Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಅಪ್ಪಿತಪ್ಪಿಯು ಈ ಆಹಾರಗಳನ್ನು ಒಟ್ಟಿಗೆ ಸೇವಿಸಬೇಡಿ..! ಆಯುರ್ವೇದದಲ್ಲಿ ಹೇಳಿರೋದೇನು?
ನಾವು ಕೆಲವೊಂದು ಆಹಾರ ಸವಿದ ಬಳಿಕ ಅನಾರೋಗ್ಯಕ್ಕೆ ಒಳಗಾಗುವುದು, ವಾಂತಿಯಾಗುವಂತಹ ಸಂವೇದನೆಯಾಗುವುದು, ತಲೆ ನೋವು ಹೊಟ್ಟೆ ನೋವು ಅನುಭವಿಸಿರಬಹುದು. ಯಾಕಂದ್ರೆ ಕೆಲವು ಆಹಾರ ನಿಮ್ಮ ದೇಹಕ್ಕೆ ಹೊಂದಿಕೊಳ್ಳದೆ ಇರಬಹುದು.
ಇದಲ್ಲದೆ ನೀವು ಕೆಲವೊಂದು ಆಹಾರವನ್ನು ಮತ್ತೊಂದು ಆಹಾರದ ಜೊತೆ ಸೇರಿಸಿ ಸವಿಯುವುದು ಸಹ ಇದಕ್ಕೆ ಕಾರಣವಾಗಬಹುದು. ಉದಾಹರಣೆಗೆ ಕೆಲವರು ಟಿ ಜೊತೆ ಬಾಳೆಹಣ್ಣು ಸೇವಿಸುವುದು, ಇಲ್ಲವೆ ಹಾಲು ಕುಡಿಯುವಾಗ ಸೇಬುಹಣ್ಣು, ಕಿತ್ತಳೆ ಸೇವಿಸುವುದನ್ನು ನಾವು ನೋಡಿದ್ದೇವೆ. ಆದರೆ ಈ ರೀತಿ ಒಂದು ಆಹಾರದ ಜೊತೆ ಮತ್ತೊಂದು ಸವಿದರೆ ಅನಾರೋಗ್ಯ ಉಂಟಾಗಬಹುದು.

ಕೆಲವರಲ್ಲಿ ಫುಡ್ ಪಾಯಿಸನ್ ಆಗಲು ಸಹ ಈ ರೀತಿ ಆಹಾರ ಸೇವನೆ ಕಾರಣವಾಗುತ್ತದೆ. ಇನ್ನು ಹಲವರಿಗೆ ಅಲರ್ಜಿಯಂತಹ ಸಮಸ್ಯೆ ಸಹ ಕಂಡುಬರುತ್ತದೆ. ಇನ್ನು ಐಸ್ ಕ್ರೀಮ್ ಜೊತೆ ಗುಲಾಬ್ ಜಾಮೂನ್, ಖರ್ಜೂರದ ಜೊತೆಗೆ ಹಾಲು ಹೀಗೆ ವಿವಿಧ ರೀತಿಯ ಆಹಾರ ಸವಿಯಲು ಮುಂದಾಗುವವರನ್ನು ನಾವು ನೋಡಿದ್ದೇವೆ.
ಆದರೆ ಕೆಲವು ಆಹಾರಗಳನ್ನು ಒಟ್ಟಿಗೆ ಸವಿಯುವುದು ಆರ್ಯುವೇದದ ಪ್ರಕಾರ ತಪ್ಪು. ಈ ಕೆಲವು ಆಹಾರವನ್ನು ನೀವು ಸಹ ತಪ್ಪಾಗಿ ಸವಿಯಬೇಡಿ. ಹಾಗಾದ್ರೆ ಯಾವ ಆಹಾರ ಯಾವ ಕಾಂಬಿನೇಷನ್‌ನಲ್ಲಿ ತಿನ್ನಬಾರದು ಎಂಬುದನ್ನು ನೋಡಿ.
ಹಣ್ಣು ಮತ್ತು ಹಾಲು: ಆಯುರ್ವೇದದಲ್ಲಿ ಹಾಲಿನ ಜೊತೆಗೆ ಕೆಲವು ಪದಾರ್ಥಗಳನ್ನು ಸೇವಿಸಬಾರದು ಎಂದು ಹೇಳಲಾಗಿದೆ. ಹಾಗೆ ಹಾಲಿನ ಜೊತೆಗೆ ಹಣ್ಣನ್ನು ಸೇವಿಸಬಾರದು ಎಂದು ಹೇಳಲಾಗಿದೆ. ಹಾಲಿನ ಜೊತೆ ಹಣ್ಣು ಸೇವಿಸಿದರೆ ಕೆಲವಿಗೆ ಹೊಟ್ಟೆಯಲ್ಲಿ ನೋವು, ಉಬ್ಬಿಕೊಳ್ಳುವುದು, ಅಸ್ವಸ್ಥತೆಗೆ ಕಾರಣವಾಗಬಹುದಂತೆ. ಹೀಗಾಗಿ ಆಯುರ್ವೇದದಲ್ಲಿ ಹಾಲಿನ ಜೊತೆ ಹಣ್ಣು ಸೇವಿಸಬಾರದು ಎಂದು ಹೇಳಲಾಗಿದೆ.
ಪಾಲಾಕ್ ಮತ್ತು ಪನೀರ್: ಪಾಲಾಕ್ ಸೊಪ್ಪು ಮತ್ತು ಪನೀರ್ ಎರಡೂ ಸಹ ಪೌಷ್ಟಿಕ ಆಹಾರಗಳೇ. ಆದರೆ ಎರಡನ್ನೂ ಒಟ್ಟಿಗೆ ಸವಿಯಬಾರದಂತೆ. ಪನೀರ್‌ನಲ್ಲಿರುವ ಕ್ಯಾಲ್ಸಿಯಂ ಪಾಲಕ್‌ನಲ್ಲಿರುವ ಕಬ್ಬಿಣದ ಅಂಶವನ್ನು ಹೀರಿಕೊಳ್ಳುವಿಕೆಯನ್ನು ಅಡ್ಡಿಪಡಿಸುತ್ತದೆ ಮತ್ತು ಈ ಖಾದ್ಯದಲ್ಲಿರುವ ಪೋಷಕಾಂಶ ನಷ್ಟಕ್ಕೆ ಕಾರಣವಾಗುತ್ತದೆ.
ಜೇನುತುಪ್ಪ ಮತ್ತು ಬಿಸಿನೀರು: ಜೇನುತುಪ್ಪವನ್ನು ಬಿಸಿ ಮಾಡುವುದರಿಂದ ಅದರ ಪ್ರಯೋಜನಕಾರಿ ಕಿಣ್ವಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ನಾಶಪಡಿಸಬಹುದು. ಆಯುರ್ವೇದದ ಪ್ರಕಾರ ಬಿಸಿನೀರಿನೊಂದಿಗೆ ಜೇನುತುಪ್ಪವನ್ನು ಬೆರೆಸುವುದು ಹಾನಿಕಾರಕ ಸಂಯುಕ್ತಗಳನ್ನು ಉಂಟುಮಾಡಬಹುದು.
ಖರ್ಜೂರ ಮತ್ತು ಹಾಲು: ಹಾಲು ಮತ್ತು ಖರ್ಜೂರದಂತಹ ಕಬ್ಬಿಣದ ಅಧಿಕವಿರುವ ಆಹಾರಗಳೊಂದಿಗೆ ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರವನ್ನು ನೀವು ಬೆರೆಸಿದಾಗ, ಕ್ಯಾಲ್ಸಿಯಂ ಕಬ್ಬಿಣದ ಅಂಶ ದೇಹ ಸೇರುವಿಕೆಯನ್ನು ತಡೆಯುತ್ತದೆ. ಹಾಲಿನಲ್ಲಿರುವ ಕ್ಯಾಲ್ಸಿಯಂ ಖರ್ಜೂರದಿಂದ ಕಬ್ಬಿಣವನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯಕ್ಕೆ ಅಡ್ಡಿಪಡಿಸುತ್ತದೆ. ಇದು ಆಹಾರದಿಂದ ಒಟ್ಟಾರೆ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ.
ಐಸ್ ಕ್ರೀಮ್ ಮತ್ತು ಗುಲಾಬ್ ಜಾಮೂನ್: ಬಿಸಿ ಮತ್ತು ತಣ್ಣನೆಯ ಆಹಾರವು ಒಟ್ಟಿಗೆ ಚೆನ್ನಾಗಿರುವುದಿಲ್ಲ. ನೀವು ಬಿಸಿ ಆಹಾರವನ್ನು ಸೇವಿಸಿದಾಗ, ನಿಮ್ಮ ದೇಹವು ಜೀರ್ಣಕ್ರಿಯೆಗೆ ಸಹಾಯ ಮಾಡಲು ಮತ್ತು ಶಾಖವನ್ನು ಹೊರಹಾಕಲು ಹೊಟ್ಟೆಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಹೀಗಾಗಿ ಐಸ್‌ಕ್ರೀಮ್ ಸವಿದ ತಕ್ಷಣ ಬೇರೆ ಯಾವುದೇ ಬಿಸಿಯಾದ ಆಹಾರ ಸವಿಯಬಾರದು. ಅದರಲ್ಲೂ ಗುಲಾಬ್ ಜಾಮೂನ್ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
ಹಾಲು ಮತ್ತು ಮೀನು: ಆಯುರ್ವೇದದ ಪ್ರಕಾರ, ಹಾಲು ಮತ್ತು ಮೀನುಗಳು ಪರಸ್ಪರ ತದ್ವಿರುದ್ದವಾದ ಆಹಾರ ಕ್ರಮವಾಗಿದೆ. ಇದು ಆರೋಗ್ಯದ ಮೇಲೆ ಪ್ರಭಾವ ಬೀರುವ ಆಹಾರಗಳಾಗಿವೆ. ಹಾಲು ಮತ್ತು ಮೀನನ್ನು ಒಟ್ಟಿಗೆ ಸೇವಿಸುವುದರಿಂದ ಹೊಟ್ಟೆಯ ಆರೋಗ್ಯ ಹದಗೆಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications