Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಈ 5 ಆಹಾರಗಳನ್ನು ತಿಂದ ತಕ್ಷಣವೇ ನೀರು ಕುಡಿದರೆ ಖಂಡಿತ ಒಳ್ಳೆಯದಲ್ಲ!
ಕೆಲವೊಂದು ಆಹಾರಗಳನ್ನು ಸೇವಿಸಿದಾಗ ತಿಂದ ತಕ್ಷಣ ನೀರು ಕುಡಿಯಬಾರದು, ಹಾಗೆ ಮಾಡಿದರೆ ಹೊಟ್ಟೆ ಉಬ್ಬಿದಂತಾಗುವುದು, ಗ್ಯಾಸ್ ಸಮಸ್ಯೆ, ಅಜೀರ್ಣೀ ಬಗೆಯ ಸಮಸ್ಯೆ ಕಂಡು ಬರುವುದು.
ಆದ್ದರಿಂದ ಕೆಲವೊಂದು ಆಹಾರಗಳನ್ನು ತಿಂದ ತಕ್ಷಣ ನೀರು ಕುಡಿಯಬಾರದು. ನಮಗೆ ಗೊತ್ತಿದ್ದು-ಗೊತ್ತಿಲ್ಲದೆ ಈ ತಪ್ಪು ಮಾಡುತ್ತಿರುತ್ತೇವೆ, ಅದರಲ್ಲೂ ಇಲ್ಲಿ ನೀಡಿರುವ ಆಹಾರಗಳ ಜೊತೆಗೆ ನಾವು ಆಹಾರವನ್ನು ಸೇವಿಸಿಯೇ ಸೇವಿಸುತ್ತೇವೆ, ಇನ್ನು ಮುಂದೆ ಆ ತಪ್ಪುಗಳನ್ನು ಮಾಡದಿರಿ
ಈ ಆಹಾರಗಳು ಆರೋಗ್ಯಕರವಾದ ಆಹಾರವೇ ಆಗಿದ್ದರೂ ನೀರು ಹಾಗೂ ಈ ಆಹಾರವನ್ನು ಜೊತೆಯಾಗಿ ಸೇವಿಸಿದರೆ ಖಂಡಿತ ಆರೋಗ್ಯ ಸಮಸ್ಯೆ ಉಂಟಾಗುವುದು:

ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ನಾರಿನಂಶವಿದೆ. ಇದರ ಜೊತೆಗೆ ನೀರು ಕೂಡ ಕುಡಿದರೆ ಅಜೀರ್ಣ ಸಮಸ್ಯೆ ಉಂಟಾಗುವುದು, ಜೀರ್ಣಕ್ರಿಯೆ ತುಂಬಾ ನಿಧಾನವಾಗುವುದು, ಇದರಿಂದ ಗ್ಯಾಸ್ಟ್ರಿಕ್, ಹೊಟ್ಟೆನೋವು ಈ ಬಗೆಯ ಸಮಸ್ಯೆ ಉಂಟಾಗಬಹುದು. ಆದ್ದರಿಂದ ನೀವು ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿಯಬೇಡಿ. ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿಯುವ ಅಭ್ಯಾಸ ಬಿಡಿ, ಇದುವೇ ನಿಮ್ಮಲ್ಲಿ ಅಸ್ವಸ್ಥಕ್ಕೆ ಕಾರಣವಾಗಬಹುದು.
ಮೊಸರು
ಮೊಸರು ಆರೋಗ್ಯಕ್ಕೆ ಒಳ್ಳೆಯದು, ಇದರಲ್ಲಿ ಪ್ರೊಬಯೋಟಿಕ್ ಅಂಶವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು, ಆದರೆ ಮೊಸರು ತಿಂದ ತಕ್ಷಣ ನೀರು ಕುಡಿದರೆ ಅದರಲ್ಲಿರುವ ಪ್ರೊಬಯೋಟಿಕ್ ಅಂಶ ವ್ಯರ್ಥವಾಗುವುದು. ಆದರೆ ಆಹಾರ ಸೇವಿಸುವಾಗ ಮೊಸರು ಸೇವಿಸಿ, ತಕ್ಷಣವೇ ನೀರು ಕುಡಿಯಬೇಡಿ, ಮೊಸರು ಸೇವಿಸಿ ಕನಿಷ್ಠ ಅರ್ಧ ಗಂಟೆಯಾದರೂ ಗ್ಯಾಪ್ ನೀಡಿ, ಹೀಗೆ ಮಾಡುವುದರಿಂದ ಮೊಸರಿನಲ್ಲಿರುವ ಪ್ರೀಬಯೋಟಿಕ್ ನಿಮ್ಮ ದೇಹವನ್ನು ಸೇರುವುದು. ಪ್ರೀಬಯೋಟಿಕ್ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.
ಸಿಟ್ರಸ್ ಹಣ್ಣುಗಳು
ಕಿತ್ತಳೆ, ದ್ರಾಕ್ಷಿ ಮುಂತಾದ ಸಿಟ್ರಸ್ ಹಣ್ಣುಗಳಲ್ಲಿ ನಿರಿನಂಶ ಕೂಡ ಇರುತ್ತದೆ, ಆದ್ದರಿಂದ ಇವುಗಳನ್ನು ತಿಂದ ತಕ್ಷಣ ನೀರು ಕುಡಿಯಬೇಕಾದ ಅಗ್ಯತವಿಲ್ಲ. ಒಂದು ವೇಳೆ ಸಿಟ್ರಸ್ ಹಣ್ಣುಗಳನ್ನು ತಿಂದಾಗ ಅದರ ಜೊತೆಗೆ ನೀರು ಕುಡಿದರೆ ಇದರಿಂದ ತೊಂದರೆ ಉಂಟಾಗುವುದು. ನೀವು ಈ ಹಣ್ಣುಗಳನ್ನು ತಿಂದಾದ ಮೇಲೆ ಕನಿಷ್ಠ ಒಂದು ಗಂಟೆಯ ನಂತರ ನೀರು ಕುಡಿಯುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ನೀವು ಹಣ್ಣುಗಳನ್ನು ಆಹಾರ ತಿಂದ ತಕ್ಷಣವೇ ಸೇವಿಸಿಬೇಡಿ, ಕನಿಷ್ಠ ಒಂದು ಗಂಟೆ ಬಿಟ್ಟು ತಿಂದರೆ ಹಣ್ಣಿನಲ್ಲಿರುವ ಪೋಷಕಾಂಶ ನಿಮ್ಮ ದೇಹವನ್ನು ಸೇರುವುದು
ಅನ್ನ
ಅನ್ನ ತಿನ್ನುವಾಗ ಅದರ ಜೊತೆಗೆ ನೀರು ಕುಡಿಯುವ ಅಭ್ಯಾಸ ತುಂಬಾ ಜನರಿಗಿದೆ, ಆದರೆ ಇದು ಆರೋಗ್ಯಕರವಾದ ಅಭ್ಯಾಸವಿಲ್ಲ, ನೀವು ಆಹಾರ ಸೇವಿಸಿದ ಮೇಲೆ ಕನಿಷ್ಠ 15 ನಿಮಿಷವಾದರೂ ಗ್ಯಾಪ್ ನೀಡಿ, ನಂತರವಷ್ಟೇ ನೀರು ಕುಡಿದರೆ ಒಳ್ಳೆಯದು. ಅನ್ನದ ಆಹಾರ ಯಾವುದೇ ಆಗಿರಲಿ ಪಲಾವ್, ಚಿತ್ರಾನ್, ಪುಳಿಯೊಗರೆ ಹೀಗೆ ಯಾವುದೇ ಬಗೆಯ ಆಹಾರವಾಗಲಿ ನೀವು ಅವುಗಳ ಜೊತೆಗೆ ನೀರು ಸೇವಿಸಬೇಡಿ. ಆಹಾರ ತಿಂದ ಮೇಲೆ ಸ್ವಲ್ಪ ಹೊತ್ತು ನೀರು ಕುಡಿಯಿರಿ.
ಮಸಾಲೆ ಪದಾರ್ಥ
ನಾವು ಸ್ವಲ್ಪ ಖಾರವಾದರೆ ನೀರು ಕುಡಿಯುತ್ತೇವೆ, ಆದರೆ ಮಸಾಲೆ ಹಾಕಿದ ಆಹಾರ ಸೇವಿಸುವಾಗ ಜೊತೆ-ಜೊತೆಯಲ್ಲಿಯೇ ನೀರು ಕುಡಿಯಬಾರದು. ನೀವು ಖಾರ ಅನಿಸಿ ನೀರು ಕುಡಿದಾಗ ಉರಿ ಸ್ವಲ್ಪ ಹೆಚ್ಚಾಗುವುದು. ಈ ರೀತಿ ಖಾರ ಅನಿಸಿದಾಗ ನೀವು ಮೊಸರು ಅಥವಾ ಹಾಲು ಸೇವಿಸಿ. ಖಾರ ಅನಿಸಿದಾಗ ನೀರು ಕುಡಿದರೆ ನಾಲಗೆಯಲ್ಲಿ ಖಾರ ಹೆಚ್ಚಾಗುವುದು.
ಕೊನೆಯದಾಗಿ
ಈ ಮೇಲಿನ ಆಹಾರಗಳನ್ನು ತಿಂದ ತಕ್ಷಣವೇ ನೀರು ಕುಡಿಯಬೇಡಿ, ಬಾಳೆಹಣ್ಣು, ಮೊಸರು, ಹಣ್ಣುಗಳನ್ನು ತಿಂದಾಗ ನೀರು ಕುಡಿಯಬೇಕೆನಿಸುವುದಿಲ್ಲ, ಸ್ವಲ್ಪ ಹೊತ್ತು ಕಾಯಬಹುದು, ಅದ್ದರಿಂದ ಅಯ್ಯೋ ನೀರು ಕುಡಿದಿಲ್ಲವೆಂದರೆ ಗಂಟಲು ಕಟ್ಟುತ್ತೆ ಎಂಬ ಆತಂಕ ಬೇಡ ನಿಮಗೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
