ಅಸಮತೋಲನವೇ ಹದಗೆಡುತ್ತದೆ. ಇದರಿಂದ ಹತ್ತು ಹಲವು ಸಮಸ್ಯೆಗಳು ಸಹ ಎದುರಾಗುತ್ತವೆ.
ಆದ್ರೆ ಕೆಲವರು ಹಲವು ಕಾರಣಗಳಿಂದ ಇಂದು ನಿದ್ರಾಹೀನತೆಯಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ ಹಲವರು ಒತ್ತಡ, ಖಿನ್ನತೆಯಿಂದ ಬಳಲುತ್ತಿರುತ್ತಾರೆ. ಆದ್ರೆ ಇನ್ನೂ ಕೆಲವು ರಾತ್ರಿ ನಿದ್ರೆಯಲ್ಲಿ ಮಾತನಾಡುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ.

ಮಲಗಿದ್ದಾಗ ಮಾತನಾಡುವ ಅಭ್ಯಾಸ ಇರುವವರು ರಾತ್ರಿ ಆಗಾಗ ಎಚ್ಚರಗೊಳ್ಳುತ್ತಿದ್ದರೆ ಅವರ ಜೊತೆ ಇರುವರರು ನಿದ್ರಾಹೀನತೆಗೆ ಒಳಗಾಯುವವ ಸಂಭವವಿರುತ್ತದೆ. ಹಾಗಾದ್ರೆ ನಿದ್ರೆಯಲ್ಲಿ ಮಾತನಾಡುವುದು ಏಕೆ? ಇದು ಕಾಯಿಲೆಯೇ ಅಥವಾ ಅಭ್ಯಾಸ ಬಲವೇ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ನಿದ್ರೆಯಲ್ಲಿ ಮಾತನಾಡುವ ಈ ಕಾಯಿಲೆಗೆ ಒತ್ತಡ, ಆತಂಕ, ಮದ್ಯಪಾನ, ಔಷಧಿ ತೆಗೆದುಕೊಳ್ಳುತ್ತಿರುವುದು, ನಿದ್ರಾಹೀನತೆ ಹೀಗೆ ಕೆಲವೊಂದು ಕಾರಣವಿದೆ. ನಿದ್ರೆಯಲ್ಲಿ ಮಾತನಾಡುವ ಕಾಯಿಲೆಗೆ ಸೋಮ್ನಿಲೋಕ್ವಿ ಎಂದೂ ಕರೆಯಲಾಗುತ್ತದೆ. ಇದು ನಿದ್ರೆ ಹಾಗೂ ಎಚ್ಚರವಾಗಿರುವ ನಡುವಿನ ಒಂದು ಸ್ಥಿತಿಯಾಗಿದೆ. ಇಲ್ಲಿ ಮಾತನಾಡುತ್ತಿರುವ ವ್ಯಕ್ತಿ ಗಾಢ ನಿದ್ರೆಯಲ್ಲೂ ಇರದೆ ಸಂಪೂರ್ಣ ಎಚ್ಚರವಾಗಿಯೂ ಇರದೆ ಇರುವ ಸ್ಥಿತಿ.
ಈ ಪ್ಯಾರಾಸೋಮ್ನಿಗೆ ಹೆಚ್ಚಾಗಿ ಮಕ್ಕಳು ಒಳಗಾಗುತ್ತಾರಂತೆ. ಅವರು ಬೆಳವಣಿಗೆ ಹೊಂದಿದಂತೆ ಈ ಅಭ್ಯಾಸದಿಂದ ಮುಕ್ತರಾಗುತ್ತಾರಂತೆ. ಆದ್ರೆ ಮಧ್ಯ ವಯಸ್ಕರಲ್ಲಿ ಇದೊಂದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಈ ಸಂಬಂಧ ಒಂದು ಅಧ್ಯಯನದಲ್ಲಿ ಈ ನಿದ್ರೆಯಲ್ಲಿ ಮಾತನಾಡುತ್ತಿದ್ದ ಬಹುತೇಕರಿಗೆ ಮಾನಸಿಕ ಸಮಸ್ಯೆ ಇತ್ತು ಎಂಬುದು ದೃಢಪಟ್ಟಿತ್ತು.
ನಿದ್ರೆಯಲ್ಲಿ ಮಾತನಾಡುವುದು ಖಂಡಿತವಾಗಿಯೂ ನಿದ್ರೆಯ ಅಸ್ವಸ್ಥತೆ ಅಥವಾ ದೈಹಿಕ ಸಮಸ್ಯೆಯನ್ನು ಸೂಚಿಸುತ್ತದೆ. ಇದನ್ನು REM ಅಥವಾ ಕ್ಷಿಪ್ರ ಕಣ್ಣಿನ ಚಲನೆಯ ನಿದ್ರೆಯ ವರ್ತನೆಯ ಅಸ್ವಸ್ಥತೆ ಎಂದೂ ಕರೆಯುತ್ತಾರೆ. ಈ ಪ್ಯಾರಾಸೋಮ್ನಿಯಲ್ಲಿ ಹಲವು ವಿಧಗಳಿವೆ.
ಈ ವೇಳೆ ನಿದ್ರೆಯಲ್ಲಿ ನಗುವುದು, ಅಳುವುದು, ಕೂಗುವುದು, ನರಳುವುದು ಮತ್ತು ನಿಟ್ಟುಸಿರು ಬಿಡುವುದು ಸಹ ಸೇರಿದೆ. ಇದರಲ್ಲಿ ಕೆಲವು ಅರ್ಥವಾಗದ ಪದಗಳ ಉಚ್ಛರಿಸಿದರೆ ಮತ್ತೆ ಕೆಲವರು ಎಲ್ಲರಿಗೂ ಅರ್ಥವಾಗುವ ಭಾಷೆ ಮಾತನಾಡುತ್ತಾರೆ.
ನಿದ್ರೆ ಮಾತನಾಡುವ ಚಿಕಿತ್ಸೆಗೆ ವೈದ್ಯಕೀಯವಾಗಿ ಅಗತ್ಯವಿಲ್ಲದಿದ್ದರೂ, ಇದು ಇತರ ಜನರಿಗೆ ಅಡ್ಡಿಪಡಿಸಬಹುದು. ಇದು ನಿಜವಾಗಿಯೂ ನಿದ್ರೆಯ ಮಾತನಾಡುವಿಕೆಯು ವ್ಯಕ್ತಿಯನ್ನು ಉಂಟುಮಾಡುವ ತೊಂದರೆಯ ಮಟ್ಟವನ್ನು ಅವಲಂಬಿಸಿರುತ್ತದೆ.
ನಿದ್ರೆಯ ಮಾತನಾಡುವಿಕೆಗೆ ನಿಖರವಾದ ಕಾರಣ ತಿಳಿದಿಲ್ಲವಾದರೂ, ಇದು ನಿದ್ರೆಯ ಯಾವುದೇ ಹಂತದಲ್ಲಿ ಸಂಭವಿಸಬಹುದು. ಇದು ಕನಸಿನೊಂದಿಗೆ ಸಂಬಂಧ ಹೊಂದಿರಬಹುದು ಅಥವಾ ಇಲ್ಲದಿರಬಹುದು. ಹೀಗಾದಾಗ ನಿಮ್ಮ ನಿದ್ರೆಯಲ್ಲಿ ಏರುಪೇರಾಗಲಿ . ಇದಕ್ಕೆ ಬಾಹ್ಯಕಾರಣಗಳು ಸಹ ಇರಬಹುದು.
ಈ ಸಮಸ್ಯೆಯಿಂದ ಹೊರಬರುವುದು ಹೇಗೆ?
ಮಲಗುವ ಮುನ್ನ ನೀವು ಒಳ್ಳೆಯ ಪುಸ್ತಕ ಓದುವುದು, ತಲೆ ಸ್ನಾನ ಮಾಡುವುದು, ತೆಳುವಾದ ಬಟ್ಟೆ ಧರಿಸುವುದು ಹೀಗೆ ಹತ್ತಾರು ಉಪಾಯ ಮಾಡಬಹುದು. ಜೊತೆಗೆ ಮಲಗುವ ಕೋಣೆ ಸಂಪೂರ್ಣ ಕತ್ತಲೆಯಿಂದ ಕೂಡಿರಬೇಕು. ತಂಪಾಗಿ ಗಾಳಿ ಬರುವುದು ಹಾಗೂ ಪ್ರಶಾಂತವಾಗಿರಬೇಕು. ಮಲಗುವಾಗ ಟೀ-ಕಾಫಿ, ಮದ್ಯಪಾನ ಮಾಡಬಾರದು. ಮಲಗುವ ಒಂದು ಗಂಟೆ ಮುನ್ನ ಮೊಬೈಲ್, ಟಿವಿ ವೀಕ್ಷಣೆ ಮಾಡಬಾರದು.
ಆದ್ರೆ ಈ ನಿದ್ರೆಯಲ್ಲಿ ಮಾತನಾಡುವುದು ಗಂಭೀರ ಸಮಸ್ಯೆಯಲ್ಲ. ಮೊದಲೇ ಹೇಳಿದಂತೆ ಇದಕ್ಕೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವೂ ಇರುವುದಿಲ್ಲ. ಆದರೆ ಕೆಲವೊಂದು ಪ್ರಕರಣದಲ್ಲಿ ವೈದ್ಯರ ಸಲಹೆ ಅಗತ್ಯವಾಗಿರುತ್ತದೆ. ಅಲ್ಲದೆ ಕೆಲವು ಪ್ರಕರಣದಲ್ಲಿ ಇದು ಮಾನಸಿಕವಾಗಿ ಖಿನ್ನತೆಗೂ ತಳ್ಳುವ ಸಂಭವವೂ ಇದ್ದು, ನಿರ್ಲಕ್ಷ್ಯ ಮಾಡಲೇಬಾರದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications