Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
41 ರ ಪ್ರಾಯದಲ್ಲಿಯೂ ಎಂ.ಎಸ್ ಧೋನಿ ಇಷ್ಟೊದು ಫಿಟ್ ಆಗಿರೋದು ಹೇಗೆ?
ಕ್ಯಾಪ್ಟನ್ ಕೂಲ್ ಅಂದ ತಕ್ಷಣ ನಮಗೆ ನೆನಪಿಗೆ ಬರೋದು ಮಹೇಂದ್ರ ಸಿಂಗ್ ಧೋನಿ. ಸದ್ಯ ಮಾಹಿ ಕ್ಯಾಪ್ಟನ್ಸಿಯಿಂದ ಕೆಳಗಿಳಿದಿದ್ರು ಕೂಡ ಈಗಲೂ ಜನ ಅವರನ್ನು ಕ್ಯಾಪ್ಟನ್ ಕೂಲ್ ಅಂತಲೇ ಕರೆಯುತ್ತಾರೆ. ಯಾಕಂದ್ರೆ ಎಂ.ಎಸ್ ಧೋನಿ ಕ್ಯಾಪ್ಟನ್ ಆಗಿದ್ದಾಗ ಎಂತಹ ಕಠಿಣ ಪರಿಸ್ಥಿತಿಯನ್ನು ಕೂಲ್ ಆಗಿ ನಿಭಾಯಿಸಿದ್ರು. ಧೋನಿಯ ಈ ಮ್ಯಾನರಿಸಂನಿಂದಾನೇ ಮೈದಾನದಲ್ಲಿ ಅನೇಕ ರೆಕಾರ್ಡ್‌ಗಳನ್ನು ಕೂಡ ಬ್ರೇಕ್ ಮಾಡಿದ್ದಾರೆ. 41 ರ ಹರೆಯದಲ್ಲೂ ಧೋನಿಯ ಫಿಟ್‌ನೆಸ್‌ಗೆ ಸರಿಸಾಟಿ ಮತ್ತೊಬ್ಬರಿಲ್ಲ. ಅಷ್ಟಕ್ಕು ಮಾಹಿ ಇಷ್ಟೊಂದು ಕೂಲ್ ಆಗಿರೋದು ಹೇಗೆ? ಎಂ.ಎಸ್ ಧೋನಿ ಫಿಟ್ ಆಂಡ್ ಫೈನ್ ಆಗಿರೋದಕ್ಕೆ ಏನು ಮಾಡ್ತಾರೆ? ಅವರ ಡಯೇಟ್ ಪ್ಲಾನ್ ಹೇಗಿರುತ್ತೆ ಅನ್ನೋದನ್ನ ತಿಳಿದುಕೊಳ್ಳೋಣ.

ಎಂ.ಎಸ್ ಧೋನಿ ಫಿಟ್‌ನೆಸ್‌ಗಾಗಿ ಏನು ಮಾಡ್ತಾರೆ?
1. ಕ್ರಿಕೆಟ್ ಜೊತೆಗೆ ಇತರ ಕ್ರೀಡೆಗಳಲ್ಲೂ ಸಕ್ರೀಯರಾಗಿರ್ತಾರೆ
ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಮಾತ್ರವಲ್ಲದೇ ಇತರ ಕ್ರೀಡೆಗಳನ್ನೂ ಕೂಡ ತುಂಬಾನೇ ಇಷ್ಟ ಪಟ್ಟು ಆಡ್ತಾರಂತೆ. ಹೆಚ್ಚಾಗಿ ಅವರು ಬ್ಯಾಡ್ಮಿಂಟನ್ ಹಾಗೂ ಫುಟ್‌ಬಾಲ್ ಆಡೋದಕ್ಕೂ ಇಷ್ಟ ಪಡುತ್ತಾರೆ. ಅವರ ಪ್ರಕಾರ ಈ ಆಟಗಳು ಏಕಾಗ್ರತೆಯನ್ನು ಹೆಚ್ಚು ಮಾಡುವುದರ ಜೊತೆಗೆ ನಮ್ಮ ಕಣ್ಣು ಹಾಗೂ ಕಾಲುಗಳು ಚುರುಕಾಗುತ್ತೆ ಎಂದು ನಂಬಿದ್ದಾರೆ. ಹೀಗಾಗಿ ಇತರ ಕ್ರೀಡೆಗಳಲ್ಲೂ ಮಾಹಿ ಸಕ್ರೀಯರಾಗಿರ್ತಾರೆ.
2. ಪ್ರೋಟಿನ್ ಡ್ರಿಂಕ್ ಜೊತೆಗೆ ಫ್ರೆಶ್ ಜ್ಯೂಸ್
ಆರೋಗ್ಯವಾಗಿ ಹಾಗೂ ಫಿಟ್ ಆಗಿರಲು ಪ್ರೋಟಿನ್ ಡ್ರಿಂಕ್ ಸೇವನೆ ಮಾಡೋದು ತುಂಬಾನೇ ಒಳ್ಳೆಯದು. ಮಾಹಿ ವರ್ಕ್‌ಔಟ್ ಹಾಗೂ ಪ್ರ್ಯಾಕ್ಟಿಕ್‌ಗಾಗಿ ಮೈದಾನಕ್ಕೆ ಹೋಗುವ ಮೊದಲು ಪ್ರೋಟಿನ್ ಡ್ರಿಂಕ್ ಸೇವನೆ ಮಾಡ್ತಾರಂತೆ. ಇದ್ರ ಜೊತೆಗೆ ಫ್ರೆಶ್ ಜ್ಯೂಸ್ ಕುಡಿಯೋದನ್ನ ಮಾಹಿ ರೂಡಿ ಮಾಡಿಕೊಂಡಿದ್ದಾರೆ. ಸೋಡಾ ಅಥವಾ ಸಾಫ್ಟ್‌ಡ್ರಿಂಕ್ ಬದಲು ಹಣ್ಣುಗಳ ಜ್ಯೂಸ್ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು ಅಂತಾರೆ ಎಂ.ಎಸ್ ಧೋನಿ.
3. ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸ್ತಾರೆ
ಎಂ.ಎಸ್ ಧೋನಿಗೆ ಚಿಕ್ಕವರಿದ್ದಾಗಿನಿಂದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಬಹಳ ಇಷ್ಟ ಪಟ್ಟು ತಿನ್ನುತ್ತಿದ್ದರಂತೆ. ಈಗಲೂ ಕೂಡ ಪ್ರತಿನಿತ್ಯ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಮಾಹಿ ಹೆಚ್ಚಾಗಿ ಸೇವಿಸ್ತಾರಂತೆ. ಹಾಲಿನಲ್ಲಿರುವ ಕ್ಯಾಲ್ಸಿಯಂ ಅಂಶ ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರ ಜೊತೆಗೆ ಎಂ.ಎಸ್ ಧೋನಿ ಹೆಚ್ಚಾಗಿ ಮನೆ ಊಟವನ್ನೇ ಸೇವಿಸೋದಕ್ಕೆ ಇಷ್ಟ ಪಡುತ್ತಾರಂತೆ. ಅದ್ರಲ್ಲೂ ಅನ್ನ-ಬೇಳೆ ಸಾರು ಮಾಹಿಯ ಅಚ್ಚುಮೆಚ್ಚಿನ ದಿನ ನಿತ್ಯದ ಆಹಾರ.
ಮಾಹಿ ವರ್ಕ್‌ಔಟ್ ಹೇಗಿರುತ್ತೆದ್ರೆ?
ಎಂ.ಎಸ್ ಧೋನಿ ಎಲ್ಲಾ ಆವೃತ್ತಿಯ ಪಂದ್ಯಗಳಿಗೂ ನಿವೃತ್ತಿಯನ್ನು ಘೋಷಿಸಿದ್ರು ಕೂಡ ಈಗಲೂ ಕೂಡ ಮಾಹಿ ಮೈದಾನಕ್ಕೆ ಹೋಗಿ ಅಭ್ಯಾಸ ನಡೆಸ್ತಾರಂತೆ. ಇದಾದ ಬಳಿಕ ಜಿಮ್‌ನಲ್ಲಿ ಬೆವರಿಳಿಸ್ತಾರಂತೆ. ಆಟ ಆಡದಿದ್ರು ಕೂಟ ಆಟಗಾರನಾದವನಿಗೆ ಫಿಟ್‌ನೆಸ್ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಹೀಗಾಗಿ ಮಾಹಿ ಕೆಲವೊಂದು ವ್ಯಾಯಾಮಗಳನ್ನು ತಪ್ಪದೇ ಮಾಡ್ತಾರಂತೆ. ಹಾಗಾದ್ರೆ ಆ ವ್ಯಾಯಾಮಗಳು ಯಾವುದು ಅನ್ನೋದನ್ನ ತಿಳಿಯೋಣ.
* ಮೆಷಿನ್ ಚೆಸ್ಟ್ ಪ್ರೆಸ್
* V- ಗ್ರಿಪ್ ಲ್ಯಾಟರಲ್ ಪುಲ್‌ಡೌನ್
* ಲ್ಯಾಟೆರಲ್ ಪುಲ್‌ಡೌನ್
* ಪ್ರೋನ್ ಡಂಬಲ್ಸ್ ರೋವಿಂಗ್
* ಅಲ್ಟರ್ನೆಟ್ ದಂಬಲ್ ಕರ್ಲ್
* ಸಿಂಗಲ್ ಲೆಗ್ ಡೆಡ್‌ಲಿಫ್ಟ್
ಎಂ.ಎಸ್ ಧೋನಿ ದಿನನಿತ್ಯ ಏನು ಸೇವಿಸ್ತಾರೆ?
41 ರ ಹರೆಯದಲ್ಲೂ ಫಿಟ್ ಆಗಿರೋದು ಅಂದ್ರೆ ತಮಾಷೆಯ ವಿಚಾರವೇ ಅಲ್ಲ. ಸದ್ಯ ಕ್ರಿಕೆಟ್‌ನ ಎಲ್ಲಾ ಆವೃತ್ತಿಗಳಿಂದ ನಿವೃತ್ತಿ ಘೋಷಿಸಿರುವ ಮಾಹಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡ್ತಿದ್ದಾರೆ. ಈಗಲೂ ಕೂಡ ಯುವಕರಿಗೆ ಟಕ್ಕರ್ ಕೊಡೋ ರೀತಿಯಲ್ಲಿ ಮಾಹಿ ಆಟವಾಡ್ತಾರೆ. ಮಾಹಿಯ ಈ ಸ್ಫೋಟಕ ಆಟಕ್ಕೆ ಕಾರಣ ಅವರು ಸೇವಿಸೋ ಆಹಾರ ಕೂಡ ಒಂದು ಅಂದ್ರೆ ತಪ್ಪಾಗೋದಿಲ್ಲ. ಹಾಗಾದ್ರೆ ಎಂ.ಎಸ್ ಧೋನಿ ದಿನ ನಿತ್ಯ ಯಾವ ರೀತಿಯ ಆಹಾರ ಸೇವಿಸ್ತಾರೆ ಅನ್ನೋದನ್ನು ತಿಳಿಯೋಣ.
* ಬೆಳಗ್ಗಿನ ಉಪಹಾರ : ಮಹೇಂದ್ರ ಸಿಂಗ್ ಧೋನಿ ಬೆಳಗ್ಗಿನ ಉಪಹಾರಕ್ಕೆ ಹಣ್ಣುಗಳು, ನಟ್ಸ್, ಹಾಲು, ಗೋಧಿಯಿಂದ ತಯಾರಿಸಿದ ಬ್ರೆಡ್ ಅಥವಾ ಪರೋಟ.
* ಮಧ್ಯಾಹ್ನದ ಊಟ : ಮಧ್ಯಾಹ್ನದ ಊಟಕ್ಕೆ ಚಪಾಯಿಯ ಜೊತೆಗೆ ಬೇಳೆ ಸಾರು ಅಥವಾ ಕೋಳಿ ಸೇವಿಸುತ್ತಾರೆ. ಫೈಬರ್ ಹಾಗೂ ಪೋಷಕಾಂಶ ಭರಿತವಾದ ತರಕಾರಿಗಳ ಸಲಾಡ್ ಸೇವಿಸುತ್ತಾರೆ. ಕೆಲವೊಂದು ಸಲ ಚಪಾಯಿಯ ಬದಲಾಗಿ ಅನ್ನ ಸೇವಿಸುತ್ತಾರಂತೆ.
* ರಾತ್ರಿಯ ಊಟ : ರಾತ್ರಿ ಊಟಕ್ಕೆ ಚಪಾತಿ ಸೇವಿಸುತ್ತಾರೆ. ಜೊತೆಗೆ ತರಕಾರಿ ಹಾಗೂ ಹಣ್ಣುಗಳನ್ನು ತಿನ್ನುತ್ತಾರಂತೆ.
* ಇನ್ನೂ ವರ್ಕ್‌ಔಟ್‌ಗೂ ಮೊದಲು ಹಾಗೂ ವರ್ಕ್‌ಔಟ್ ನಂತರ ಪ್ರೋಟಿನ್ ಶೇಕ್ ಅಥವಾ ಹಣ್ಣುಗಳ ಜ್ಯೂಸ್ ಕುಡಿಯುತ್ತಾರಂತೆ. ಇನ್ನೂ ಸಂಜೆಯ ವೇಳೆ ಸ್ಯಾಂಡ್‌ವಿಚ್ ಸೇವನೆ ಮಾಡ್ತಾರಂತೆ.
ಮಹೇಂದ್ರ ಸಿಂಗ್ ಧೋನಿ ಇಷ್ಟೆಲ್ಲಾ ಕಟ್ಟು ನಿಟ್ಟಾಗಿ ಡಯೇಟ್ ಫಾಲೋ ಮಾಡ್ತಿರೋದ್ರಿಂದ ಈಗಲೂ ಅವರು ಫಿಟ್ ಆಗಿರೋದಕ್ಕೆ ಸಾಧ್ಯವಾಗಿರೋದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

