Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
30 ರ ನಂತರವೂ ಫಿಟ್ ಆಗಿರಲು ಪೂಜಾ ಹೆಗ್ಡೆ ಫಿಟ್ನೆಸ್ ಮಂತ್ರ ಫಾಲೋ ಮಾಡಿ!
ನಟಿ ಪೂಜಾ ಹೆಗಡೆ ತಮ್ಮ ಸೌಂದರ್ಯಕ್ಕಾಗಿ ಸದಾ ಸುದ್ದಿಯಲ್ಲಿರುವ ನಟಿ. ಕಾಲೇಜು ಸಮಯದಲ್ಲಿ ಪೂಜಾ ಮಾಡೆಲಿಂಗ್ ಆರಂಭಿಸಿದ ಇವರು 2009 ರಲ್ಲಿ ಇವರು ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದ್ರೆ ಇದ್ರಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ. ಇದರ ನಂತರ ಮುಂದಿನ ವರ್ಷ ಅವರು ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದರು. ಇದರಲ್ಲಿ ಎರಡನೇ ಸ್ಥಾನ ಪಡೆದರು. ಇದರಿಂದಾಗಿ ಅವರಿಗೆ ಸೌತ್ ಸಿನಿಮಾಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು.
ಇನ್ನೂ 2012ರಲ್ಲಿ ನಟಿ ಪೂಜಾ ಹೆಗಡೆ ತಮಿಳಿನ ಮುಗಮೂಡಿ ಚಿತ್ರದ ಮೂಲಕ ವೃತ್ತಿ ಜೀವನ ಆರಂಭಿಸುತ್ತಾರೆ. ಮುಗಮೂಡಿ ಚಿತ್ರದ ನಂತರ ತಮಿಳಿನ ಸೂಪರ್‌ಸ್ಟಾರ್ ನಾಗ ಚೈತನ್ಯ ಅವರೊಂದಿಗೆ ಓಕಾ ಲೈಲಾ ಕೋಸಂ ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಈ ಸಿನಿಮಾದ ನಂತರ ಅವರು ಕೊಂಚ ಹೆಸರು ಗಳಿಸಿಕೊಳ್ತಾರೆ. ಇದಾದ ನಂತರ ಅವರು ಬಾಲಿವುಡ್ ಗೂ ಕಾಲಿಡುತ್ತಾರೆ.

ಪೂಜಾ ಬಾಲಿವುಡ್ ಎಂಟ್ರಿ ಯಾವಾಗಾಯ್ತು?
ಪೂಜಾ ಹೆಗ್ಡೆ ಮೊಹೆಂಜೋದಾರೋ ಚಿತ್ರದ ಮೂಲಕ ಬಾಲಿವುಡ್ ಗೆ ಅಧಿಕೃತವಾಗಿ ಎಂಟ್ರಿ ಕೊಡ್ತಾರೆ. ಹಾಗೂ ಅವರ ನೆಚ್ಚಿನ ನಟ ಹೃತಿಕ್ ರೋಷನ್ ಜೊತೆಗೆ ನಟಿಸುವ ಅವಕಾಶ ಪಡೆದುಕೊಳ್ಳುತ್ತಾರೆ.ತನ್ನ ವೃತ್ತಿ ಜೀವನದ ಜೊತೆಗೆ ಪೂಜಾ ಹೆಗ್ಡೆ ತನ್ನ ಫಿಟ್ನೆಸ್ ಮತ್ತು ಸೌಂದರ್ಯದ ಬಗ್ಗೆಯೂ ಗಮನ ಹರಿಸುತ್ತಾರೆ.
ಬ್ಯೂಟಿಗೆ ಮತ್ತೊಂದು ಹೆಸರು ಅಂದ್ರೆ ಅದು ಬಾಲಿವುಡ್ ನಟಿ ಪೂಜಾ ಹೆಗ್ಡೆ. ವಯಸ್ಸು 32 ಆದ್ರೂ ಕೂಡ ಬಳುಕೋ ಬಳ್ಳಿಯಂತಿರೋ ಇವರು ಈ ವಯಸ್ಸಿನಲ್ಲೂ ಕೂಡ ಹದಿನೆಂಟರ ಯುವತಿಯ ಹಾಗೆ ಕಾಣಿಸ್ತಾರೆ. ಬಾಲಿವುಡ್ ಸೇರಿದಂತೆ ಸೌತ್ ಸಿನಿಮಾಗಳಲ್ಲಿ ಬ್ಯೂಸಿ ಆಗಿರೋ ಕರ್ನಾಟಕದ ಹುಡುಗಿ ಪೂಜಾ ಹೆಗ್ಡೆ ತಮ್ಮ ಫಿಟ್ನೆಸ್ ವಿಡಿಯೋಗಳನ್ನು ಆಗಾಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡ್ತಿರ್ತಾರೆ. ಅಷ್ಟಕ್ಕು ಪೂಜಾ ಹೆಗ್ಡೆ ಫಿಟ್ ಆಗಿರೋದಕ್ಕೆ ಏನು ಮಾಡ್ತಾರೆ. ಅವರ ಫಿಟ್ನೆಸ್ ದಿನಚರಿ ಬಗ್ಗೆ ತಿಳಿದುಕೊಳ್ಳೋಣ.
ಪೂಜಾ ಫಿಟ್ನೆಸ್ ದಿನಚರಿ ಹೇಗಿರುತ್ತೆ?
ಪೂಜಾ ಹೆಗ್ಡೆ ಬಾಲಿವುಡ್ ನ ಹಾಟ್ ನಟಿಯರಲ್ಲಿ ಒಬ್ಬರು. ಈ ವಯಸ್ಸಿನಲ್ಲೂ ಅವರು ತಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳೋದು ಅಂದ್ರೆ ಖಂಡಿತ ಸುಲಭವಲ್ಲ. ಇದಕ್ಕಾಗಿ ಇವರು ಅನೇಕ ಕಸರತ್ತುಗಳನ್ನು ಮಾಡ್ತಾರೆ. ಕೇವಲ ಜಿಮ್ ನಲ್ಲಿ ಬೆವರಿಳಿಸೋದು ಮಾತ್ರವಲ್ಲದೇ ಇದರ ಜೊತೆಗೆ ಕೆಲವೊಂದು ಕಸರತ್ತುಗಳನ್ನು ಮಾಡ್ತಾರೆ. ಯೋಗ, ಬಾಕ್ಸಿಂಗ್, ಪೈಲೆಟ್ಸ್ ಹೀಗೆ ನಾನಾ ರೀತಿಯ ವರ್ಕ್ಔಟ್ ಅನ್ನು ಪೂಜಾ ಮಾಡ್ತಾರೆ.
ಪೂಜಾ ಹೆಗ್ಡೆ ತಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳೋದಕ್ಕಾಗಿ ಒಂದು ದಿನ ಕೂಡ ಮಿಸ್ ಮಾಡದೇ ವರ್ಕ್ಔಟ್ ಮಾಡೋದಕ್ಕೆ ಹೊಗ್ತಾರಂತೆ. ವ್ಯಾಯಾಮ ಮಾಡದೇ ಬದುಕೋದಕ್ಕೆ ಸಾಧ್ಯವಿಲ್ಲ ಅನ್ನುವಷ್ಟರ ಮಟ್ಟಿಗೆ ಇವರು ಒಗ್ಗಿಕೊಂಡು ಬಿಟ್ಟಿದ್ದಾರಂತೆ. ಇವರ ದಿನ ನಿತ್ಯದ ವ್ಯಾಯಾಮದಲ್ಲಿ ಯೋಗ, ಪೈಲೇಟ್ಸ್ ಮತ್ತು ಕ್ರಾಸ್‌ಫಿಟ್ ತರಬೇತಿಯನ್ನು ಒಳಗೊಂಡಿದೆ. ಇದರ ಜೊತೆಗೆ ಪುಷ್ಅಪ್, ಬೆಂಚ್ ಪ್ರೆಸ್, ಪುಶ್ ಪ್ರೆಸ್, ಚಿನ್ ಅಪ್, ಡೆಡ್‌ಲಿಫ್ಟ್, ಟ್ರೈಸ್ಪ್ ಪುಶ್‌ಡೌನ್, ಸಿಂಗಲ್ ಆರ್ಮ್, ಶ್ರಗ್ ಮತ್ತು ಸ್ಕ್ವಾಟ್ ಅನ್ನು ತಪ್ಪದೇ ಮಾಡ್ತಾರಂತೆ.
ಯಾವಾಗ ನಮ್ಮ ಪರಿಶ್ರಮ ಉತ್ತಮವಾಗಿರುತ್ತದೋ ಆಗ ಮಾತ್ರ ಉತ್ತಮ ಫಲಿತಾಂಶವನ್ನು ಪಡೆಯೋದಕ್ಕೆ ಸಾಧ್ಯ ಎನ್ನುವುದಕ್ಕೆ ನಟಿ ಪೂಜಾ ಹೆಗ್ಡೆ ಅವರೇ ಒಂದು ರೀತಿಯಲ್ಲಿ ಬೆಸ್ಟ್ ಎಕ್ಸಾಂಪಲ್. ಈ ರೀತಿ ವರ್ಕ್ಔಟ್ ಮಾಡಿದ್ರೆ ಖಂಡಿತ ನೀವು ಕೂಡ ಫಿಟ್ ಆಗಿ ಇರಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
