Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಬಳುಕುವ ಬಳ್ಳಿಯಂತಾಗಲು ಅನುಸರಿಸಿದ ಸೂತ್ರವೇನು?
ಕನ್ನಡದ "ಕಿರಿಕ್ ಪಾರ್ಟಿ" ಮೂಲಕ ಸಿನಿ ಜಗತ್ತಿಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಷ್. ಮೊದಲ ಸಿನಿಮಾವೇ ಅವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದು ಕೊಟ್ಟಿತ್ತು. ಆದರೆ ರಶ್ಮಿಕಾ ಅದೃಷ್ಟ ಚೆನ್ನಾಗಿತ್ತು. ಯಾಕಂದ್ರೆ ಆ ನಂತರ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟವರು ಮತ್ತೆಂದೂ ತಿರುಗಿ ನೋಡಲೇ ಇಲ್ಲ.
ಸಿನಿಮಾಗಳ ನಂತರ ಸಿನಿಮಾಗಳು ಅವರನ್ನು ಹುಡುಕುತ್ತಾ ಬಂತು. ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಅಷ್ಟರಲ್ಲಾಗಲೇ ಒಂದು ರೀತಿಯ ಛಾಪು ಮೂಡಿಸಿ ಬಿಟ್ಟಿದ್ರು. ಇತ್ತ ಸಿನಿಮಾಗಳು ಭಾರಿ ಸುದ್ದಿ ಮಾಡದಿದ್ದರೂ ಕೂಡ ಅವರ ಜನಪ್ರೀಯತೆ ಮಾತ್ರ ಕಡಿಮೆ ಆಗಲೇ ಇಲ್ಲ.

ಬಾಲಿವುಡ್ ಗೆ ಬಾದ್ ಷಾ ಅವರ "ಟಾಪ್ ಟಕರ್" ಮೂಲಕ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ. ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದಲ್ಲಿದ್ದ ರಶ್ಮಿಕಾ ಹಾಗೂ ಈಗ ಇರುವ ರಶ್ಮಿಕಾಗೂ ಸಾಕಷ್ಟು ಸಾಮ್ಯತೆಗಳನ್ನು ನೀವು ಕಾಣಬಹುದು. ಆಗ ಅವರಿಗಿದ್ದ ಮೈಕಟ್ಟು ಹಾಗೂ ಈಗಿನ ಮೈಕಟ್ಟಿಗೆ ಅಜ ಗಜಾಂತರ ವ್ಯತ್ಯಾಸಗಳಿದೆ. ಅಷ್ಟಕ್ಕು ರಶ್ಮಿಕಾ ಫಿಟ್ ಆಗಿರೋದಕ್ಕೆ ಏನು ಮಾಡ್ತಾರೆ? ಅವರ ಫಿಟ್ನೆಸ್ ಸಿಕ್ರೆಟ್ ಏನು ಅನ್ನೋದನ್ನು ತಿಳಿಯೋಣ.
ದಿನನಿತ್ಯ ರಶ್ಮಿಕಾ ವರ್ಕ್ಔಟ್ ಹೇಗಿರುತ್ತೆ?
ರಶ್ಮಿಕಾ ಇಷ್ಟೊಂದು ಫಿಟ್ ಆಗಿರೋದಕ್ಕೆ ಕಾರಣ ಅವರು ಜಿಮ್ ನಲ್ಲಿ ತಮ್ಮ ದೇಹವನ್ನು ಸರಿಯಾಗಿ ದಂಡಿಸ್ತಾರೆ. ಆದ್ರೆ ರಶ್ಮಿಕಾ ವಾರದಲ್ಲಿ ನಾಲ್ಕು ಬಾರಿ ಮಾತ್ರ ವರ್ಕ್ ಔಟ್ ಮಾಡುತ್ತಾರೆ. ಅವರ ವರ್ಕ್ಔಟ್ ದಿನಚರಿಯಲ್ಲಿ ಕಿಕ್‌ಬಾಕ್ಸಿಂಗ್, ಸ್ಕಿಪ್ಪಿಂಗ್, ನೃತ್ಯ, ಈಜು, ವೇಗದ ನಡಿಗೆಯನ್ನು ಹೊಂದಿರುತ್ತದೆ.
ಜಿಮ್ನಾಸ್ಟಿಕ್ ಕಲಿತ್ತಿದ್ದ ರಶ್ಮಿಕಾ
ಸಿನಿಮಾಕ್ಕಾಗಿ ರಶ್ಮಿಕಾ ಮಂದಣ್ಣ ಪಾರ್ಕರ್ ಮತ್ತು ಜಿಮ್ನಾಸ್ಟಿಕ್ಸ್ ಕಲಿತುಕೊಂಡಿದ್ರು. ರಶ್ಮಿಕಾ ಮಂದಣ್ಣ ಯಾವಾಗಲೂ ಹೊಸ ಸವಾಲುಗಳಿಗೆ ಸಿದ್ಧರಾಗಿದ್ದಾರೆ. ಮತ್ತು ಹೊಸ ಹೊಸ ವ್ಯಾಯಾಮದ ವಿಧಾನಗಳನ್ನು ಕಲಿತುಕೊಳ್ಳುತ್ತಿರುತ್ತಾರಂತೆ. ಇನ್ನೂ ಈ ಹಿಂದೆ ಚಿತ್ರವೊಂದಕ್ಕಾಗಿ ಅವರು ಪಾರ್ಕರ್ ಮತ್ತು ಜಿಮ್ನಾಸ್ಟಿಕ್ಸ್ ಅನ್ನು ಬ್ಯಾಕ್‌ಹ್ಯಾಂಡ್ ಫ್ಲಿಪ್‌ಗಳನ್ನು ಕಲಿತ್ತಿದ್ದರಂತೆ.
ರಶ್ಮಿಕಾ ಆಹಾರ ಕ್ರಮ ಹೇಗಿರುತ್ತೆ?
ರಶ್ಮಿಕಾ ಭಾರತದ ಟಾಪ್ ನಟಿಯರಲ್ಲಿ ಒಬ್ಬರು. ನಟನೆ ಮಾತ್ರವಲ್ಲದೇ ಅವರ ಸೌಂದರ್ಯದಿಂದಲೇ ಹೆಸರು ವಾಸಿಯಾಗಿರೋ ನಟಿ ರಶ್ಮಿಕಾ ಮಂದಣ್ಣ ಅವರು ಫಿಟ್ ಮತ್ತು ಆರೋಗ್ಯವಾಗಿರಲು ಬೆಳಗ್ಗೆ ಎದ್ದ ತಕ್ಷಣ ಮೊದಲಿಗೆ ಒಂದು ಲೀಟರ್ ನೀರು ಕುಡಿಯುತ್ತಾರಂತೆ. ಇನ್ನೂ ಈ ಪಾನೀಯದಲ್ಲಿ ಅವರು ವೈದ್ಯರ ಸಲಹೆಯಂತೆ ಆಪಲ್ ಸೈಡರ್ ವಿನೇಗರ್ ಮಿಶ್ರಣ ಮಾಡಿ ಕುಡಿಯುತ್ತಾರಂತೆ.
ಸಸ್ಯಹಾರಿಯಾಗಿರುವ ರಶ್ಮಿಕಾ!
ಬಾಲಿವುಡ್ ನ ಸಾಕಷ್ಟು ಸೆಲೆಬ್ರಿಟಿಗಳು ಸಸ್ಯಹಾರಿಗಳಾಗಿದ್ದಾರೆ. ಅಷ್ಟೇ ಯಾಕೆ ಕ್ರೀಡಾಪಟುಗಳು ಕೂಡ ಸಸ್ಯಾಹಾರವನ್ನು ಸೇವಿಸ್ತಾರೆ. ಅಂದ್ರೆ ಹೆಚ್ಚಿನವರು ವೆಗನ್ ಆಹಾರವನ್ನೇ ಸೇವಿಸುತ್ತಾರೆ. ಅದ್ರಂತೆ ರಶ್ಮಿಕಾ ಕೂಡ ವೆಜ್ ಡಯೆಟ್ ಮಾಡ್ತಾರಂತೆ. ಬೆಳಗ್ಗಿನ ಊಟಕ್ಕೆ ಇಡ್ಲಿ, ದೋಸೆ, ಸಾಂಬಾರ್. ಮಧ್ಯಾಹ್ನದ ಊಟಕ್ಕೆ ದಕ್ಷಿಣ ಭಾರತ ಶೈಲಿಯ ಆಹಾರ ಮತ್ತು ರಾತ್ರಿ ಊಟಕ್ಕೆ ಸಿಹಿ ಗೆಣಸು, ದಾಲ್ಚಿನ್ನಿ, ತರಕಾರಿ ಸೂಪ್ ಮತ್ತು ಹಣ್ಣು ಸೇವಿಸುತ್ತಾರಂತೆ.
ಈ ರೀತಿ ಸಾಕಷ್ಟು ವ್ಯಾಯಾಮ ಮತ್ತು ಡಯೇಟ್ ಆಹಾರಗಳನ್ನು ಸೇವನೆ ಮಾಡೋದ್ರಿಂದ ರಶ್ಮಿಕಾ ಮಂದಣ್ಣ ತುಂಬಾನೇ ಫಿಟ್ ಆಗಿ ಇದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

