Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೆಮ್ಮಿನ ಸಿರಪ್ ಕುಡಿದ ಬಳಿಕ ನೀರು ಸೇವಿಸಬೇಕೆ..? ತಜ್ಞರು ಹೇಳೋದೇನು?
ಮಳೆಗಾಲ ಆರಂಭವಾಗುತ್ತಿದೆ. ಮಳೆಗಾಲ ಆರಂಭವಾಯಿತೆಂದರೆ ಅದರ ಜೊತೆ ಒಂದಿಷ್ಟು ಕಾಯಿಲೆಗಳು ಸಹ ಬರುತ್ತವೆ. ಶೀತ, ಕೆಮ್ಮು, ಗಂಟಲು ನೋವು, ಜ್ವರ ಇವು ಸಾಮಾನ್ಯವಾಗಿ ಮಳೆಗಾಲದ ಆರಂಭದ ದಿನಗಳಲ್ಲಿ ಕಾಡುವ ಕಾಯಿಲೆಗಳಾಗಿವೆ.
ಆದ್ರೆ ಇಂತಹ ಸಂದರ್ಭದಲ್ಲಿ ಹಲವರು ಕೆಮ್ಮಿನಿಂದ ಬಳಲುತ್ತಾರೆ. ಸಾಮಾನ್ಯವಾಗಿ ಕೆಮ್ಮು ಆರಂಭವಾದರೆ ಸಿರಪ್‌ಗಳು ಸಿಗುತ್ತವೆ, ಮೆಡಿಕಲ್‌ನಿಂದ ಖರೀದಿಸಿ ತಂದು ನಾವು ಸಿರಪ್ ಸೇವಿಸುತ್ತೇವೆ. ಆದರೆ ಈ ಕೆಮ್ಮಿನ ಸಿರಪ್ ಕುಡಿದ ತಕ್ಷಣ ನೀರು ಕುಡಿಯಬೇಕು ಎಂದು ಹಿರಿಯರು ಆಗಾಗ ಹೇಳುವುದನ್ನು ನಾವು ಕೇಳಿದ್ದೇವೆ.

ಹಾಗಾದ್ರೆ ಈ ಕೆಮ್ಮಿನ ಸಿರಪ್ ಕುಡಿದ ತಕ್ಷಣ ನೀರು ಏಕೆ ಕುಡಿಯಬೇಕು? ಇದರ ಹಿಂದಿರು ಸತ್ಯವೇನು? ನಿಜವಾಗಲು ಸಿರಪ್ ಕುಡಿದ ಬಳಿಕ ನೀರು ಕುಡಿಯಬೇಕೆ ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ.
ಕೆಮ್ಮಿನ ಸಿರಪ್‌ಗಳು ಕೆಮ್ಮಿಗೆ ತಾತ್ಕಾಲಿಕ ಉಪಶಮನವನ್ನು ನೀಡುತ್ತವೆ, ಮುಖ್ಯವಾಗಿ ಮೆಂತ್ಯೆಯಂತಹ ಪದಾರ್ಥಗಳಿಂದಾಗಿ, ಒಣ ಮತ್ತು ಒದ್ದೆಯಾದ ಕೆಮ್ಮುಗಳನ್ನು ಶಮನಗೊಳಿಸುತ್ತದೆ. ಈ ಸಿರಪ್‌ಗಳು ನೇರವಾಗಿ ಗಂಟಲಿನ ಮೇಲೆ ಪರಿಣಾಮ ಬೀರುವುದಿಲ್ಲ. ಬದಲಿಗೆ ಉಸಿರಾಟದ ವ್ಯವಸ್ಥೆಯ ಮೇಲೆ ಕಾರ್ಯನಿರ್ವಹಿಸುತ್ತವೆ ಎಂದು ಮುಂಬೈನ ಸ್ವಾಹಿತ ಆಯುರ್ವೇದ ಕ್ಲಿನಿಕ್‌ನ ಸಂಸ್ಥಾಪಕ ಡಾ ಮನೀಶಾ ಮಿಶ್ರಾ ಗೋಸ್ವಾಮಿ ವಿವರಿಸುತ್ತಾರೆ.
ಮಾತ್ರಗಳಿಗಿಂತ ಸಿರಪ್ ಸೇವನೆ ಉತ್ತಮ
ಇನ್ನು ಯಾವುದೇ ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆಗಳಿಗೆ ಮಾತ್ರೆಗಳಿಗಿಂತಲೂ ಸಿರಪ್ ಸೇವನೆ ಉತ್ತಮ. ಏಕೆಂದರೆ ಮಾತ್ರೆಗಳು ತಕ್ಷಣ ಕಾರ್ಯ ನಿರ್ವಹಿಸುವುದಿಲ್ಲ. ಮಾತ್ರೆ ಸೇವನೆ ಬಳಿಕ ಅದು ಪ್ರಕ್ರಿಯಿಸಿಸಲು ಕೆಲ ಸಮಯ ಹಿಡಿಯುತ್ತದೆ. ಆದರೆ ಸಿರಪ್‌ಗಳು ತಕ್ಷಣ ಕಾರ್ಯಾರಂಭ ಮಾಡುತ್ತವೆ. ಅಲ್ಲದೆ ಇದು ಉದರಲ್ಲಿ ವೇಗವಾಗಿ ಹೀರಿಕೊಳ್ಳಲು ನೆರವಾಗುತ್ತದೆ. ರಕ್ತದಲ್ಲಿ ಬಹುಬೇಗ ಸೇರಿಕೊಳ್ಳುತ್ತವೆ.
ದ್ರವ ಔಷಧಗಳು ಅಥವಾ ಕೆಮ್ಮಿನ ಸಿರಪ್ ನಂತರ ನೀರು ಕುಡಿಯುವುದು ಸಾಮಾನ್ಯವಾಗಿ ಸುರಕ್ಷಿತವಾಗಿದೆ, ಏಕೆಂದರೆ ಇದು ಶ್ವಾಸಕೋಶದಲ್ಲಿ ಲೋಳೆಯ ಅಥವಾ ಕಫವನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ ಎಂದು ಪುಣೆಯ ಸಹ್ಯಾದ್ರಿ ಆಸ್ಪತ್ರೆಯ ಮುಖ್ಯ ಆಹಾರ ತಜ್ಞರಾದ ಡಾ ಶುಚಿ ಶರ್ಮಾ ಹೇಳಿದ್ದಾರೆ.
ಆದರೆ ನೋಯ್ಡಾದ ನ್ಯೂಬರ್ಗ್ ಡಯಾಗ್ನೋಸ್ಟಿಕ್ಸ್ ಲ್ಯಾಬ್‌ನ ಮುಖ್ಯಸ್ಥ ಡಾ ವಿಜ್ಞಾನ್ ಮಿಶ್ರಾ ಅವರು ಸಿರಪ್ ಸೇವನೆ ಬಳಿಕ ನೀರು ಕುಡಿಯುವುದನ್ನು ವಿರೋಧಿಸುತ್ತಾರೆ. ಕೆಮ್ಮು ಸಿರಪ್ ಅಥವಾ ದ್ರವ ಔಷಧಗಳನ್ನು ಸೇವಿಸಿದ ತಕ್ಷಣ ನೀರನ್ನು ಸೇವಿಸುವುದನ್ನು ಸಾಮಾನ್ಯವಾಗಿ ವಿರೋಧಿಸಲಾಗುತ್ತದೆ ಎಂದಿದ್ದಾರೆ. 'ಈ ಔಷಧಿಗಳು ಸಾಮಾನ್ಯವಾಗಿ ಗಂಟಲಿಗೆ ಲೇಪಿಸಲು ಉದ್ದೇಶಿಸಿರುವ ಪದಾರ್ಥಗಳನ್ನು ಒಳಗೊಂಡಿರುತ್ತವೆ, ಕಿರಿಕಿರಿಯನ್ನು ಶಮನಗೊಳಿಸುತ್ತದೆ ಮತ್ತು ಸಕ್ರಿಯ ಘಟಕಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ. ತಕ್ಷಣವೇ ನೀರು ಕುಡಿಯುವುದರಿಂದ ಈ ಪ್ರಯೋಜನಕಾರಿ ಲೇಪನಗಳು ಹೊಟ್ಟೆಯೊಳಗೆ ಸೇರಿಕೊಳ್ಳುತ್ತವೆ. ಔಷಧದ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಂದರೆ ಕೆಲವು ಸಿರಪ್‌ಗಳಲ್ಲಿ ಗಂಟಲು ಕಿರಿಕಿರಿ ಶಮನಗೊಳಿಸಲು ವಿಶೇಷ ಅಂಶ ಇರಲಿದೆ, ಇವು ಗಂಟಲಿಗೆ ತಾಕಿದ ಬಳಿಕ ನೇರವಾಗಿ ಪರಿಣಾಮ ಬೀರಲು ಆರಂಭಿಸುತ್ತದೆ. ಆದರೆ ನೀವು ಸಿರಪ್ ಸೇವಿಸಿದ ಬಳಿಕ ತಕ್ಷಣವೇ ನೀರು ಕುಡಿದರೆ ಆ ಔಷಧಿಯ ಪ್ರಭಾವ ಕಡಿಮೆಯಾಗಲಿದೆ ಎನ್ನಲಾಗಿದೆ.
ಬಹುತೇಕ ಸಿರಪ್‌ಗಳನ್ನು ಹೇಗೆ ಕುಡಿಯಬೇಕು ಎಂಬ ಕುರಿತು ವೈದ್ಯರು ಅಥವಾ ಆ ಸಿರಪ್ ಮೇಲೆ ನಮೂದಿಸಲಾಗಿರುತ್ತದೆ. ಅದನ್ನು ಓದಿದರೆ ಸಾಕು ಅಥವಾ ವೈದ್ಯರ ಬಳಿ ಈ ಸಿರಪ್ ಕುಡಿದ ಬಳಿಕ ನೀರು ಕುಡಿಯಬಹುದೇ ಎಂಬ ಪ್ರಶ್ನೆ ಸಲಹೆ ಪಡೆಯುವುದು ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
