Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಸಿಗರೇಟ್‌ನಂತೆ ಜಿಲೇಬಿ, ಸಮೋಸಾ ಕೂಡ ಡೇಂಜರ್..! ಎಣ್ಣೆ, ಸಕ್ಕರೆ ಬಿಟ್ಟು ಬಿಡಿ!
ನಮ್ಮ ಆರೋಗ್ಯದ ಮೇಲೆ ನಾವು ಸೇವಿಸುವ ಆಹಾರಗಳು ಎಷ್ಟು ಪರಿಣಾಮ ಉಂಟು ಮಾಡುತ್ತವೆ ಅನ್ನೋದನ್ನು ನೀವು ತಿಳಿದಿರಬಹುದು. ನಮ್ಮ ಬಹುತೇಕ ಅನಾರೋಗ್ಯ ಸಮಸ್ಯೆಗಳು ನಮ್ಮ ಜೀವನ ಶೈಲಿ ಹಾಗೂ ಆರೋಗ್ಯದ ಮೇಲೆ ನಿರ್ಧರಿತವಾಗುತ್ತಿವೆ. ಅದ್ರಲ್ಲೂ ಇತ್ತೀಚಿನ ದಿನಗಳಲ್ಲಿ ನಾವು ಯಾವುದೇ ಆಹಾರ ಸವಿದರು ಅದರಿಂದ ಒಂದಿಷ್ಟು ಸಮಸ್ಯೆ ಎದುರಿಸುವುದು ಸಾಮಾನ್ನು ಎನ್ನುವಂತಹ ಸ್ಥಿತಿಗೆ ತಲುಪಿದ್ದೇವೆ.
ನಾವು ಸವಿಯುತ್ತಿರುವ ಯಾವ ಆಹಾರ ಇಂದು ನಮಗೆ ಹಾನಿ ಮಾಡುತ್ತಿದೆ ಎಂಬುದನ್ನು ನಾವು ಕೂಡ ತಿಳಿದಿರಬೇಕಾಗುತ್ತದೆ. ಸದ್ಯ ಈಗ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ಕೇಂದ್ರ ಸಂಸ್ಥೆಗಳಲ್ಲಿ ಎಣ್ಣೆ ಮತ್ತು ಸಕ್ಕರೆ ಮಂಡಳಿಗಳನ್ನು ಸ್ಥಾಪಿಸಲು ಆದೇಶಿಸಿದೆ. ಇದು ಯಾವ ಆಹಾರ ಯಾಔ ರೀತಿ ಹಾನಿಗೆ ಕಾರಣವಾಗಲಿದೆ ಎಂಬ ಪರಿಷ್ಕರಣೆಯಲ್ಲಿ ತೊಡಗಲಿದೆ.

ಇದರ ಹೊಸ ಪಟ್ಟಿಯಲ್ಲೀಗ ಜೆಲೇಬಿ ಹಾಗೂ ಸಮೋಸಾದಂತಹ ಆಹಾರ ವ್ಯಕ್ತಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿವೆ ಎಂದಿದೆ. ಅದ್ರಲ್ಲೂ ಈ ಎರಡು ಆಹಾರವನ್ನು ಸಿಗರೇಟ್ ಸಾಲಿಗೆ ಸೇರಿಸಲಾಗಿದೆ. ಈ ಜಂಕ್ ಫುಡ್‌ಗಳು ಸಿಗರೇಟ್‌ನಷ್ಟೇ ಅಪಾಯಕಾರಿ ಎಂದು ವರ್ಗೀಕರಿಸಲಾಗಿದೆ.
ನಾಗ್ಪುರದ ಎಐಐಎಂಎಸ್ ಸೇರಿದಂತೆ ಎಲ್ಲ ಕೇಂದ್ರೀಯ ಸಂಸ್ಥೆಗಳು, ಜನಸಾಮಾನ್ಯರ ದೈನಂದಿನ ತಿಂಡಿ ತಿನಸುಗಳಲ್ಲಿ ಎಷ್ಟು ಸಕ್ಕರೆ ಪ್ರಮಾಣ, ಎಣ್ಣೆ, ಬಳಸಲಾಗುತ್ತದೆ ಎಂಬ ಮಾಹಿತಿ ಹೊಂದಿರುವ ಫಲಕಗಳನ್ನು ಅಳವಡಿಸುವಂತೆ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಜಂಕ್ ಫುಡ್‌ಗಳನ್ನು ಸಿಗರೇಟ್ ಸಾಲಿಗೆ ಸೇರಿಸುವ ಮೊದಲ ಹೆಜ್ಜೆ ಇದಾಗಿದೆ.
ಜನರು ತಾವು ಏನನ್ನೂ ಸವಿಯುತ್ತಿದ್ದೇವೆ, ಯಾವ ಪ್ರಮಾಣದಲ್ಲಿ ಈ ಆಹಾರ ಹಾನಿ ಉಂಟು ಮಾಡಬಹುದು ಎಂಬ ಮಾಹಿತಿ ತಿಳಿದುಕೊಳ್ಳುವ ಸಂಪೂರ್ಣ ಹಕ್ಕು ಹೊಂದಿದ್ದಾರೆ. ಸಿಗರೇಟ್ ಎಚ್ಚರಿಕೆಯಂತೆ ಆಹಾರದ ಲೇಬಲಿಂಗ್ ನಲ್ಲಿ ಕೂಡಾ ಎಚ್ಚರಿಕೆ ಸಂದೇಶ ನೀಡುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆ ಎಂದು ಭಾರತೀಯ ಹೃದ್ರೋಗ ತಜ್ಞರ ಸಂಘದ ನಾಗ್ಪುರ ಶಾಖೆಯ ಅಧ್ಯಕ್ಷ ಅಮರ್ ಅಮಾಲ್ ಹೇಳಿದ್ದಾರೆ.
ಭಾರತದಲ್ಲಿ ಇತ್ತೀಚಿಗೆ ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆಗಳು ಸೇರಿ ಹಲವು ಅನಾರೋಗ್ಯಗಳು ಹೆಚ್ಚುತ್ತಿವೆ. ಸರ್ಕಾರ ಕೂಡ ಈ ಸಂಬಂಧವಾಗಿ ಆಹಾರ ಗುಣಮಟ್ಟ ಸುಧಾರಣೆಗೆ ಗಮನಹರಿಸಿದೆ. 2050ರ ವೇಳೆಗೆ ಭಾರತದಲ್ಲಿ ಸುಮಾರು 44 ಕೋಟಿಗೂ ಹೆಚ್ಚು ಮಂದಿ ಅಧಿಕ ತೂಕ ಅಥವಾ ಬೊಜ್ಜು ಹೊಂದಬಹುದು ಎಂದು ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ಜಾಗತಿಕ ವಿಶ್ಲೇಷಣೆ ಅಂದಾಜಿಸಿದೆ.
ಹೀಗಾಗಿ ಇನ್ಮುಂದೆ ನಾಗ್ಪುರದ ಹೆಸರಾಂತ ಆಹಾರ ಮಳಿಗೆಗಳ ಪಕ್ಕದಲ್ಲಿ ಯಾವ ಆಹಾರದಲ್ಲಿ ಎಷ್ಟು ಪ್ರಮಾಣದ ಕೊಬ್ಬು, ಸಕ್ಕರೆ ಅಂಶ, ಜಿಡ್ಡು, ಎಣ್ಣೆ, ಕೊಬ್ಬಿನ ಅಂಶ ಇರಲಿದೆ ಎಂಬ ಕುರಿತ ಮಾಹಿತಿ ಇರುವ ಫಲಗಳ ಹಾಕಲಾಗುತ್ತದೆ. ಜಂಕ್ ಫುಡ್ ಸೇವನೆಯಿಂದ ಯಾವೆಲ್ಲಾ ರೀತಿ ಅನಾರೋಗ್ಯಗಳು ಕಾಡಬಹುದು ಎಂಬ ಕುರಿತಾದ ಮಾಹಿತಿ, ಗ್ರಾಹಕರು ಏನನ್ನು ಸೇವಿಸುತ್ತಿದ್ದಾರೆ ಎಂಬುದನ್ನು ಅವರು ಸಹ ತಿಳಿದಿರಬೇಕು ಎಂಬ ಸೂಚನೆ. ಇದು ಆಹಾರ ಸೇವಿಸುವ ಪ್ರತಿಯೊಬ್ಬರು ಕೂಡ ಒಮ್ಮೆ ಗಮನಹರಿಸಿ ಸ್ಪಷ್ಟವಾಗಿ ಓದುವಂತಿರಬೇಕು. ಬಳಿಕ ಅವರೇ ಉತ್ತಮ ಸಮತೋಲನ ಭರಿತ ಆಹಾರ ಸೇವನೆಗೆ ಮುಂದಾಗಬೇಕು ಎಂಬ ಉದ್ದೇಶ ಹೊಂದಲಾಗಿದೆ.
ಸಿಗರೇಟ್ ಮೇಲೆಯೂ ಅದರ ಅಪಾಯಕಾರಿ ಅಂಶಗಳ ಮುದ್ರಿಸಲಾಗುತ್ತದೆ. ಅದರಿಂದ ಕ್ಯಾನ್ಸರ್ ಬರಲಿದೆ ಎಂದು ಹೇಳಲಾದರು ಅದನ್ನು ನಿಷೇಧ ಮಾಡಿಲ್ಲ. ಇಲ್ಲಿಗೂ ಕೂಡ ಈ ಆಹಾರಗಳಿಂದ ಆರೋಗ್ಯಕ್ಕೆ ಹಾನಿ ಎನ್ನಲಾದರೂ ಈ ಸಾಂಪ್ರದಾಯಿಕ ಆಹಾರವನ್ನು ನಿಷೇಧ ಮಾಡುವ ಯಾವುದೇ ನಿರ್ಧಾರಗಳಿಲ್ಲ ಎಂದು ತಿಳಿದುಬಂದಿದೆ.



Click it and Unblock the Notifications