Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕಿಯಾರಾ ಅಡ್ವಾನಿಯಂತೆ ಈ ಡಯಟ್ ಎಂಥವರ ತೂಕವನ್ನೂ ಕರಗಿಸುತ್ತೆ!
ನಟಿ ಕಿಯಾರಾ ಅಡ್ವಾನಿ ಬಾಲಿವುಡ್ ನ ಖ್ಯಾತ ನಟಿಯರಲ್ಲಿ ಇವರು ಕೂಡ ಒಬ್ಬರು. ಎಂ. ಎಸ್ ಧೋನಿ ಸಿನಿಮಾ ಮೂಲಕ ಬಹಳಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡ ಈ ನಟಿ. ಆನಂತರ ಇವರಿಗೆ ಬಾಲಿವುಡ್ ನಲ್ಲಿ ಹೇಳಿಕೊಳ್ಳುವಷ್ಟರ ಮಟ್ಟಿಗೆ ಅವಕಾಶಗಳು ಹುಡುಕಿಕೊಂಡು ಬರ್ಲಿಲ್ಲ. ನಟಿಸಿದ ಸಿನಿಮಾಗಳು ಹೇಳಿಕೊಳ್ಳುವಷ್ಟರ ಮಟ್ಟಿಗೆ ಹೆಸರು ಗಳಿಸಲಿಲ್ಲ. ಆನಂತರ ಸೌತ್ ನತ್ತ ಮುಖ ಮಾಡಿದ ಕಿಯಾರಾ ಖ್ಯಾತ ನಟರಾದ ರಾಮ್ ಚರಣ್, ಮಹೇಶ್ ಬಾಬು ಜೊತೆಗೆ ನಟಿಸುತ್ತಾರೆ.
ಕಿಯಾರಾಗೆ ಖ್ಯಾತಿ ತಂದುಕೊಟ್ಟ ಕಬೀರ್ ಸಿಂಗ್!
ಇನ್ನೇನು ಬಾಲಿವುಡ್ ನಲ್ಲಿ ಕಿಯಾರ್ ಕರಿಯರ್ ಬಿದ್ದೇ ಹೋಯ್ತು ಅನ್ನೋವಾಗ ಅವರಿಗೆ ಬ್ರೇಕ್ ಕೊಟ್ಟ ಚಿತ್ರ ಕಬೀರ್ ಸಿಂಗ್. ಈ ಚಿತ್ರದಲ್ಲಿ ನಟ ಶಾಹಿದ್ ಕಪೂರ್ ಜೊತೆಗೆ ನಟಿಸಿದ ಕಿಯಾರಾ ಸಾಕಷ್ಟು ಹೆಸರು ಗಳಿಸ್ತಾರೆ. ಕಬೀರ್ ಸಿಂಗ್ ತೆಲುಗಿನ ಅರ್ಜುನ್ ರೆಡ್ಡಿ ಸಿನಿಮಾದ ಡಬ್ಬಿಂಗ್ ಆಗಿದ್ದು, ಹಿಂದಿಯಲ್ಲೂ ಕೂಡ ಕೋಟ್ಯಾಂತರ ರೂಪಾಯಿಗಳನ್ನು ಬಾಚಿಕೊಂಡಿತು. ಹೀಗಾಗಿ ಕಬೀರ್ ಸಿಂಗ್ ಕಿಯಾರಾ ಕರಿಯರ್ ಗೆ ಮತ್ತೊಂದು ಬೂಸ್ಟ್ ಕೊಟ್ಟ ಸಿನಿಮಾ ಅಂದ್ರೆ ತಪ್ಪಾಗೋದಿಲ್ಲ.

ನಟಿ ಕಿಯಾರಾ ಅಡ್ವಾನಿ ಇತ್ತೀಚಿಗಷ್ಟೇ ನಟ ಸಿದ್ಧಾರ್ಥ್ ಮಲ್ಹೋತ್ರ ಅವರನ್ನು ವಿವಾಹವಾಗಿದ್ದಾರೆ. ಇನ್ನೂ ಕೆಲವು ವರ್ಷಗಳ ಕಾಲ ಸಿನಿಮಾ ಮಾಡೋ ಪ್ಲಾನ್ ನಲ್ಲಿ ಇದ್ದಾರಂತೆ. ಸಿನಿಮಾ ಮಾತ್ರವಲ್ಲದೇ ನಟಿ ಕಿಯಾರಾ ತಮ್ಮ ಬ್ಯೂಟಿ ಹಾಗೂ ಫಿಟ್ನೆಸ್ ಗೂ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಷ್ಟಕ್ಕು ಕಿಯಾರಾ ತಮ್ಮನ್ನು ತಾವು ಫಿಟ್ ಆಗಿರಿಸಿಕೊಳ್ಳಲು ಏನು ಮಾಡ್ತಾರೆ ಅನ್ನೋದನ್ನು ತಿಳಿಯೋಣ.
ಕಿಯಾರಾ ಡಯೇಟ್ ದಿನಚರಿ ಹೇಗಿರುತ್ತೆ?
ಕಿಯಾರಾಗೆ ಚಾಕಲೇಟ್ ಅಂದ್ರೆ ತುಂಬಾನೇ ಇಷ್ಟ. ಚಾಕಲೇಟ್ ನೋಡಿದ ತಕ್ಷಣ ಅವರ ಕೈ ಅವರ ಮಾತನ್ನೇ ಕೇಳೋದಿಲ್ವಂತೆ. ಇನ್ನೂ ಕಿಯಾರಾ ಹೇಳೋ ಪ್ರಕಾರ ಅವರು ಎಷ್ಟು ತಿಂದ್ರೂ ಕೂಡ ಅಷ್ಟು ಸುಲಭವಾಗಿ ತೂಕ ಹೆಚ್ಚಿಸಿಕೊಳ್ಳೋದಿಲ್ವಂತೆ. ಇದು ಒಂದು ರೀತಿ ವರ ಇದ್ದ ಹಾಗೆ. ಹಾಗಂತ ಅವರು ಡಯೇಟ್ ಆಹಾರಗಳನ್ನು ಮಿಸ್ ಮಾಡೋದಿಲ್ವಂತೆ.
ಬೆಳಗ್ಗಿನ ಉಪಹಾರ : ಕಿಯಾರಾ ಬೆಳಗ್ಗೆ ಎದ್ದ ತಕ್ಷಣ ನೀರಿಗೆ ಕೆಲವು ಹನಿ ಲಿಂಬೆ ರಸ ಸೇರಿಸಿ ಕುಡಿಯುತ್ತಾರಂತೆ. ಇದ್ರ ಜೊತೆಗೆ ಒಟ್ಸ್ ಜೊತೆಗೆ ಹಣ್ಣುಗಳನ್ನು ಸೇವಿಸ್ತಾರಂತೆ. ಆಯಾ ಋತುಮಾನದಲ್ಲಿ ಲಭ್ಯವಿರುವ ಹಣ್ಣುಗಳನ್ನು ಸೇವನೆ ಮಾಡುತ್ತಾರೆ. ಸೇಬು, ಬಾಳೆಹಣ್ಣು ಸಾಮಾನ್ಯವಾಗಿ ಎಲ್ಲಾ ಋತುಮಾನದಲ್ಲೂ ಸೇವಿಸುತ್ತಾರಂತೆ.
ಮಧ್ಯಾಹ್ನದ ಊಟ : ನಟಿ ಕಿಯಾರಾಗೆ ಮನೆ ಊಟವೆಂದರೆ ತುಂಬಾನೇ ಇಷ್ಟವಂತೆ. ಅವರು ಮಧ್ಯಾಹ್ನದ ಊಟಕ್ಕೆ ಚಪಾತಿಯ ಜೊತೆಗೆ ದಾಲ್, ಸ್ಪಿನಚ್, ಒಕ್ರಾ, ಚೀನಿಕಾಯಿ, ಮೊಳಕೆ ಬಂದ ಕಾಳುಗಳನ್ನು ತಿನ್ನುತ್ತಾರಂತೆ. ಪ್ರತಿ ನಿತ್ಯ ತರಕಾರಿಗಳನ್ನು ಬದಲಾಯಿಸುತ್ತಾ ಬೇರೆ ಬೇರೆ ತರಕಾರಿಗಳನ್ನು ತಿನ್ನುತ್ತಾರಂತೆ.
ರಾತ್ರಿಯ ಊಟ : ಕಿಯಾರಾ ಅಡ್ವಾನಿ ರಾತ್ರಿಯ ಊಟಕ್ಕೆ ಒಮೆಗಾ- 3 ಮತ್ತು ಪ್ರೊಟೀನ್ ಇರುವ ಆಹಾರಗಳನ್ನು ಸೇವಿಸುತ್ತಾರೆ. ಸಮುದ್ರ ಆಹಾರವಾದ ಸಾಲ್ಮಾನ್ ಮೀನು ಇವರ ಊಟದಲ್ಲಿ ಇರುತ್ತಂತೆ.
ಕಿಯಾರಾ ಅಡ್ವಾನಿ ವರ್ಕ್ಔಟ್ ಗೂ ಮೊದಲು ಏನು ಸೇವಿಸುತ್ತಾರೆ ಅಂತ ನೋಡೋದಾದ್ರೆ ಸೇಬು ಹಣ್ಣು ಹಾಗೂ ಪೀನಟ್ ಬಟರ್ ಅನ್ನು ಸೇವಿಸುತ್ತಾರಂತೆ.
ಕಿಯಾರಾ ವರ್ಕ್ಔಟ್ ದಿನಚರಿ ಹೇಗಿರುತ್ತೆ?
ಕಿಯಾರಾ ಅಡ್ವಾನಿಯವರ ವ್ಯಾಯಾಮದ ದಿನಚರಿಯು ಜಿಮ್ ಸಂಬಂಧಿತ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಅವರು ನೃತ್ಯ ಮತ್ತು ಕಿಕ್‌ಬಾಕ್ಸಿಂಗ್‌ನಂತಹ ದೈಹಿಕ ಚಟುವಟಿಕೆಗಳನ್ನು ತುಂಬಾನೇ ಇಷ್ಟ ಪಡುತ್ತಾರಂತೆ. ಇನ್ನೂ ಜಿಮ್ ನಲ್ಲಿ ಪೈಲೇಟ್ಸ್, ಸ್ಕ್ವಾಟ್‌ಗಳು ಅಥವಾ ಕ್ರಿಯಾತ್ಮಕ ತರಬೇತಿ ಮತ್ತು ಕಾರ್ಡಿಯೋ ಮಾಡುತ್ತಾರಂತೆ.
ಮಹಿಳೆಯರು ಫಿಟ್ ಆಗಿ ಇರಬೇಕಂದ್ರೆ ವ್ಯಾಯಾಮದ ಜೊತೆಗೆ ಕೆಲವೊಂದು ಡಯೇಟ್ ಆಹಾರಗಳನ್ನು ಸೇವಿಸಬೇಕಾಗುತ್ತದೆ. ಕಿಯಾರಾ ಅಡ್ವಾನಿ ಡಯೇಟ್ ಮತ್ತು ವರ್ಕ್ ಔಟ್ ದಿನಚರಿಯನ್ನು ಫಾಲೋ ಮಾಡಿದ್ರೆ ನೀವು ಕೂಡ ಫಿಟ್ ಆಗಿ ಇರಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

