Latest Updates
-
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ!
300 ದಿನ ಕಮಲದ ಬೀಜ ಸೇವಿಸುತ್ತಾರೆ ಪ್ರಧಾನಿ ಮೋದಿ..! ಏಕೆ? ಇದರ ಉಪಯೋಗವೇನು?
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚುತ್ತಿರುವ ಕುರಿತಂತೆ ಕಳವಳ ವ್ಯಕ್ತಪಡಿಸಿದ್ದರು. ಹಾಗೆ ಬೊಜ್ಜು ಕಡಿಮೆ ಮಾಡಲು ಕರೆ ನೀಡಿದ್ದರು. ಇದಕ್ಕಾಗಿ ಕಡಿಮೆ ಅಡುಗೆ ಎಣ್ಣೆ ಬಳಸುವಂತೆ ಪ್ರೋಟಿನ್ ಆಹಾರ ಸೇವಿಸುವಂತೆ ಅವರು ಕಿವಿ ಮಾತು ಹೇಳಿದ್ದರು. ಬೊಜ್ಜು ಎಲ್ಲಾ ಸಮಸ್ಯೆಯ ಮೂಲ ಕಾರಕ ಎಂಬುದಾಗಿ ಅವರು ವಿವರಿಸಿದ್ದರು.
'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಆಹಾರದಲ್ಲಿ ಕಡಿಮೆ ಎಣ್ಣೆ ಬಳಸುವುದು ಮತ್ತು ಸ್ಥೂಲಕಾಯತೆ ನಿಭಾಯಿಸುವುದು ಕುಟುಂಬದ ಜವಾಬ್ದಾರಿಯಾಗಿದೆ ಎಂದಿದ್ದರು. ಹಾಗೆ ಅವರು ದೇಹಕ್ಕೆ ಉತ್ತಮ ಆಹಾರ ಸೇವನೆ ನಮ್ಮ ನಿತ್ಯದ ಚಟುವಟಿಕೆಯನ್ನು ನಿಭಾಯಿಸಲಿದೆ. ನಮ್ಮ ಆರೋಗ್ಯ ಉತ್ತಮವಾಗಿಡಲಿದೆ ಎಂದಿದ್ದರು. ಅಲ್ಲದೆ ನಾನು 365 ದಿನದಲ್ಲಿ ಕನಿಷ್ಠ 300 ದಿನವಾದರು ಕಮಲದ ಬೀಜ ಅಥವಾ ತಾವರೆಯ ಬೀಜ ಸೇವಿಸುತ್ತೇನೆ ಎಂದಿದ್ದರು.

ಫಾಕ್ಸ್‌ನಟ್ ಎಂದು ಕರೆಯಲ್ಪಡುವ ಈ ಬೀಜಗಳ ಸೇವನೆ ನಮ್ಮ ದೇಹಕ್ಕೆ ಯಾವ ರೀತಿಯ ಉಪಯೋಗಕ್ಕೆ ಕಾರಣವಾಗಿವೆ. ಇದರಲ್ಲಿ ಯಾವ ಅಂಶವಿದೆ ಅನ್ನೋದನ್ನು ನಾವಿಂದು ತಿಳಿಯೋಣ. ಈ ಕಮಲದ ಬೀಜವನ್ನು ಬಿಹಾರದಲ್ಲಿ ಅತೀ ಹೆಚ್ಚಾಗಿ ಬೆಳೆಯುತ್ತಾರೆ. ಅಲ್ಲಿ ಇದೊಂದು ಸಾಂಪ್ರದಾಯಿಕ ಬೆಳೆಯಾಗಿದೆ.
ಇದು ನಾವು ಈಗ ಜಾಗತಿಕ ಮಾರುಕಟ್ಟೆಗಳಿಗೆ ತೆಗೆದುಕೊಳ್ಳಬೇಕಾದ ಸೂಪರ್‌ಫುಡ್ ಆಗಿದೆ. ಅದಕ್ಕಾಗಿಯೇ ಈ ವರ್ಷದ ಬಜೆಟ್‌ನಲ್ಲಿ ಈ ಕಮಲದ ಬೀಜ ಬೆಳೆಯುವ ರೈತರ ಪ್ರಯೋಜನಕ್ಕಾಗಿ ಮಖಾನಾ ಮಂಡಳಿಯನ್ನು ರಚಿಸುವುದಾಗಿ ಸರ್ಕಾರ ಘೋಷಿಸಿದೆ ಎಂದು ಭಾಗಲ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿ ಹೇಳಿದ್ದರು.
ಈ ಬೀಜದ ಕರಿ, ಸಿಹಿತಿಂಡಿ ಸೇರಿ ಹಲವು ಖಾದ್ಯಗಳ ತಯಾರಿಕೆಗೆ ಬಳಸಲಾಗುತ್ತಿದೆ. ಉತ್ತರ ಭಾರತದಲ್ಲಿ ಇದೊಂದು ಸಾಂಪ್ರದಾಯಿಕ ಬೆಳೆಯಾಗಿ ನೋಡಲಾಗಿದೆ. ಹೋಗಾಗಿ ಅಲ್ಲಿ ಮಾರುಕಟ್ಟೆಯೂ ವಿಸ್ತರಣೆಯಾಗುತ್ತಿದೆ. ಹಾಗಾದ್ರೆ ಈ ಬೀಜದಿಂದಾಗುವ ಉಪಯೋಗವೇನು ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಈ ಕಮಲದ ಬೀಜವು ಅತ್ಯಧಿಕ ಪ್ರೋಟಿನ್ ಹೊಂದಿರುವ ಅಂಶವಾಗಿದೆ. ಇದರಲ್ಲಿ ಫೈಬರ್, ಕಾರ್ಬೋಹೈಡ್ರೇಟ್‌ಗಳು ಹೇರಳವಾಗಿದೆ. ಜೊತೆಗೆ ಕ್ಯಾಲ್ಸಿಯಂ, ಮೆಗ್ನಿಷಿಯಂ, ಕಬ್ಬಿಣಾಂಶ, ರಂಜಕದಂತಹ ಅಗತ್ಯ ಪೋಷಕಾಂಶದಿಂದ ಇದು ಕೂಡಿದೆ.
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲಿದೆ
ಕಮಲದ ಬೀಜವು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ, ಹೀಗಾಗಿ ಇದು ಮಧುಮೇಹಿಗಳಿಗೂ ಸೂಕ್ತ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಹಾಗೆ ಇದರಲ್ಲಿ ಹೆಚ್ಚಿನ ಫೈಬರ್ ಅಂಶ ಇರುವುದರಿಂದ ತೂಕ ಇಳಿಸಲು ಇಚ್ಛಿಸುವವರು ಹಾಗೆ ತೂಕ ನಿಯಂತ್ರಣದಲ್ಲಿಡುವವರು ಕಮಲದ ಬೀಜವನ್ನು ಆಹಾರವಾಗಿ ಸೇವಿಸುವುದು ಬಹಳ ಉತ್ತಮ.
ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಹಾಗೆ ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ, ಆಕ್ಸಿಡೇಟಿವ್ ಒತ್ತಡವನ್ನು ತಡೆಯಲು ಮತ್ತು ಹಾನಿಕಾರಕ ಸ್ವತಂತ್ರ ರಾಡಿಕಲ್‌ಳಿಂದ ದೇಹಕ್ಕಾಗುವ ಹಾನಿಯನ್ನು ತಡೆಯಲಿದೆ.
ಹೀಗಾಗಿ ಪ್ರಧಾನಿ ಮೋದಿ ಅವರು ಈ ಆಹಾರದಲ್ಲಿ ಈ ಬೀಜದ ಸೇವನೆಯನ್ನು ಹೆಚ್ಚಿಸುವಂತೆ ಕರೆ ನೀಡಿದರು. ಆದ್ರೆ ಮಾರುಕಟ್ಟೆಯಲ್ಲಿ 1 ಕೆ.ಜಿ ಕಮಲದ ಬೀಜವು 350 ರೂಪಾಯಿಯಿಂದ ಆರಂಭಗೊಂಡು 1 ಸಾವಿರ ರೂಪಾಯಿಗೂ ಹೆಚ್ಚು ದರದಲ್ಲಿ ಮಾರಾಟವಾಗುತ್ತದೆ. ಹೀಗಾಗಿ ಸಾಮಾನ್ಯರು ಈ ಕಮಲದ ಬೀಜದ ಕಡೆ ಗಮನವಿಡುವುದು ಕಷ್ಟವೇ ಆಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications