Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕರ್ನಾಟಕಕ್ಕೆ ಮುಂಗಾರಿನ ಆಗಮನ: ಈ 7 ಅಪಾಯಕಾರಿ ಕಾಯಿಲೆಗಳ ಇರಲಿ ಜಾಗ್ರತೆ
ಕರ್ನಾಟಕದ ಬಹುತೇಕ ಕಡೆ ಮಾನ್ಸೂನ್ ಆಗಮನವಾಗಿದೆ.. ತುಂತುರು ಮಳೆ ಇಳೆಗೆ ಬೀಳಲಾರಂಭಿಸುತ್ತಿದ್ದಂತೆ ವಾತಾವರಣದಲ್ಲಿ ಬದಲಾವಣೆಯಾಗುವುದು, ಇದರ ಪ್ರಭಾವ ನಮ್ಮ ಆರೋಗ್ಯದ ಮೇಲಾಗಲಿದೆ. ಆದ್ದರಿಮದ ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ತುಂಬಾನೇ ಎಚ್ಚರಿಕೆವಹಿಸಬೇಕು. ಇಷ್ಟು ದಿನ ಜನ ಸೆಕೆ ಅಂತ ಬೊಬ್ಬೆ ಹೊಡೆಯುತ್ತಿದ್ದರು. ಮಳೆ ಶುರುವಾಗುತ್ತಿದ್ದಂತೆ ಚಳಿ ಶುರುವಾಗುವುದು, ತಂಪಾದ ವಾತಾವರಣದಿಂದಾಗಿ ಕೆಮ್ಮು, ಶೀತ ಈ ಬಗೆಯ ಸಮಸ್ಯೆ ಕಂಡು ಬರುವುದು.
ಅದರಲ್ಲೂ ಮಳೆಗಾಲ ಬಂತೆಂದರೆ ಕೆಲವೊಂದು ಅಪಾಯಕಾರಿ ಕಾಯಿಲೆಗಳು ಕಾಣಿಸಿಕೊಳ್ಳುವುದು ಸರ್ವೇಸಾಮಾನ್ಯ, ಈ ಕುರಿತು ಎಚ್ಚರಿಕೆವಹಿಸಬೇಕು. ಮಳೆಗಾಲದಲ್ಲಿ ಈ 7 ಅಪಾಯಕಾರಿ ಕಾಯಿಲೆ ಬಗ್ಗೆ ಜಾಗ್ರತೆವಹಿಸಿ:

1. ಮಲೇರಿಯಾ:
ಅನಾಫಿಲಿಸ್ ಎಂಬ ಸೊಳ್ಳೆ ಕಚ್ಚುವುದರಿಂದ ಬರುವ ಕಾಯಿಲೆಯಾಗಿದೆ. ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಕೂಡ ಹೆಚ್ಚಾಗುವುದು. ಮಲೇರಿಯಾ ಬಂದಾಗ ಜ್ವರ, ಮೈ ಕೈ ನೋವು, ಚಳಿ-ಜ್ವರ, ಮೈ ಬೆವರುವುದು ಈ ಬಗೆಯ ಲಜ್ಷಣಗಳು ಕಂಡು ಬರುವುದು. ಮಲೇರಿಯಾ ಬಂದಾಗ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಅಪಾಯ.
ತಡೆಗಟ್ಟುವುದು ಹೇಗೆ: ಮಳೆಗಾಲದಲ್ಲಿ ಸೊಳ್ಳೆಗಳು ಕಚ್ಚದಂತೆ ಜಾಗ್ರತೆವಹಿಸಬೇಕು, ಸೊಳ್ಳೆ ಬತ್ತಿಗಳನ್ನು ಬಳಸಿ, ತುಂಬು ತೋಳಿನ ಬಟ್ಟೆ ಧರಿಸಿ, ಮನೆಯ ಸುತ್ತ-ಮುತ್ತ ಮಳೆ ನೀರು ನಿಲ್ಲದಂತೆ ಎಚ್ಚರವಹಿಸಿ.
2. ಚಳಿ-ಜ್ವರ:
ಮಳೆಗಾಲದಲ್ಲಿ ಚಳಿ-ಜ್ವರದ ಸಮಸ್ಯೆ ತುಂಬಾನೇ ಸಾಮಾನ್ಯ. ವೈರಲ್ ಸೋಂಕು, ಬ್ಯಾಕ್ಟಿರಿಯಾಗಳಿಂದಾಗಿ ಚಳಿಜ್ವರ ಕಂಡು ಬರುವುದು.
ತಡೆಗಟ್ಟುವುದು ಹೇಗೆ? ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಒಳ್ಳೆಯ ಆಹಾರಕ್ರಮ ಹಾಗೂ ವ್ಯಾಯಾಮದ ಕಡೆಗೆ ಗಮನಹರಿಸಿ.
3. ಡೆಂಗ್ಯೂ:
ಕರ್ನಾಟಕದಲ್ಲಿ ಡೆಂಗ್ಯೂ ಸಂಖ್ಯೆ ಹೆಚ್ಚಾಗುತ್ತಿದೆ. ಈಡೀಸ್ ಎಂಬ ಸೊಳ್ಳೆ ಕಚ್ಚುವುದರಿಂದ ಈ ಡೆಂಗ್ಯೂ ರೋಗ ಹರಡುವುದು. ಡೆಂಗ್ಯೂ ಬಂದಾಗ ಪ್ಲೇಟ್‌ಲೆಟ್ ಕಡಿಮೆಯಾಗುವುದರಿಂದ ಈ ಕಾಯಿಲೆಯನ್ನು ನಿರ್ಲಕ್ಷ್ಯ ಮಾಡಲೇಬಾರದು. ಜ್ವರ ಬಂದು 3 ದಿನವಾದರೂ ಕಡಿಮೆಯಾಗದಿದ್ದಾಗ ಡೆಂಗ್ಯೂ ಪರೀಕ್ಷೆ ಮಾಡಿಸಬೇಕು. ಜ್ವರ, ವಿಪರೀತ ತಲೆನೋವು, ಬಿಳಿ ರಕ್ತಕಣಗಳು ಕಡಿಮೆಯಾಗುವುದು, ಮೈ ಮೇಲೆ ಗುಳ್ಳೆಗಳು ಏಳುವುದು ಡೆಂಗ್ಯೂ ಜ್ವರದ ಲಕ್ಷಣವಾಗಿದೆ.
ತಡೆಗಟ್ಟುವುದು ಹೇಗೆ?
ಡೆಂಗ್ಯೂ ತಡೆಗಟ್ಟಲು ಕೂಡ ಸೊಳ್ಳೆಗಳು ಕಚ್ಚದಂತೆ, ಸೊಳ್ಳೆಗಳು ಮನೆ ಸುತ್ತ ಮೊಟ್ಟೆ ಹಾಕದಂತೆ ಎಚ್ಚರವಹಿಸಬೇಕು. ತುಂಬು ತೋಳಿನ ಬಟ್ಟೆ ಧರಿಸಿ. ಡೆಂಗ್ಯೂ ಅಧಿಕವಿರುವ ಕಡೆ ಓಡಾಡುವಾಗ ಸೊಳ್ಳೆ ನಿವಾರಕ ಕ್ರೀಮ್‌ಗಳನ್ನು ಬಳಸಿ.
4. ಚಿಕನ್ ಗುನ್ಯ
ಚಿಕನ್ ಗುನ್ಯ ಕೂಡ ಸೊಳ್ಳೆ ಕಚ್ಚುವುದರಿಂದ ಬರುವ ಕಾಯಿಲೆಯಾಗಿದೆ. ಚಿಕನ್ ಗುನ್ ಬಂದ್ರೆ ಕೈ-ಕಾಲುಗಳಲ್ಲಿ ನೋವು, ಜ್ವರ, ಸುಸ್ತು, ತಲೆಸುತ್ತು ಈ ಬಗೆಯ ಲಕ್ಷಣಗಳು ಕಂಡು ಬರುವುದು.
ತಡೆಗಟ್ಟುವುದು: ಚಿಕನ್ ಗುನ್ಯ ಕಾಯಿಲೆ ತಡೆಗಟ್ಟಲು ಸೊಳ್ಳೆ ಕಚ್ಚದಂತೆ ಜಾಗ್ರತೆವಹಿಸಿ.
5. ಟೈಫಾಯ್ಡ್:
ಕಲ್ಮಶವಾದ ನೀರು ಕುಡಿಯುವುದರಿಂದ, ಕಲುಷಿತ ಆಹಾರ ಸೇವನೆಯಿಂದ ಟೈಪಾಯ್ಡ್ ಉಂಟಾಗುವುದು.
ತಡೆಗಟ್ಟುವುದು ಹೇಗೆ:
ಆಹಾರವನ್ನು ಚೆನ್ನಾಗಿ ಬೇಯಿಸಿ ತಿನ್ನಿ. ಕುದಿಸಿದ ನೀರನ್ನು ಕುಡಿಯಿರಿ.
6. ಹೆಪಟೈಟಿಸ್ ಎ:
ಕಲುಷಿತ ನೀರು ಕುಡಿಯುವುದರಿಂದ ಉಂಟಾಗುವುದು. ಜ್ವರ, ವಾಂತಿ, ಮೈ ಮೇಲೆ ಗುಳ್ಳೆಗಳು ಏಳುವುದು ಹೆಪಟೈಟಿಸ್ ಲಕ್ಷಣವಾಗಿದೆ.
ತಡೆಗಟ್ಟುವುದು ಹೇಗೆ? : ಕುಡಿಯುವ ನೀರಿನ ಶುದ್ಧತೆ ಕಡೆಗೆ ಗಮನಹರಿಸಿ. ಕುದಿಸಿದ ನೀರನ್ನೇ ಕುಡಿಯಿರಿ.
7. ಲೆಪ್ಟೊಸ್ಪಿರೋಸಿಸ್:
ಇದು ಬ್ಯಾಕ್ಟಿರಿಯಾ ಸೋಂಕು ಆಗಿದ್ದು ಇದು ಪ್ರಾಣಿಗಳಾದ ಬೆಕ್ಕು, ನಾಯಿ, ಇಲಿ ಇವುಗಳಿಂದ ಮನುಷ್ಯನ ದೇಹಕ್ಕೆ ಹರಡುತ್ತದೆ. ಈ ಬ್ಯಾಕ್ಟಿರಿಯಾ ಸೋಂಕು ಇರುವ ಪ್ರಾಣಿಗಳು ನೀರಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದು ಆ ನೀರಿನ ಮೂಲಕ ನಡೆದಾಡಿದಾಗ ತ್ವಚೆಯಲ್ಲಿ ಗಾಯಗಳಿದ್ದರೆ ಅದರ ಮೂಲಕ ದೇಹಕ್ಕೆ ಬ್ಯಾಕ್ಟಿರಿಯಾ ಹೊಕ್ಕುತ್ತದೆ. ಮಳೆಗಾಲದಲ್ಲಿ ನಿಂತ ನೀರಿನಲ್ಲಿ ಆಡಬೇಡಿ, ನಡೆದಾಡಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
