Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಲಕ್ಷಣಗಳು ಕಂಡು ಬಂದರೆ ಖಂಡಿತ ನಿಮ್ಮ ಹಾಸಿಗೆ ಬದಲಾಯಿಸಲೇಬೇಕು !
ಒರ್ವ ಮನುಷ್ಯನಿಗೆ ಊಟ, ತಿಂಡಿ ಎಷ್ಟು ಮುಖ್ಯವೋ ನಿದ್ದೆಯೂ ಕೂಡ ಅಷ್ಟೇ ಅವಶ್ಯಕವಾಗಿದೆ. ಮನುಷ್ಯ ಸರಿಯಾಗಿ ನಿದ್ದೆ ಮಾಡದೇ ಹೋದರೆ ಆತ ಖಂಡಿತ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾನೆ. ನಾವು ಸುಖ ನಿದ್ದೆ ಮಾಡಬೇಕಾದರೆ ಅದಕ್ಕೆ ನಮ್ಮ ಹಾಸಿಗೆ ಕೂಡ ಸಹಕರಿಸಲೇಬೇಕು. ಒಂದು ವೇಳೆ ಹಾಸಿಗೆ ಸರಿಯಾಗಿರದಿದ್ದರೆ ನಾವು ರಾತ್ರಿ ಪೂರ್ತಿ ಕಣ್ತುಂಬ ನಿದ್ದೆ ಮಾಡೋದಕ್ಕೆ ಸಾಧ್ಯವಿಲ್ಲ. ಅಷ್ಟಕ್ಕು ಯಾವಾಗ ನಾವು ಹಾಸಿಗೆಯನ್ನು ಬದಲಾಯಿಸಬೇಕು? ಈ ಲಕ್ಷಣಗಳು ಕಂಡು ಬಂದರೆ ಖಂಡಿತ ಹಾಸಿಗೆ ಬದಲಾಯಿಸಲೇಬೇಕು.
1. ನಿಮ್ಮ ದೇಹದಲ್ಲಿ ಸಮಸ್ಯೆ ಕಾಣಿಸಿಕೊಂಡಾಗ
ನೀವು ಬೆಳಗ್ಗೆ ಎದ್ದಾಗ ಮೈ, ಕೈ ನೋವು ಕಾಣಿಸಿಕೊಳ್ಳುತ್ತದೆ. ಈ ರೀತಿ ಪ್ರತಿನಿತ್ಯ ಆಗುತ್ತಿದ್ದರೆ ನಿಮ್ಮ ಹಾಸಿಗೆ ಅದರ ಸಾಮರ್ಥ್ಯವನ್ನು ಕಳೆದುಕೊಂಡಿದೆ ಎಂದರ್ಥ. ಹಾಸಿಗೆಗಳು ಸವೆದಾಗ ಅವು ತಮ್ಮ ಒತ್ತಡ-ನಿವಾರಕ ಗುಣಗಳನ್ನು ಕಳೆದುಕೊಳ್ಳುತ್ತದೆ. ಇದರ ಪರಿಣಾಮ ನಿಮಗೆ ಬೆನ್ನುಮೂಳೆಗೆ ಸಮಸ್ಯೆಯನ್ನು ತಂದೊಡ್ಡುತ್ತದೆ. ಕೀಲುಗಳ ಸುತ್ತ ಒತ್ತಡ ಹೆಚ್ಚಾಗಿ ಬೆನ್ನು ಮೂಳೆ ವಕ್ರವಾಗಬಹುದು. ಈ ರೀತಿ ಆಗುತ್ತಿದ್ದರೆ ನಿದ್ದೆ ಬರೋದಿಲ್ಲ. ಪದೇ ಪದೇ ಎಚ್ಚರಗೊಳ್ಳುತ್ತೀರಿ.

2. ಹಾಸಿಗೆ ನಿಮ್ಮ ಗಾತ್ರಕ್ಕೆ ಹೊಂದಾಣಿಕೆ ಆಗದಿದ್ದರೆ
ಎಲ್ಲಾ ಹಾಸಿಗೆಗಳು ಎಲ್ಲರಿಗೂ ಹೊಂದಾಣಿಕೆ ಆಗೋದಿಲ್ಲ. ಚಿಕ್ಕ ಮಕ್ಕಳಿಗೆ ಒದು ರೀತಿ ಹಾಸಿಗೆ, ಯುವಕರಿಗೆ, ವಯಸ್ಸಾದವರಿಗೆ ಹೀಗೆ ಅವರವರ ವಯಸ್ಸಿಗೆ ತಕ್ಕ ಹಾಗೆ ಹಾಸಿಗೆ ಬಳಸಿದರೆ ಉತ್ತಮ. ಇನ್ನೂ ಹೆಚ್ಚು ತೂಕ ಹೊಂದಿರುವವರಿಗೆ ಸಣ್ಣದಾಗಿರುವ ಹಾಸಿಗೆ ಬಳಸಬಾರದು. ಯುವಕರು ಸಾಮಾನ್ಯವಾಗಿ ಎಲ್ಲಾ ವಿಧದ ಹಾಸಿಗೆಗೂ ಹೊಂದಿಕೊಳ್ಳುತ್ತಾರೆ. ಆದರೆ ವಯೋ ವೃದ್ಧರು ಹಾಗೂ ಮಕ್ಕಳು ಮಲಗುವ ಹಾಸಿಗೆ ಬಗ್ಗೆ ಗಮನ ಹರಿಸಲೇಬೇಕು.
3. ಈಗಿರುವ ಹಾಸಿಗೆ 8 ವರ್ಷಕ್ಕಿಂತ ಹಳೆಯದಾಗಿರಲೇಬಾರದು
ಒಂದು ಹಾಸಿಗೆ ಎಷ್ಟು ವರ್ಷ ಬಾಳಿಕೆ ಬರಬಹುದು? ಕೆಲವೊಂದು ಸಲ ಆ ಹಾಸಿಗೆ ಎಂತಹ ವಸ್ತುವಿನಿಂದ ತಯಾರಿಸಲಾಗಿದೆ ಅನ್ನೋದ್ರ ಮೇಲೆ ಅವಲಂಬಿತವಾಗಿರುತ್ತದೆ. ನೈಸರ್ಗಿಕ ಹಾಸಿಗೆಗಳನ್ನು ತುಂಬಾ ವರ್ಷ ಕಾಳಜಿ ಮಾಡಿದರೆ ಹೆಚ್ಚು ವರ್ಷಗಳ ಕಾಲ ಬಾಳಿಕೆ ಬರುತ್ತದೆ. ನಿಮ್ಮ ಹಾಸಿಗೆ ಎಂಟು ವರ್ಷ ಅಥವಾ ಅದಕ್ಕಿಂತ ಹಳೆಯದಾಗಿದ್ದರೆ ಖಂಡಿತ ಅದನ್ನು ಬದಲಾಯಿಸಲೇಬೇಕು. ಯಾಕಂದ್ರೆ ಎಂಟು ವರ್ಷಗಳ ನಂತರ ನೀವು ಎಷ್ಟೇ ಕಾಳಜಿ ಮಾಡಿದರೂ ಕೂಡ ಅದರಲ್ಲಿರುವ ಧೂಳು ಬೆವರಿನ ಕಣಗಳಿಂದ ನಿಮ್ಮ ಆರೋಗ್ಯಕ್ಕೆ ಸಮಸ್ಯೆಯಾಗುತ್ತದೆ.
4. ಕುಗ್ಗುವುದು ಮತ್ತು ಸವೆಯುವುದು
ಕುಗ್ಗುವುದು ಸವೆದ ಹಾಸಿಗೆಯ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ನಿಮ್ಮ ಹಾಸಿಗೆ ಮಧ್ಯದಲ್ಲಿ ಕುಗ್ಗಬಹುದು, ಮೃದುವಾಗಬಹುದು ಅಥವಾ ಬಾಗಬಹುದು. ಇಂತಹ ಸಂದರ್ಭದಲ್ಲಿ ನೀವು ಹಾಸಿಗೆಯಲ್ಲಿ ಮಲಗಿದರೆ ನಿಮ್ಮ ಸೊಂಟದಲ್ಲಿ ಅತಿಯಾದ ನೋವು ಕಾಣಿಸಿಕೊಳ್ಳುತ್ತದೆ. ರಾತ್ರಿಯೆಲ್ಲಾ ಆರಾಮಾಗಿ ಮಲಗಿಕೊಳ್ಳೋದಕ್ಕೆ ಸಾಧ್ಯವಾಗೋದಿಲ್ಲ. ಅಷ್ಟೇ ಯಾಕೆ ನಿಮ್ಮ ಬೆನ್ನುಮೂಳೆಯು ವಕ್ರವಾಗುವ ಸಾಧ್ಯತೆ ಇದೆ.
5. ಹಾಸಿಗೆಯಲ್ಲಿ ಮಲಗಿದಾಗ ಬಿಸಿ ಅನುಭವವಾದರೆ
ಹಾಸಿಗೆಯಲ್ಲಿ ಮಲಗೋದಾದ್ರೆ ಫ್ಯಾನ್, ಎಸಿ, ಕೂಲರ್ ಅಥವಾ ಸಾಕಷ್ಟು ನೈಸರ್ಗಿಕ ಗಾಳಿ ಅಲ್ಲಿರಲೇಬೇಕು. ಇಲ್ಲದಿದ್ದರೆ ಖಂಡಿತ ಮಲಗೋದಿಕ್ಕೆ ಆಗೋದಿಲ್ಲ. ಬೆನ್ನು ಸೇರಿದಂತೆ ಮೈಯೆಲ್ಲಾ ಬಿಸಿಯಾದ ಅನುಭವವಾಗುತ್ತದೆ. ಕೆಲವೊಂದು ಸಲ ಅತಿಯಾಗಿ ಬೆವರುವುದು, ಬಿಸಿಯಾಗುವುದು ಹಾರ್ಮೋನು ಸಮಸ್ಯೆ ಕೂಡ ಆಗಿರಬಹುದು. ಆದರೆ ಇನ್ನೂ ಕೆಲವು ಸಲ ಹಾಸಿಗೆ ಮಾಡೋದಕ್ಕೆ ಬಳಸಿರುವ ವಿಸ್ಕೋಲಾಸ್ಟಿಕ್ ಪಾಲಿಯುರೆಥೇನ್ ರಾಸಾಯನಿಕಗಳಿಂದಲೂ ಉಂಟಾಗುತ್ತದೆ. ಇವು ಶಾಖವನ್ನು ಹಿಡಿದಿಟ್ಟುಕಳ್ಳುತ್ತದೆ.
6. ದುರ್ವಾಸನೆ ಬೀಡುತ್ತಿದ್ದರೆ
ಅನೇಕ ಬಾರಿ ಹಾಸಿಗೆಯಿಂದ ದುರ್ವಾಸನೆ ಬರುತ್ತಿರುತ್ತದೆ. ಆದರೆ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಅದೇ ಹಾಸಿಗೆಯನ್ನು ಬಳಸುತ್ತಿರುತ್ತೇವೆ. ಆದರೆ ಈ ರೀತಿ ಮಾಡೋದು ತಪ್ಪು. ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನಿಮ್ಮನ್ನು ಕಾಯಿಲೆ ಬೀಳುವಂತೆ ಮಾಡಬಹುದು. ಹೀಗಾಗಿ ತಕ್ಷಣ ನಿಮ್ಮ ಹಾಸಿಗೆ ಬದಲಾಯಿಸಿದರೆ ಒಳ್ಳೆಯದು.
ದಿನ ನಿತ್ಯ ಹಾಸಿಗೆಯ ಮೇಲೆ ಮಲಗುವವರಾದರೆ ಈ ಸೂಕ್ಷ್ಮ ವಿಚಾರಗಳನ್ನು ಖಂಡಿತ ಗಮನಿಸಲೇಬೇಕು. ಯಾವುದೇ ಕಾರಣಕ್ಕೆ ನಿರ್ಲಕ್ಷ್ಯ ಮಾಡಬೇಡಿ ಇದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಆದ್ದರಿಂದ ಹಾಸಿಗೆಯ ಬಗ್ಗೆ ಕಾಳಜಿ ವಹಿಸೋದು ತುಂಬಾನೇ ಮುಖ್ಯ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

