Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಷ್ಟ್ರೀಯ ಅಪಸ್ಮಾರ ದಿನ: ಮೂರ್ಛೆ ರೋಗದ ಬಗ್ಗೆ ಈ 10 ಸಂಗತಿ ಗೊತ್ತಾ?
ನವೆಂಬರ್ 17ನ್ನು ರಾಷ್ಟ್ರೀಯ ಅಪಸ್ಮಾರ ಅಥವಾ ಮೂರ್ಛೆ ದಿನವನ್ನು ಆಚರಿಸಲಾಗುವುದು. ಮೂರ್ಛೆ ರೋಗದ ಬಗ್ಗೆ ಜಾಗೃತಿ ಮೂಡಿಲು ಈ ದಿನವನ್ನು ಆಚರಿಸಲಾಗುವುದು. ಹಲವರಿಗೆ ಮೂರ್ಛೆ ರೋಗದ ಸಮಸ್ಯೆ ಇರುತ್ತದೆ, ಕೆಲವರಿಗೆ ಮೂರ್ಛೆ ರೋಗದ ಬಗ್ಗೆ ತಪ್ಪು ಕಲ್ಪನೆ ಇರುತ್ತದೆ, ಮೂರ್ಛೆ ರೋಗದ ಬಗ್ಗೆ ನಿಮ್ಮ ಸುತ್ತಲು ಇರುವವರಿಗೆ ಅರಿವು ಮೂಡಿಸಲು ಈ 10 ಅಂಶಗಳು ಸಹಾಯವಾದೀತು ನೋಡಿ:

ಮೂರ್ಛೆ ರೋಗ ಸಾಮಾನ್ಯವಾದದ್ದು
ಶೇ 1.2ರಷ್ಟು ಜನರಿಗೆ ಮೂರ್ಛೆ ರೋಗದ ಸಮಸ್ಯೆ ಇರುತ್ತದೆ, ವಿಶ್ವದಲ್ಲಿ 65 ಮಿಲಿಯನ್ ಜನರು ಮೂರ್ಛೆ ರೋಗದ ಸಮಸ್ಯೆ ಹೊಂದಿದ್ದಾರೆ.
ಪ್ರತೀ 26ರಲ್ಲಿ ಒಬ್ಬರಿಗೆ ಈ ಮೂರ್ಛೆ ರೋಗದ ಸಮಸ್ಯೆ ಕಂಡು ಬರುತ್ತದೆ. ಕೆಲವರಿಗೆ ಹುಟ್ಟಿದಾಗಿನಿಂದ ಆ ಸಮಸ್ಯೆ ಇದ್ದರೆ ಇನ್ನು ಕೆಲವರಿಗೆ ಮೆದುಳಿಗೆ ಪೆಟ್ಟಾದಾಗ, ಪಾರ್ಶ್ವವಾಯುವಾದಾಗ, ಏನಾದರೂ ಆಘಾತವಾದಾಗ ಈ ಮೂರ್ಛೆ ರೋಗದ ಸಮಸ್ಯೆ ಉಂಟಾಗುತ್ತದೆ.
ಎಲೆಕ್ಟ್ರಿಕಲ್ ಬ್ರೈನ್ ಸಿಗ್ನಲ್ ಸರಿಯಾಗಿ ರವಾನೆಯಾಗದೆ ಇದ್ದಾಗ
ನಮ್ಮ ಮೆದುಳು ನಮ್ಮ ದೇಹದ ಅಂಗಾಂಗಗಳು ಏನು ಕೆಲಸ ಮಾಡಬೇಕಾಗುತ್ತದೆ ಎಂಬ ಸೂಚನೆಯನ್ನು ರವಾನಿಸುತ್ತಲೇ ಇರುತ್ತದೆ, ಆದರೆ ಮೂರ್ಛೆ ರೋಗ ಉಂಟಾದಾಗ ನಮ್ಮ ಮೆದುಳಿನ ಸೂಚನೆಗಳಿಗೆ ಅಡ್ಡಿಯಾಗುತ್ತದೆ, ಇದರಿಂದ ವ್ಯಕ್ತಿಯ ದೇಹದ ಸ್ವಾಧೀನ ತಪ್ಪುವುದು.
ಮೂರ್ಛೆ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ
ಮೂರ್ಛೆ ರೋಗ ಅಂಟು ರೋಗವಲ್ಲ, ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ.
ಮೂರ್ಛೆ ರೋಗದಲ್ಲಿ ಹಲವು ವಿಧಗಳಿವೆ
ಮೂರ್ಛೆ ರೋಗದಲ್ಲಿ ಹಲವು ವಿಧಗಳಿದ್ದು ಅದಕ್ಕೆ ಚಿಕಿತ್ಸೆ ಕೂಡ ಭಿನ್ನವಾಗಿರುತ್ತದೆ. ಕೆಲವರಿಗೆ ಯಾವಗಾದರೂ ಒಮ್ಮೆ ಮೂರ್ಛೆ ರೋಗ ಬಂದರೆ ಇನ್ನು ಕೆಲವರಿಗೆ ಪದೇ ಪದೇ ಕಾಡುತ್ತಿರುತ್ತದೆ. ಈ ರೀತಿ ಮೂರ್ಛೆ ರೋಗ ಬಂದಾಗ ಅದನ್ನು ಮ್ಯಾನೇಜ್ ಮಾಡುವುದು ಹೇಗೆ ಎಂಬುವುದು ಮನೆಯವರಿಗೆ ಅಥವಾ ಅವರ ಜೊತೆಯಲ್ಲಿ ಇರುವವರಿಗೆ ತಿಳಿದಿರಬೇಕು.
ಮೂರ್ಛೆ ರೋಗವಿಲ್ಲದಿದ್ದರೂ ಮೂರ್ಛೆ ಹೋಗಬಹುದು
ದೇಹದ ರಕ್ತದಲ್ಲಿ ಸಕ್ಕರೆಯಂಶ ಕಡಿಮೆಯಾದರೆ, ನಿರ್ಜಲೀಕರಣ ಉಂಟಾದರೆ, ಯಾವುದಾದರೂ ಮಾದಕ ವಸ್ತುಗಳನ್ನು ಸೇವಿಸಿದರೆ ಮೂರ್ಛೆ ರೋಗವಿಲ್ಲದಿದ್ದರೂ ಮೂರ್ಛೆ ಬರುವುದು.
ಹಲವು ಕಾರಣಗಳಿಂದ ಮೂರ್ಛೆ ರೋಗಿಗಳು ಮೂರ್ಛೆ ಹೋಗಬಹುದು
ಕೆಲವೊಂದು ಪ್ರಖರ ಲೈಟ್ಸ್ ಕಣ್ಣಿಗೆ ಬಿದ್ದಾಗ ಮೂರ್ಛೆ ರೋಗ ಬರಬಹುದು. ಮಾನಸಿಕ ಒತ್ತಡ, ಸುಸ್ತು, ಮೂರ್ಛೆ ರೋಗಕ್ಕೆ ತೆಗೆದುಕೊಳ್ಳಬೇಕಾದ ಔಷಧ ತೆಗೆದುಕೊಳ್ಳಲು ಮರೆತು ಹೋದರೆ ಮೂರ್ಛೆ ರೋಗ ಉಂಟಾಗುವುದು.
ಎಲ್ಲಾ ಮೂರ್ಛೆಗೆ ತಕ್ಷಣ ವೈದ್ಯಕೀಯ ನೆರವು ಬೇಕಾಗಿಲ್ಲ
ಕೆಲವೊಂದು ಘಟನೆಯಿಂದ ಮೂರ್ಛೆ ರೋಗ ಬಂದರೆ ಸ್ವಲ್ಪ ಹೊತ್ತಿಗೆ ಸರಿಯಾಗುವುದು, ಆದರೆ ಒಂದೇ ದಿನದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಮೂರ್ಛೆ ಬಂದರೆ ಕೂಡಲೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು.
* ಮೂರ್ಛೆ ರೋಗ ಬಂದಾಗ ಅವರು ಸರಿ ಹೋಗುವವರೆಗೆ ಅವರ ಜೊತೆಯೇ ಇರಬೇಕು
* ಗಾಯವಾಗುವ ವಸ್ತುಗಳಿಂದ ದೂರ ಮಲಗಿಸಿ
ಮೂರ್ಛೆ ಹೋದವರ ಬಾಯಿಗೆ ಏನು ಹಾಕಬೇಡಿ
ಕೆಲವರು ಮೂರ್ಛೆ ಹೋದವರು ನಾಲಗೆ ಕಚ್ಚಿ ನುಂಗುತ್ತಾರೆ ಎಂದು ಏನಾದರೂ ವಸ್ತು ಬಾಯಿಗೆ ಇಡುತ್ತಾರೆ, ಆದರೆ ಆ ರೀತಿ ಹಾಕಬೇಡಿ.
ಮೂವರಲ್ಲಿ ಒಬ್ಬರಿಗೆ ಔಷಧ ತೆಗೆದರೂ ಮೂರ್ಛೆ ಬರುವುದು
ಮೂರ್ಛೆ ರೋಗ ಇರುವವರಿಗೆ ಔಷಧವನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗುವುದು, ಆದರೂ ಮೂರ್ಛೆ ಬಂದರೆ ವೈದ್ಯರಿಗೆ ಹೇಳಿ ಚಿಕಿತ್ಸೆಯನ್ನು ಬದಲಾಯಿಸಬೇಕು.
ಅಪಸ್ಮಾರದಿಂದ ಬಳಲುತ್ತಿರುವವರು ಸಾಮಾನ್ಯ ಬದುಕು ಸಾಗಿಸಬಹುದೇ?
ಮೂರ್ಛೆ ರೋಗದಿಂದ ಬಳಲುತ್ತಿರುವವರು ಸಾಮಾನ್ಯ ಬದುಕು ನಡೆಸಬಹುದು, ಆದರೆ ಮೂರ್ಛೆ ರೋಗಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕು. ಜೊತೆಗೆ ಸಮಾಜ ಇವರನ್ನು ನೋಡುವ ದೃಷ್ಟಿ ಬದಲಾಗಬೇಕು. ಕೆಲವರು ಇದನ್ನು ದೊಡ್ಡ ಕಾಯಿಲೆ ರೀತಿ ಭಾವಿಸುತ್ತಾರೆ, ಆದರೆ ಆ ರೀತಿ ಭಾವಿಸಬಾರದು, ಪೋಷಕರು, ಅವರ ಜೊತೆ ಬಾಳುವವರು ಅವರನ್ನು ಅರ್ಥಮಆಡಿಕೊಳ್ಳಬೇಕು.
ಮೂರ್ಛೆ ರೋಗಕ್ಕೆ ಚಿಕಿತ್ಸೆ
ಮೂರ್ಛೆ ರೋಗಕ್ಕೆ ಮಾತ್ರೆಯನ್ನು ನೀಡುತ್ತಾರೆ ಅಥವಾ ಶಸ್ತ್ರ ಚಿಕಿತ್ಸೆ ಮೂಲಕ ಮೂರ್ಛೆ ರೋಗಕ್ಕೆ ಚಿಕಿತ್ಸೆ ನೀಡಲಾಗುವುದು.
ಅಪಸ್ಮಾರ ಇರುವವರು ಈ ರೀತಿ ಗಮನ ಹರಿಸಬೇಕು
* ವೈದ್ಯರು ಸೂಚಿಸಿದ ಪ್ರಮಾಣದಲ್ಲಿ ಚಿಕಿತ್ಸೆ ಪಡೆಯಿರಿ
* ಒಂದು ದಿನವೂ ಮಾತ್ರೆ ತೆಗೆದುಕೋಲ್ಳುವುದು ಮರೆಯಬಾರದು
* ತುಂಬಾ ನಿದ್ದೆ ಕೆಡಬಾರದು
* ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು
* ಕೆಟ್ಟ ಚಟಗಳಿರಬಾರದು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications