Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ತಟ್ಟೆ ಖಾಲಿ ಮಾಡುವಂತೆ ಮಕ್ಕಳಿಗೆ ಒತ್ತಾಯಿಸುತ್ತೀರಾ..? ವೈದ್ಯರು ಹೇಳೋದೇನು ಗೊತ್ತಾ?
ಮನೆಯಲ್ಲಿ ಮಕ್ಕಳಿದ್ದರೆ ಅವರು ಊಟ, ತಿಂಡಿ ಮಾಡುವುದು ಇಡೀ ದಿನದ ಕೆಲಸವಾಗುತ್ತೆ. ಅದರಲ್ಲು 7ರಿಂದ 8 ವರ್ಷದೊಳಗಿನ ಮಕ್ಕಳೂ ಊಟ ತಿಂಡಿಗಿಂತ ಹೆಚ್ಚು ಸಮಯ ಆಟದಲ್ಲಿಯೇ ಕಳೆಯುತ್ತಾರೆ. ಹೀಗಾಗಿ ಮಕ್ಕಳಿರುವ ಮನೆಯಲ್ಲಿ ಊಟಕ್ಕೆ ತಿಂಡಿಗೆ ಗಲಾಟೆ ಇದ್ದೇ ಇರುತ್ತೆ. ಹಾಗೆ ಕೆಲವೊಮ್ಮೆ ಮಕ್ಕಳು ತಟ್ಟೆಯಲ್ಲಿ ಹಾಕಿದ ಊಟ, ತಿಂಡಿಯನ್ನು ಅರ್ಧಕ್ಕೆ ಬಿಟ್ಟು ತೆರಳುವುದು ಕೂಡ ನೋಡಬಹುದು.
ಹಾಗೆ ಮಕ್ಕಳು ಹಠ ಮಾಡಿದಾಗ ಅಥವಾ ಪೂರ್ತಿಯಾಗಿ ಖಾಲಿ ಮಾಡುವಂತೆ ಪೋಷಕರು ಒತ್ತಡ ಹಾಕುವುದನ್ನು ಸಹ ನೋಡಿರುತ್ತೇವೆ. ಆದ್ರೆ ಈ ರೀತಿ ಒತ್ತಾಯವಾಗಿ ಮಕ್ಕಳಿಗೆ ಆಹಾರ ಸೇವಿಸುವಂತೆ ಮಾಡುವುದು ಎಷ್ಟು ಸರಿ ಎಂಬುದು ನಿಮಗೆ ಗೊತ್ತಾ? ಅಥವಾ ಈ ರೀತಿ ಒತ್ತಾಯ ಪೂರ್ವಕವಾಗಿ ಅವರಿಗೆ ಆಹಾರ ನೀಡುವುದರಿಂದಾಗಿ ಸಮಸ್ಯೆಗಳೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಪೋಷಕರಲ್ಲಿ ಒಂದು ಮನೋಭಾವವಿದೆ. ಮಕ್ಕಳು ಹೆಚ್ಚು ಹೆಚ್ಚು ತಿಂದರೆ ಮಾತ್ರವೇ ಆರೋಗ್ಯವಾಗಿರುತ್ತಾರೆ ಎಂದುಕೊಳ್ಳುತ್ತಾರೆ. ಆದರೆ ಮಕ್ಕಳಿಗೆ ತಮಗೆ ಎಷ್ಟು ಬೇಕೋ ಅಷ್ಟನ್ನೇ ಆಹಾರವಾಗಿ ನೀಡಬೇಕು. ಅವರ ವಯಸ್ಸು, ತೂಕದ ಆಧಾರದ ಮೇಲೆ ಅವರು ಎಷ್ಟು ಪ್ರಮಾಣದ ಆಹಾರ ಸೇವಿಸಬೇಕು ಎಂಬುದನ್ನು ನಿರ್ಧಾರ ಮಾಡಬೇಕೆ ಹೊರತು, ತಟ್ಟೆಯಲ್ಲಿ ಹಾಕಿಕೊಟ್ಟಷ್ಟು ಸವಿಯಬೇಕು ಎಂಬ ನಿಯಮ ಹಾಕುವುದಲ್ಲ.
ಈ ರೀತಿ ಮಕ್ಕಳ ಮೇಲೆ ಒತ್ತಡ ಹಾಕಿ ಹೆಚ್ಚು ಆಹಾರ ಸೇವಿಸುವಂತೆ ಮಾಡುವುದು ತಕ್ಷಣ ಅಲ್ಲದಿದ್ದರೂ ಭವಿಷ್ಯದಲ್ಲಿ ಸಮಸ್ಯೆಯಾಗಿ ಕಾಡಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಬ್ರಿಟಿಷ್ ನ್ಯೂಟ್ರಿಷನ್ ಫೌಂಡೇಶನ್‌ನೊಂದಿಗಿನ ಸಮೀಕ್ಷೆಯ ಪ್ರಕಾರ, ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಪೋಷಕರು ತಮ್ಮ ಮಕ್ಕಳು ತಮ್ಮ ತಟ್ಟೆಯಲ್ಲಿ ಬಡಿಸಿದ ಎಲ್ಲವನ್ನೂ ತಿನ್ನುವಂತೆ ಮಾಡುತ್ತಾರೆ ಎಂದು ಹೇಳಿದೆ. ಹಾಗೆ ಇದನ್ನು ಒತ್ತಾಯವಾಗಿ ಸೇವಿಸುವಂತೆ ಮಾಡುತ್ತಾರೆ ಎಂದು ವರದಿಯಲ್ಲಿ ಹೇಳಿದೆ.
ಪೋಷಕರು ಏನು ಮಾಡಬೇಕು?
ಮಕ್ಕಳು ತಾವಾಗಿಯೇ ಆಹಾರಗಳ ಸೇವನೆ ಮಾಡುವ ಅಭ್ಯಾಸ ಬೆಳೆಸಬೇಕು. ಅಂದರೆ ಅವರಿಗೆ ನಿಮಗೆ ಹೊಟ್ಟೆ ತುಂಬುವರರೆಗೂ ಆಹಾರ ಸವಿಯಲು ಹೇಳಬೇಕು. ಆದರೆ ಅವರಿಗೆ ಒತ್ತಾಯವಾಗಿ ನೀವೆ ಆಹಾರ ನೀಡಬಾರದು. ಸ್ವಲ್ಪವೂ ಆಹಾರ ಸೇವಿಸುವುದಿಲ್ಲ ಎನ್ನುವಂತಿದ್ದರೆ ಮಾತ್ರ ಒತ್ತಾಯವಾಗಿ ಸ್ವಲ್ಪ ತಿನ್ನಿಸಬಹುದು.
ಮೊಬೈಲ್ ನೋಡಿ ತಿನ್ನಿಸುವ ಅಭ್ಯಾಸ ನಿಲ್ಲಿಸಿ
ಮಕ್ಕಳು ಊಟ ತಿಂಡಿ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಕೈಹೆ ಮೊಬೈಲ್ ನೀಡಿ ತಿನ್ನಿಸುವುದು ಈಗ ಕಾಮನ್ ಆಗಿದೆ. ಆದರೆ ಮೊಬೈಲ್ ನೀಡಿ ಅಥವಾ ಟಿವಿ ತೋರಿಸುತ್ತಾ ತಿನ್ನಿಸುವ ಅಭ್ಯಾಸ ಉತ್ತಮವಲ್ಲ. ಇದರಿಂದ ಮಕ್ಕಳು ಎಷ್ಟು ತಿನ್ನುತ್ತಿದ್ದೇವೆ, ಹೊಟ್ಟೆ ತುಂಬಿದೆಯೇ ಇಲ್ಲವೆ ಎಂಬುದನ್ನು ಕೂಡ ಪತ್ತೆ ಮಾಡಲು ಆಗುವುದಿಲ್ಲ.
ಪ್ರತಿ ದಿನ ಒಂದೇ ಪ್ರಮಾಣದ ಊಟ ತಿಂಡಿ ನೀಡಿ
ಮಕ್ಕಳು ಒಂದೇ ಬಾರಿಗೆ ಹೆಚ್ಚು ಆಹಾರ ಸವಿಯುವುದಿಲ್ಲ. ಹೀಗಾಗಿ ಪ್ರತಿ ಬಾರಿ ಅವರಿಗೆ ಎಷ್ಟು ಆಹಾರ ನೀಡುತ್ತೀರೋ ಅಷ್ಟೇ ಪ್ರಮಾಣದಲ್ಲಿ ನೀಡುತ್ತಾ ಬರಬೇಕು. ನಿತ್ಯ ಒಂದೊಂದು ಪ್ರಮಾಣದಲ್ಲಿ ನೀಡುವುದನ್ನು ಕೂಡ ತಪ್ಪಿಸಬೇಕು.
ವೈದ್ಯರು ಹೇಳುವುದು ಏನು?
ಮಕ್ಕಳು ಊಟ, ತಿಂಡಿ ಮಾಡುವ ಕುರಿತಂತೆ ಮಕ್ಕಳ ವೈದ್ಯರಾಗಿರುವ ಕಿರಣ್ ಕುಮಾರ್ ಅವರು ಹೇಳಿರುವಂತೆ, ಮಕ್ಕಳಿಗೆ ಒತ್ತಾಯವಾಗಿ ಆಹಾರ ಸೇವಿಸುವ ಅಭ್ಯಾಸ ಮಾಡಬಾರದು. ಇದು ಒಬೆಸಿಟಿಯಂತಹ ಸಮಸ್ಯೆಗೆ ಕಾರಣವಾಗಬಹುದು. ಹಾಗೆ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಹೀಗೆ ಹೆಚ್ಚು ಹೆಚ್ಚು ಆಹಾರವನ್ನು ಒತ್ತಾಯವಾಗಿ ಸೇವಿಸುವಂತೆ ಮಾಡುವುದು ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ. ಇದು ಮಕ್ಕಳ ಆರೋಗ್ಯಕ್ಕೂ ಉತ್ತಮವಲ್ಲ. ಅವರು ಊಟ ತಿಂಡಿ ಸವಿಯಲು ಹಠ ಮಾಡಿದರೆ ಊಟದ ಪ್ರಮಾಣದಲ್ಲಿ ಬೇರೆ ಯಾವುದೇ ಆಹಾರ ನೀಡಬಹುದು. ಜ್ಯೂಸ್, ಹಣ್ಣು, ಹಸಿ ತರಕಾರಿ, ಹಾಲು ಕೂಡ ನೀಡಬಹುದು ಎಂದು ಹೇಳಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
