Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಮಳೆಗಾಲದಲ್ಲಿ ಕಾಡುವ ನೆಗಡಿ, ಕೆಮ್ಮಿಗೆ ರಾಮಬಾಣ ಈ ಅಮೃತಬಳ್ಳಿ ಕಷಾಯ
ಮಳೆಗಾಲದಲ್ಲಿ ತುಂಬಾ ಜನರನ್ನು ಕಾಡುತ್ತಿರುವ ಸಾಮಾನ್ಯ ಸಮಸ್ಯೆಯೆಂದರೆ ಶೀತ, ಕೆಮ್ಮು. ಅದರಲ್ಲೂ ಶಾಲೆಗೆ ಹೋಗುವ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಮಕ್ಕಳು ಕೆಲವೊಮ್ಮೆ ಮಳೆಯಲ್ಲಿ ನೆನೆಯುತ್ತಾರೆ, ತಂಪಾದ ವಾತಾವರಣ ಈ ಎಲ್ಲಾ ಕಾರಣಗಳಿಂದ ಮಕ್ಕಳಲ್ಲಿ ಶೀತ, ಕೆಮ್ಮಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.
ಹಾಗಂತ ಅವರಿಗೆ ಆ್ಯಂಟಿಬಯೋಟಿಕ್ ತುಂಬಾ ಕೊಡಬಾರದು, ಅದರ ಬದಲಿಗೆ ಕಷಾಯ, ಮನೆಮದ್ದು ಬಳಸಿ ಕೆಮ್ಮು ಕಡಿಮೆ ಮಾಡಿದರೆ ಒಳ್ಳೆಯದು. ಅದಲ್ಲೂ ಅಮೃತಬಳ್ಳಿ ಆಯುರ್ವೇದಲ್ಲಿ ಹೆಚ್ಚಾಗಿ ಬಳಸಲಾಗುವುದು.

ಅಮೃತಬಳ್ಳಿ ದೇಹದಲ್ಲಿರುವ ಕಶ್ಮಲವನ್ನು ಹೊರಹಾಕಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಸಂಧಿವಾತದ ಸಮಸ್ಯೆ ಹೋಗಲಾಡಿಸಲು, ಒಟ್ಟು ಮೊತ್ತದ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದೆ.
ಮಳೆಗಾಲದಲ್ಲಿ ನೀವು ಅಮೃತಬಳ್ಳಿ ಕಷಾಯ ಮಾಡಿ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರಿಂದ ಕೆಮ್ಮು, ಶೀತ ಈ ಬಗೆಯ ಸಮಸ್ಯೆ ಹೋಗಲಾಡಿಸಲು ತುಂಬಾನೇ ಸಹಕಾರಿಯಾಗಿದೆ. ನಾವಿಲ್ಲಿ ಕೆಲ ಅಮೃತ ಬಳ್ಳಿ ಕಷಾಯ ರೆಸಿಪಿ ನೀಡಿದ್ದೇವೆ, ಈ ಕಷಾಯ ನಿಮ್ಮ ಆರೋಗ್ಯ ವೃದ್ಧಿಸಲು ಸಹಕಾರಿ ನೋಡಿ:
ಬೇಕಾಗುವ ಸಾಮಗ್ರಿ
- 3-4 ತುಂಡು ಒಣ ಅಮೃತಬಳ್ಳಿ
- 2 ದೊಡ್ಡಪತ್ರೆ ಬಳ್ಳಿ
- 5-6 ತುಳಸಿ ಎಲೆ
- 1 ಚಮಚ ಜೀರಿಗೆ
- 5-6 ಕಾಳು ಮೆಣಸು
- 1 -2 ಬೆಳ್ಳುಳ್ಳಿ ಎಸಳು
- ಸ್ವಲ್ಪ ಚಿಕ್ಕ ತುಂಡು ಅರಿಶಿಣ
- ಜೇನು
ಮಾಡುವ ವಿಧಾನ
- 2 ಕಪ್ ನೀರಿಗೆ ಈ ಎಲ್ಲಾ ಹಾಕಿ ಕುದಿಸಿ, 2 ಕಪ್ ನೀರು ಒಂದು ಕಪ್‌ಗೆ ಬರುವಷ್ಟು ಕುದಿಸಿ.
- ನಂತರ ಕಷಾಯವನ್ನು ಸೋಸಿ ಅದಕ್ಕೆ ಸ್ವಲ್ಪ ಜೇನು ಹಾಕಿ ಕುಡಿಯಿರಿ.
- ಕಷಾಯ ಕುಡಿಯವ ಹದಕ್ಕೆ ಬಿಸಿ ಇರುವಾಗಲೇ ಕುಡಿಯಿರಿ.
ಅಮೃತ ಬಳ್ಳಿ ಕಷಾಯ 2
ಒಂದು ಚಿಕ್ಕ ತುಂಡು ಅಮೃತಬಳ್ಳಿ
ಸ್ವಲ್ಪ ತುಳಸಿ
ಒಂದು ಚಿಕ್ಕ ತುಂಡು ಚಕ್ಕೆ
2 ಲವಂಗ
ಸ್ವಲ್ಪ ಕಾಳುಮೆಣಸು
ಬೆಳ್ಳುಳ್ಳಿ
ಶುಂಠಿ
ಬೆಲ್ಲ
ಸ್ವಲ್ಪ ಅರಿಶಿಣ
ಮಾಡುವ ವಿಧಾನ
ಇವೆಲ್ಲವನ್ನು ಅರ್ಧ ಲೀಟರ್ ನೀರಿಗೆ ಹಾಕಿ ಕುದಿಸಿ, ನಂತರ ಸೋಸಿ ಬೆಳಗ್ಗೆ ಒಂದು ಲೋಟ, ಮಲಗುವ ಮುನ್ನ ಒಂದು ಲೋಟ ಕುಡಿಯಿರಿ. ಹೀಗೆ ಕುಡಿಯುವುದರಿಂದ
ಕೆಮ್ಮು, ಶೀತ ಬೇಗನೆ ಕಡಿಮೆಯಾಗುವುದು.
ಅಮೃತಬಳ್ಳಿ ಅತಿಯಾಗಿ ಸೇವಿಸಬೇಡಿ
ಅಮೃತಬಳ್ಳಿ ತುಂಬಾನೇ ಆರೋಗ್ಯಕರ, ಆದರೆ ಅತಿಯಾಗಿ ಸೇವಿಸಬೇಡಿ. ಅಮೃತ ಬಳ್ಳಿ ಅಂತಲ್ಲ ಯಾವುದೇ ಔಷಧವನ್ನು ಅತಿಯಾಗಿ ಸೇವಿಸಿದರೆ ಅಡ್ಡಪರಿಣಾಮ ಉಂಟಾಗಿಯೇ ಉಂಟಾಗುವುದು.
ಮಧುಮೇಹವಿದೆಯೇ?
ಅಮೃತಬಳ್ಳಿ ಸೇವನೆಯಿಂದ ದೊಡ್ಡ ಅಡ್ಡಪರಿಣಾಮವೇನೂ ಇಲ್ಲ. ಅಮೃತ ಬಳ್ಳಿಯನ್ನು ಸೇವಿಸಿದಾಗ ಸಕ್ಕರೆಯಂಶ ಕಡಿಮೆಯಾಗುವುದು. ನೀವು ಮಧುಮೇಹಕ್ಕೆ ಔಷಧ ತೆಗೆದುಕೊಂಡಿದ್ದರೆ ಅಮೃತಬಳ್ಳಿ ಕಷಾಯ ಕುಡಿದಾಗ ರಕ್ತದಲ್ಲಿ ಸಕ್ಕರೆಯಂಶ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications