Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವೇಗನ್ ಡಯಟ್ ಪ್ರಾರಂಭಿಸಿ 8 ವಾರಗಳಲ್ಲಿ ಹೃದಯ ಆರೋಗ್ಯ ವೃದ್ಧಿಸುತ್ತೆ, ಮೈ ತೂಕ ಕಡಿಮಯಾಗುತ್ತೆ
ಈಗ ಹೃದಯಾಘಾತ ಎಂಬುವುದು ತುಂಬಾ ಸಾಮಾನ್ಯವಾಗಿದೆ. ತುಂಬಾ ಚಿಕ್ಕ ಪ್ರಾಯದವರಿಗೂ ಹೃದಯಾಘಾತ ಉಂಟಾಗುತ್ತಿದೆ. ಆದ್ದರಿಂದ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಹೃದಯದ ಆರೋಗ್ಯ ಬಗ್ಗೆ ತುಂಬಾನೇ ಜಾಗ್ರತೆವವಹಿಸಬೇಕಾಗಿದೆ. ಹೃದಯ ಸಮಸ್ಯೆ ಇರುವವರು ವೇಗನ್ ಡಯಟ್ ಮಾಡಿದರೆ ತುಂಬಾನೇ ಪ್ರಯೊಜನ ಪಡೆಯಬಹುದು ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ವೇಗನದ್ ಡಯಟ್ ಮಾಡಿದರೆ ದೇಹದ ಮೇಲಾಗುವ ಪ್ರಭಾವಗಳು
ಅಧ್ಯಯನದ ಪ್ರಕಾರ ವೇಗನ್ ಡಯಟ್ ಮಾಡುವುದರಿಂದ ತೂಕ ಇಳಿಕೆಯಾಗುತ್ತದೆ, ಇನ್ಸುಲಿನ್ ಸರಿ ಪ್ರಮಾಣದಲ್ಲಿರುತ್ತದೆ, ಅಲ್ಲದೆ ಹೃದಯಾಘಾತ, ಪಾರ್ಶ್ವವಾಯು ಈ ಬಗೆಯ ಸಮಸ್ಯೆಗಳು ತಡೆಗಟ್ಟಲು ಸಹಕಾರಿಯಾಗಿದೆ.
2 ತಿಂಗಳು ಅಧ್ಯಯನದಿಂದ ತಿಳಿದುಕಂಡ ಸತ್ಯವೇನು?
ವೇಗನ್‌ಡಯಟ್ ಶರೀರದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂದು ತಿಳಿಯಲು ಎರಡು ತಿಂಗಳು ಪರೀಕ್ಷೆ ಮಾಡಲಾಯಿತು. ಈ ಪರೀಕ್ಷೆಯಲ್ಲಿ 21 ಅವಳಿ ಜೋಡಿಗಳು ಭಾಗಿಯಾಗಿದ್ದರು, ಅವರಿಗೆ ಪೋಷಕಾಂಶವಿರುವ ಆಹಾರವನ್ನು ನೀಡಲಾಯಿತು, ಆದರೆ ಒಬ್ಬರಿಗೆ ಬರೀ ವೇಗನೆ, ಮತ್ತೊಬ್ಬರಿಗೆ ಮಿತ ಪ್ರಮಾಣದಲ್ಲಿ ಮಾಂಸಾಹಾರ ನೀಡಲಾಯಿತು. ಎರಡು ತಿಂಗಳ ನಂತರ ಪರೀಕ್ಷೆ ಮಾಡಿದಾಗ ಬರೀ ವೇಗನ್ ಡಯಟ್ ಮಾಡಿರುವವರು ಹೆಚ್ಚು ಆರೋಗ್ಯಕರವಾಗಿರುವುದು ಕಂಡು ಬಂತು. ರಕ್ತದೊತ್ತಡ, ಕೊಲೆಸ್ಟ್ರಾಲ್ ಯಾವುದೇ ಸಮಸ್ಯೆಯಿಲ್ಲದೆ ಹೃದಯ ಹೆಚ್ಚು ಆರೋಗ್ಯಕರವಾಗಿತ್ತು.
ವೇಗನ್ ಡಯಟ್ ಮಾಡುವುದರಿಂದ ದೊರೆಯುವ ಪ್ರಯೋಜನಗಳೇನು?
* ಕಾಯಿಲೆಗಳು ಕಡಿಮೆಯಾಗುವುದು: ಅನೇಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ವೇಗನ್ ಡಯಟ್ ಟ್ರೈ ಮಾಡಿ ನೋಡಿ, ಕೆಲವೇ ತಿಂಗಳಿನಲ್ಲಿ ನಿಮ್ಮ ಶರೀರದಲ್ಲಿ ಧನಾತ್ಮಕ ಪ್ರಯೋಜನವನ್ನು ಕಾಣಬಹುದು. ಏಕೆಂದರೆ ವೇಗನ್ ಡಯಟ್‌ನಲ್ಲಿ ಒಮೆಗಾ 3 ಅಧಿಕವಿದ್ದು ಸ್ಯಾಚುರೇಟಡ್ ಕೊಬ್ಬಿನಂಶ ಕಡಿಮೆ ಇರುತ್ತದೆ.
ಮಧುಮೇಹಿಗಳಿಗೆ ತುಂಬಾ ಒಳ್ಳೆಯದು
ವೇಗನ್ ಡಯಟ್ ಮಾಡುವುದರಿಂದ ಸಾಕಷ್ಟು ತರಕಾರಿ ಹೊಟ್ಟೆಯನ್ನು ಸೇರುವುದು. ಇದರಿಂದ ದೇಹದಲ್ಲಿ ಸಕ್ಕರೆಯಂಶ ಬೇಗನೆ ಹೆಚ್ಚಾಗುವುದಿಲ್ಲ, ನಾರು ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿದರೆ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿ, ಆದ್ದರಿಂದ ಈ ಡಯಟ್ ಮಧುಮೇಹಿಗಳಿಗೆ ತುಂಬಾನೇ ಒಳ್ಳೆಯದಿದೆ.
ಮೊಡವೆ ಸಮಸ್ಯೆ ಹೆಚ್ಚಾಗುವುದು
ಹಾಲಿನ ಉತ್ಪನ್ನಗಳು ಮೊಡವೆ ಸಮಸ್ಯೆಯನ್ನು ಹೆಚ್ಚಿಸುತ್ತದೆ, ಆದರೆ ವೇಗನ್ ಡಯಟ್ ಫಾಲೋ ಮಾಡಿದರೆ ತ್ವಚೆ ಕಾಂತಿ ಹೆಚ್ಚಾಗುವುದು, ಮೊಡವೆ ಇಲ್ಲವಾಗುವುದು.ಯಾರಿಗೆ ಮೊಡವೆ ಸಮಸ್ಯೆ ಇದೆಯೋ ಅವರು ವೇಗನ್ ಡಯಟ್ ಮಾಡಿದರೆ ಉತ್ತಮ ಪ್ರಯೋಜನವನ್ನು ಪಡೆಯಬಹುದು.
ಮೈ ತೂಕ ಕಡಿಮೆಯಾಗಲು ಸಹಕಾರಿ
ಇತರ ಡಯಟ್‌ಗಿಂತ ವೇಗನ್ ಡಯಟ್ ಮೈ ತೂಕ ಕಡಿಮೆ ಮಾಡಲು ತುಂಬಾನೇ ಸಹಕಾರಿಯಾಗಿದೆ. ವೇಗನ್ ಡಯಟ್ ಜೊತೆಗೆ ದಿನಾ 30 ನಿಮಿಷ ವ್ಯಾಯಾಮ ಮಾಡಿದರೆ ಸಾಕು ಮೈ ತೂಕ ನೀವು ಬಯಸಿದಂತೆ ನಿಯಂತ್ರಣಕ್ಕೆ ತರಬಹುದು.
ಸಂಧಿವಾತ ಸಮಸ್ಯೆ ಕಡಿಮೆ ಮಾಡಲು ವೇಗನ್ ಡಯಟ್ ಸಹಕಾರಿ
ಮಾಂಸಾಹಾರ ಉರಿಯೂತದ ಸಮಸ್ಯೆ ಹೆಚ್ಚು ಮಾಡುತ್ತದೆ, ಅದೇ ವೇಗನ್ ಡಯಟ್ ಮಾಡುವುದರಿಂದ ಸಂಧಿ ನೋವು ಕಡಿಮೆಯಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications