Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಬೇಯಿಸಿದ ಸಿಹಿಗೆಣಸು ಆರೋಗ್ಯದ ನಿಧಿ..! ಎಷ್ಟೆಲ್ಲಾ ಲಾಭವಿದೆ ಗೊತ್ತಾ..?
ಸಾಮಾನ್ಯವಾಗಿ ಎಲ್ಲ ತರಕಾರಿ ಅಂಗಡಿಗಳಲ್ಲೂ ಕಾಣಸಿಗುವ ಸಿಹಿ ಗೆಣಸು ಅದೆಷ್ಟು ಆರೋಗ್ಯಕರ ಅಂಶಗಳ ತನ್ನಲ್ಲಿಟ್ಟುಕೊಂಡಿದೆ ಎಂದು ತಿಳಿದರೆ ನಿಮಗೂ ಅಚ್ಚರಿಯಾಗುತ್ತೆ. ಸಿಹಿ ಗೆಣಸು ಅತೀ ಹೆಚ್ಚು ಪೋಷಕಾಂಶಗಳನ್ನು ತನ್ನಲ್ಲಿಟ್ಟುಕೊಂಡಿದೆ. ಆದರೆ ನಾವು ಈ ರೀತಿಯ ಸಿಹಿ ಗೆಣಸನ್ನು ಬಿಟ್ಟು ಕರಿದ ತಿಂಡಿಗಳನ್ನು ಸೇವಿಸಲು ಇಷ್ಟಪಡುತ್ತೇವೆ. ಆದರೆ ಸಿಹಿ ಗೆಣಸಿನ ಉಪಯೋಗ ನಿಮಗೆ ತಿಳಿದರೆ ನೀವು ಸಹ ಗೆಣಸು ಸೇವಿಸಲು ಮುಂದಾಗುತ್ತೀರಿ.
ಸಿಹಿ ಗೆಣಸು ನೆಲದಡಿಯಲ್ಲಿ ಬೆಳೆಯುವ ಆಹಾರವಾಗಿದೆ, ಅದರ ರುಚಿ ಅನೇಕರನ್ನು ಆಕರ್ಷಿಸುತ್ತದೆ. ಇದು ಕಿತ್ತಳೆ, ಕಂದು ಮತ್ತು ನೇರಳೆ ಸೇರಿದಂತೆ ಹಲವು ಬಣ್ಣಗಳಲ್ಲಿಯೂ ಕಾಣಸಿಗುತ್ತದೆ. ಹಿಂದೆ ಸಿಹಿ ಗೆಣಸು ಪ್ರಮುಖ ಆಹಾರವಾಗಿ ಬೆಳೆಯಲಾಗುತ್ತಿತ್ತು. ಆದರೆ ಇತ್ತೀಚಿಗೆ ಸಿಹಿಗೆಣಸು ಬೆಳೆಯುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಆದರೆ ಸಿಹಿ ಗೆಣಸನ್ನು ಬೇಯಿಸಿ ಸೇವಿಸುವುದರಿಂದಾಗುವ ಪ್ರಯೋಜನವೇನು ಎಂಬುದನ್ನು ತಿಳಿದುಕೊಳ್ಳೋಣ.

1. ಸಮೃದ್ಧ ಪೋಷಕಾಂಶ
ಸಿಹಿಗೆಣಸಿನಲ್ಲಿ ಪೋಷಕಾಂಶಗಳ ಕೊರತೆ ಇಲ್ಲ, ಇದನ್ನು ತಿಂದರೆ ದೇಹಕ್ಕೆ ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಶಿಯಂ ಮತ್ತು ಫೈಬರ್ ಯಂತಹ ಪೋಷಕಾಂಶಗಳು ಹೇರಳವಾಗಿ ಸಿಗುತ್ತವೆ. ಹಸಿಯಾಗಿ ಸೇವಿಸುವುದಕ್ಕಿಂತಲೂ ಬೇಯಿಸಿ ಸೇವಿಸುವುದು ಬಹಳ ಉಪಯುಕ್ತವಾಗಿದೆ.
2. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ
ದೇಹವನ್ನು ಆರೋಗ್ಯಕರವಾಗಿಡುವ ಜೊತೆ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದು ಬಹಳ ಮುಖ್ಯ, ಇಲ್ಲದಿದ್ದರೆ ನಾವು ಅನೇಕ ರೋಗಗಳಿಗೆ ಒಳಗಾಗಬೇಕಾಗುತ್ತದೆ. ನೀವು ನಿಯಮಿತವಾಗಿ ಸಿಹಿ ಗೆಣಸನ್ನು ಸೇವಿಸಿದರೆ, ಶೀತ, ಕೆಮ್ಮು, ಜ್ವರ ಮತ್ತು ಇತರ ವೈರಲ್ ಕಾಯಿಲೆಗಳ ಅಪಾಯವು ಕಡಿಮೆಯಾಗುತ್ತದೆ ಏಕೆಂದರೆ ವಿಟಮಿನ್ ಎ ಮತ್ತು ವಿಟಮಿನ್ ಸಿ ಈ ಆಹಾರದಲ್ಲಿ ಅಧಿಕವಾಗಿರುತ್ತದೆ.
3. ಜೀರ್ಣಕ್ರಿಯೆ ಸುಧಾರಿಸುತ್ತದೆ
ಸಿಹಿ ಗೆಣಸಿನಲ್ಲಿ ಫೈಬರ್ ಸಮೃದ್ಧವಾಗಿದೆ, ಇದು ಕರುಳಿನ ಆರೋಗ್ಯಕ್ಕೆ ಉತ್ತಮವಾಗಿದೆ, ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿಯಾಗಿದೆ. ಮಲಬದ್ಧತೆ ಮತ್ತು ಗ್ಯಾಸ್ನಂತಹ ಯಾವುದೇ ಸಮಸ್ಯೆಗಳಿದ್ದರೆ ಇದರಿಂದ ಮುಕ್ತಿ ಸಿಗಲಿದೆ.
4. ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಭಾರತದಲ್ಲಿ ಹೃದ್ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ ಮತ್ತು ಅನೇಕ ಜನರು ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುತ್ತಾರೆ. ಆದರೆ ನೀವು ಸಿಹಿ ಆಲೂಗಡ್ಡೆಯಂತಹ ಆರೋಗ್ಯಕರ ಆಹಾರವನ್ನು ಸೇವಿಸಿದರೆ ಹೃದಯಕ್ಕೆ ಉತ್ತಮವಂತೆ. ಇದು ಹೇರಳವಾಗಿರುವ ಪೊಟ್ಯಾಸಿಯಮ್ ಅನ್ನು ಹೊಂದಿದೆ, ಇದು ರಕ್ತದೊತ್ತಡ ಹೆಚ್ಚದಂತೆ ನೋಡಿಕೊಳ್ಳುತ್ತದೆ. ಇದರಿಂದಾಗಿ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.
5. ತೂಕವನ್ನು ಕಾಪಾಡಿಕೊಳ್ಳಲಾಗುವುದು
ಸಿಹಿಗೆಣಸಿನ ರುಚಿ ಸಿಹಿಯಾಗಿದ್ದರೂ, ಇದು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ನಾರಿನಂಶದ ಆಹಾರವಾಗಿದೆ, ಇದರಿಂದಾಗಿ ನಿಮ್ಮ ಹೊಟ್ಟೆಯು ದೀರ್ಘಕಾಲ ತುಂಬಿದ ಅನುಭವವನ್ನು ನೀಡುತ್ತದೆ, ಹಸಿವು ಮುಕ್ತಗೊಳಿಸುತ್ತದೆ. ಇದರಿಂದ ನೀವು ಪದೇ ಪದೇ ಆಹಾರ ಸೇವನೆ ಮಾಡುವುದನ್ನು ತಪ್ಪಿಸಲಿದೆ.
6. ಚರ್ಮದ ಆರೋಗ್ಯ
ಸಿಹಿ ಆಲೂಗಡ್ಡೆಯಲ್ಲಿರುವ ವಿಟಮಿನ್ ಇ ಯ ಹೆಚ್ಚಿನ ಅಂಶವು ಜೀವಕೋಶಗಳ ಪುನರುತ್ಪಾದನೆಯನ್ನು ಉತ್ತೇಜಿಸುವ ಮೂಲಕ ಮತ್ತು ಹಾನಿಕಾರಕ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುವ ಮೂಲಕ ಆರೋಗ್ಯಕರ ಚರ್ಮಕ್ಕೆ ಸಹಕಾರಿಯಾಗಿದೆ.
7. ಮೆದುಳಿನ ಕಾರ್ಯ ಚುರುಕಾಗಿಸುತ್ತದೆ
ಸಿಹಿ ಗೆಣಸುಗಳಲ್ಲಿ ಕಂಡುಬರುವ ಕೋಲೀನ್ ಎಂಬ ಪೋಷಕಾಂಶವು ಮೆದುಳಿನ ಬೆಳವಣಿಗೆ ಮತ್ತು ಅರಿವಿನ ಕಾರ್ಯಕ್ಕೆ ಅತ್ಯಗತ್ಯವಾಗಿದೆ. ಇದರಿಂದ ಮೆದುಳಿನ ಕಾರ್ಯ ಚುರುಕಾಗಿಸುತ್ತದೆ.
8. ಒತ್ತಡ ನಿವಾರಿಸುವ ಗುಣ ಹೊಂದಿದೆ
ಸಿಹಿ ಗೆಣಸು ಹೆಚ್ಚಿನ ಪ್ರಮಾಣದ ಮೆಗ್ನೀಸಿಯಮ್ ಅನ್ನು ಹೊಂದಿರುತ್ತವೆ, ಇದು ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಮತ್ತು ಶಾಂತತೆಯ ಭಾವನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಇದು ಒತ್ತಡದ ಸಮಯದಲ್ಲಿ ದೇಹದಲ್ಲಿ ಬಿಡುಗಡೆಯಾಗುವ ಹಾರ್ಮೋನ್‌ಗಳ ಮೇಲೆ ಪ್ರಭಾವ ಬೀರುವ ಅಂಶ ಇಟ್ಟುಕೊಂಡಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications