Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಬಾದಾಮಿಯನ್ನು ನೆನೆ ಹಾಕಿ ಸಿಪ್ಪೆ ತೆಗೆದು ತಿನ್ನುವುದು ಒಳ್ಳೆಯದಾ ? ನ್ಯೂಟ್ರಿಷಿಯನಿಸ್ಟ್ ಏನು ಹೇಳಿದ್ದಾರೆ ಗೊತ್ತಾ?
ಬಾದಾಮಿ ಶರೀರಕ್ಕೆ ತುಂಬಾನೇ ಒಳ್ಳೆಯದು, ಆದರೆ ಈ ಬಾದಾಮಿಯನ್ನು ಶರೀರಕ್ಕೆ ತುಂಬಾ ಗುಣ ಸಿಗುವಂತೆ ತಿನ್ನುವುದು ಹೇಗೆ ಎಂಬ ಐಡಿಯಾ ಬಹುತೇಕರಿಗೆ ಇರಲ್ಲ, ಕೆಲವರು ಸಿಪ್ಪೆ ಸುಲಿದ ಬಾದಾಮಿ ಒಳ್ಳೆಯದು ಎಂದು ಹೇಳಿದರೆ ಇನ್ನು ಕೆಲವರು ಸಿಪ್ಪೆ ತೆಗೆಯದೆ ತಿನ್ನಬೇಕು ಎಂದು ಹೇಳುತ್ತಾರೆ. ಆದರೆ ಇದರ ಬಗ್ಗೆ ಪ್ರಸಿದ್ಧ ನ್ಯೂಟ್ರಿಷಿಯನಿಸ್ಟ್ ಲುಕೆ ಕೌಂಟಿನೋ ಇದರ ಬಗ್ಗೆ ಏನು ಹೇಳಿದ್ದಾರೆ ಎಂದು ನೋಡೋಣ ಬನ್ನಿ:

ತ್ವಚೆ ಸಹಿತ ತಿಂದರೆ
ಬಾದಾಮಿ ಸಿಪ್ಪೆ ತುಂಬಾ ಒಳ್ಳೆಯದು, ಇದರಲ್ಲಿ ನಾರಿನಂಶ ತುಂಬಾನೇ ಇದೆ, ಅಲ್ಲದೆ ಪೈಟೋ ಕೆಮಿಕಲ್ಸ್ ಹಾಗೂ ಆಂಟಿಆಕ್ಸಿಡೆಂಟ್ ತುಂಬಾನೇ ಇದೆ, ಹಾಗಾಗಿ ಬಾದಾಮಿ ಸಿಪ್ಪೆ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅಲ್ಲದೆ ಬಾದಾಮಿ ಸಿಪ್ಪೆ ಆಕ್ಸಿಟೇಟಿವ್ ಸ್ಟ್ರೆಸ್ (ಒತ್ತಡ) ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬಾದಾಮಿ ಸಿಪ್ಪೆಯಲ್ಲಿ ಪೈಟಿಕ್ ಆಮ್ಮ (phytic acid) ಇದು ಖನಿಜಾಂಶ, ಸತು, ಕಬ್ಬಿಣದದಂಶ, ಕ್ಯಾಲ್ಸಿಯಂ ಇವುಗಳನ್ನು ಹೊಂದಿದೆ. ಈ ಎಲ್ಲಾ ಗುಣಗಳು ಬಾದಾಮಿ ಸಿಪ್ಪೆಯಲ್ಲಿ ಮಾತ್ರ ದೊರೆಯುತ್ತದೆ.
ಅದೇ ಸಿಪ್ಪೆ ತೆಗೆದರೆ
ಬಾದಾಮಿ ನೆನೆ ಹಾಕಿ ತಿನ್ನುವ ಅಭ್ಯಾಸ ಹಲವರಲ್ಲಿ ಇರುತ್ತದೆ. ಆದರೆ ಹಾಗೆ ತಿನ್ನುವಾಗ ಸಿಪ್ಪೆ ತೆಗೆದು ತಿನ್ನುತ್ತಾರೆ, ಅಲ್ಲದೆ ಎನೆ ಹಾಕಿದ ಬಾದಾಮಿ ಸಿಪ್ಪೆ ಸಹಿತ ತಿನ್ನಲು ಟೇಸ್ಟ್ ಅನಿಸುವುದಿಲ್ಲ ಹಾಗಾಗಿ ಕೂಡ ಕೆಲವರು ಸಿಪ್ಪೆ ತೆಗೆದು ತಿನ್ನುತ್ತಾರೆ.
ಸಿಪ್ಪೆ ತೆಗೆದ ಬಾದಾಮಿಯಲ್ಲಿ ನಾರಿನಂಶ ಕಡಿಮೆ ಇರುತ್ತದೆ. ಯಾರಿಗೆ ಕಡಿಮೆ ನಾರಿನಂಶ ಸಾಕೋ ಅವರಿಗೆ ಅನುಕೂಲಕರವಾಗಿದೆ. ಸಿಪ್ಪೆತೆಗೆಯುವುದರಿಂದ ಆಂಟಿಆಕ್ಸಿಡೆಂಟ್ ಕೂಡ ಕಡಿಮೆಯಾಗುವುದು, ಅಲ್ಲದ ಫ್ಲೇವೋನಾಯ್ಡ್, ಫೀನೋಲಿಕ್ ಈ ಬಗೆಯ ಅಂಶ ಕಡಿಮೆಯಾಗುವುದು. ಅಲ್ಲದೆ ಖನಿಜಾಂಶ ಕಡಿಮೆಯಾಗುವುದು
ಈ ಪಿಕ್ಟಿಕ್ ಆಮ್ಲ ಎಂದರೇನು?
ಈ ಪಿಕ್ಟಿಕ್ ಆಮ್ಲ ಪೋಷಕಾಂಶವಾಗಿದ್ದು ಇದು ಅನೇಕ ನಟ್ಸ್‌ಗಳಲ್ಲಿ ಕಂಡು ಬರುವುದು, ಇದು ಬಾದಾಮಿಯ ಸಿಪ್ಪೆಯಲ್ಲಿಯೂ ಇದೆ, ಇದನ್ನು ತಿನ್ನುವುದರಿಂದ ಕೆಲವೊಂದು ದೊಡ್ಡ ಕಾಯಿಲೆ ಕೂಡ ತಡೆಗಟ್ಟಬಹುದು, ಇದು ಇತರ ಖನಿಜಾಂಶಗಳು ದೇಹವನ್ನು ಹೀರಿಕೊಳ್ಳುವಂತೆ ಮಾಡುತ್ತದೆ, ಅದೇ ಬಾದಾಮಿಯನ್ನು ನೆನೆ ಹಾಕಿದರೆ ಅದರಲ್ಲಿರುವ ಪಿಕ್ಟಿಕ್ ಆಮ್ಲ ಕಡಿಮೆಯಾಗುವುದು. ಅಲ್ಲದೆ ದೇಹವು ಸಂಪೂರ್ಣ ಖನಿಜಾಂಶ ಹೀರಿಕೊಳ್ಳುವುದಿಲ್ಲ, ಆದರೆ ನೀವು ಸಿಪ್ಪೆ ಸಹಿತ ತಿಂದ್ರೆ ಖನಿಜಾಂಶ ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಬಾದಾಮಿಯನ್ನು ನೆನೆ ಹಾಕಿ ತಿಂದ್ರೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು, ಇದು ಬೇಗನೆ ಜೀರ್ಣವಾಗುತ್ತದೆ, ಹಾಗಾಗಿ ಜೀರ್ಣಕ್ರಿಯೆ ಸಮಸ್ಯೆ ಇರುವವರು ಬಾದಾಮಿ ನೆನೆ ಹಾಕಿ ತಿನ್ನಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
